ಹೈದರಾಬಾದ್: ನವೆಂಬರ್ 19 ಭಾರತೀಯರ ಪಾಲಿಗೆ ಕಹಿಯಾದ ದಿನ. ಈ ದಿನ ಟೀಮ್ ಇಂಡಿಯಾ 3ನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುತ್ತೆ ಎಂಬ 140 ಕೋಟಿಗೂ ಹೆಚ್ಚಿನ ಭಾರತೀಯರ ಕನಸು ಭಗ್ನಗೊಂಡಿತು. ಅಲ್ಲದೇ 20 ವರ್ಷ ಹಿಂದಿನ ಕಹಿ ನೆನಪನ್ನು ಮತ್ತೆ ನೆನೆಪಿಸಿದ ದಿನ ಕೂಡ. ಸರಿಯಾಗಿ 20 ವರ್ಷಗಳ ಹಿಂದೆ ಇದೇ ವಿಶ್ವಕಪ್ ಫೈನಲ್ನಲ್ಲಿ ಇದೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಅಲ್ಲೂ ಭಾರತ ಸೋಲನ್ನು ಕಂಡು ವಿಶ್ವಕಪ್ ಕೈಚೆಲ್ಲಿತ್ತು. ಇದೀಗ 2023ರಲ್ಲೂ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾಂಗರೂ ಪಡೆ ಮುಂದೆ ಮತ್ತೊಮ್ಮೆ ಭಾರತ ಮಂಡಿಯೂರಿ ಸೋಲನುಭವಿಸಿತು.
ಸರಣಿ ಉದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲೇ ಆಸೀಸ್ ವಿರುದ್ದ 6 ವಿಕೆಟ್ಗಳ ಗೆಲುವು ಸಾಧಿಸಿದ್ದ ಕಾರಣ ಫೈನಲ್ ಪಂದ್ಯದಲ್ಲೂ ಆಸೀಸ್ ಮಣಿಸಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿತ್ತು.
ಆದರೆ ಈ ಪಂದ್ಯದಲ್ಲಿ ಭಾರತದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಕೇವಲ 240 ರನ್ಗಳಿಗೆ ರೋಹಿತ್ ಪಡೆ ಸರ್ವಪತನ ಕಂಡು ಸಾಧರಣ ಗುರಿಯನ್ನು ನೀಡಿತ್ತು. ಕಾಂಗರೂ ಪಡೆ ಆರಂಭಿಕ ಆಘಾತ ಎದುರಿಸಿತಾದರೂ ಟ್ರಾವಿಸ್ ಹೆಡ್ ಮತ್ತು ಲ್ಯಾಬುಸ್ಚ್ಗೆನೆ ಕ್ರೀಸ್ನಲ್ಲಿ ನೆಲೆಯೂರಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
2003ರಲ್ಲೂ ಫೈನಲ್ ಪ್ರವೇಶಿಸಿದ್ದ ಭಾರತ ಟೂರ್ನಿ ಉದ್ದಕ್ಕೂ ಭರ್ಜರಿ ಪ್ರದರ್ಶನ ತೋರಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಜೊಹಾನ್ಸ್ಬರ್ಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಸೆಣಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಈ ಪಂದ್ಯದಲ್ಲೂ ಭಾರತ ಎಡವಿತ್ತು. ಆಸೀಸ್ ನೀಡಿದ್ದ 359 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಭಾರತ 234ಕ್ಕೆ ಸರ್ವಪತನ ಕಂಡು ವಿಶ್ವಕಪ್ ಕೈಚೆಲ್ಲಿತ್ತು.
ಈವೆರೆಗೂ ನಡೆದಿರುವ ಏಕದಿನ, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಪಿ, ಟೆಸ್ಟ್ ಚಾಂಪಿಯನ್ಸ್ ಟ್ರೋಪಿಗಳಿ ಒಟ್ಟು 9 ಬಾರಿ ಸೆಮಿಸ್ ಮತ್ತು ಫೈನಲ್ ಪ್ರವೇಶ ಮಾಡಿದೆ. 2014 ರಲ್ಲಿ ಟಿ-20 ವಿಶ್ವಕಪ್ ಫೈನಲ್, 2015 ರಲ್ಲಿ ಏಕದಿನ ವಿಶ್ವಕಪ್ ಸೆಮಿ ಫೈನಲ್, 2016 ಟಿ20 ವಿಶ್ವಕಪ್ ಸೆಮಿಸ್, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ರಲ್ಲಿ ವಿಶ್ವಕಪ್ ಸೆಮಿ, 2021 ರಲ್ಲಿ ವಿಶ್ವಟೆಸ್ಟ್ ಚಾಂಪಿಯನ್ ಫೈನಲ್, 2022ರಲ್ಲಿ T20 ವಿಶ್ವಕಪ್ ಸೆಮಿ, 2023 ರಲ್ಲಿ ವಿಶ್ವ ಚಾಂಪಿಯನ್ಸ್ ಟ್ರೋಫಿ ಫೈನಲ್, 2023 ರಲ್ಲಿ ಏಕದಿನ ವಿಶ್ವಕಪ್ ಫೈನಲ್ಗೆ ಪ್ರವೇಶ ಮಾಡಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023ರ ಭಾರತದ ಐತಿಹಾಸಿಕ ಸಾಧನೆಯ ಹಿನ್ನೋಟ