ಅಹಮದಾಬಾದ್ (ಗುಜರಾತ್): ವಿಶ್ವಕಪ್ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದುಕೊಂಡು ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲೇ ತಂಡ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ವಿರಾಟ್ ಕೊಹ್ಲಿ (54) ಮತ್ತು ಕೆ ಎಲ್ ರಾಹುಲ್ (66) ಅರ್ಧಶತಕ ಇನ್ನಿಂಗ್ಸ್ ಹಾಗೇ ನಾಯಕ ರೋಹಿತ್ ಶರ್ಮಾ ಅವರ 47 ರನ್ನ ಕೊಡುಗೆಯಿಂದಾಗಿ ನಿಗದಿತ ಓವರ್ ಅಂತ್ಯಕ್ಕೆ ಆಲ್ಔಟ್ ಆದ ತಂಡ 240 ರನ್ ಕಲೆಹಾಕಿದೆ.
2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಒಮ್ಮೆ ಇಂತಹ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಅದೇ ರೀತಿ ಮತ್ತೊಂದು ಕಳಪೆ ಬ್ಯಾಟಿಂಗ್ ಇನ್ನಿಂಗ್ಸ್ ಆಡಿದರು. 2023ರ ವಿಶ್ವಕಪ್ನಲ್ಲಿ ಭಾರತ ತಂಡ ಮೊದಲ ಬಾರಿಗೆ ಆಲ್ಔಟ್ ಆಗಿದೆ.
-
Innings Break!#TeamIndia post 2⃣4⃣0⃣ on the board!
— BCCI (@BCCI) November 19, 2023 " class="align-text-top noRightClick twitterSection" data="
6⃣6⃣ for KL Rahul
5⃣4⃣ for Virat Kohli
4⃣7⃣ for Captain Rohit Sharma
Over to our bowlers now 👌
Scorecard ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/22oteriZnE
">Innings Break!#TeamIndia post 2⃣4⃣0⃣ on the board!
— BCCI (@BCCI) November 19, 2023
6⃣6⃣ for KL Rahul
5⃣4⃣ for Virat Kohli
4⃣7⃣ for Captain Rohit Sharma
Over to our bowlers now 👌
Scorecard ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/22oteriZnEInnings Break!#TeamIndia post 2⃣4⃣0⃣ on the board!
— BCCI (@BCCI) November 19, 2023
6⃣6⃣ for KL Rahul
5⃣4⃣ for Virat Kohli
4⃣7⃣ for Captain Rohit Sharma
Over to our bowlers now 👌
Scorecard ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/22oteriZnE
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. 130,000 ಜನ ಪ್ರೇಕ್ಷಕರು ಭಾರತದ ಬ್ಯಾಟಿಂಗ್ ಕಂಡು ಒಮ್ಮೆಗೆ ದಂಗಾದರು. 10ಕ್ಕೆ 10 ಪಂದ್ಯವನ್ನು ಹೆಚ್ಚು ಒತ್ತಡಕ್ಕೆ ಒಳಗಾಗದೇ ಗೆದ್ದಿದ್ದ ತಂಡ ತವರು ಮೈದಾನದಲ್ಲಿ ಆಸೀಸ್ ಬೌಲಿಂಗ್ ಮುಂದೆ ಮಂಕಾಯಿತು.
ಆರಂಭಿಕ ಜೊತೆಯಾಟದ ಕೊರತೆ: ರೋಹಿತ್ ಶರ್ಮಾ ಕಳೆದ ಎಲ್ಲಾ ಇನ್ನಿಂಗ್ಸ್ನಲ್ಲಿ ಅಬ್ಬರ ಆಟವನ್ನೇ ಆಡಿದ್ದರು. ಇಂದು ಸಹ ಅದೇ ರೀತಿ ಬ್ಯಾಟ್ ಬೀಸುತ್ತಿದ್ದರು. ಆದರೆ 5ನೇ ಓವರ್ನಲ್ಲಿ 4 ರನ್ ಗಳಿಸಿದ್ದ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿ ಹೊರನಡೆದರು. ಇದರಿಂದ ದೊಡ್ಡ ಆರಂಭವನ್ನು ತಂಡ ಕಳೆದಿಕೊಂಡಿತು.
ವಿರಾಟ್ - ರೋಹಿತ್ ಜೊತೆಯಾಟದ ನಿರೀಕ್ಷೆ: ಅನುಭವಿ ಬ್ಯಾಟರ್ಗಳಿಂದ ದೊಡ್ಡ ಪಾಲುದಾರಿಕೆಯ ಇನ್ನಿಂಗ್ಸ್ ಬರಬಹುದು ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಬೇಸರ ಮೂಡಿಸಿದರು. 10ನೇ ಓವರ್ನಲ್ಲಿ ಸಿಕ್ಸ್ ಬಾರಿಸುವ ಬರದಲ್ಲಿ ವಿಕೆಟ್ ಕೈಚೆಲ್ಲಿದರು. ರೋಹಿತ್ ಮತ್ತು ವಿರಾಟ್ 46 ರನ್ಗಳ ಜೊತೆಯಾಟವನ್ನು ಆಡಿದ್ದರು. 31 ಬಾಲ್ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸ್ನಿಂದ 47ರನ್ ಗಳಿಸಿ ರೋಹಿತ್ ಔಟ್ ಆದರು.
ಅಯ್ಯರ್ ವಿಫಲ: ಲೀಗ್ ಹಂತದ ಕೊನೆಯ ಪಂದ್ಯ ಮತ್ತು ಸೆಮೀಸ್ನಲ್ಲಿ ಶತಕ ಗಳಿಸಿದ್ದ ಅಯ್ಯರ್ ಅವರಿಂದ ಮಹತ್ವದ ಪಂದ್ಯದಲ್ಲಿ ದೊಡ್ಡ ನಿರೀಕ್ಷೆಗಳಿದ್ದವು. ಆದರೆ ಅದನ್ನು ಅಯ್ಯರ್ ಹುಸಿಗೊಳಿಸಿ 4 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ವಿರಾಟ್ ರಾಹುಲ್ ಆಸರೆ: ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2ರನ್ಗೆ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಇನ್ನಿಂಗ್ಸ್ ತಂಡಕ್ಕೆ ಬಲ ನೀಡಿತ್ತು. ಇಂದು ಅದೇ ಇನ್ನಿಂಗ್ಸ್ ಇಬ್ಬರಿಂದ ನಿರೀಕ್ಷೆ ಇತ್ತು. ಆದರೆ ಅರ್ಧಶತಕ ಗಳಿಸಿದ ವಿರಾಟ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನಿಂಗ್ಸ್ನಲ್ಲಿ ವಿರಾಟ್ 63 ಬಾಲ್ ಆಡಿ 4 ಬೌಂಡರಿಯಿಂದ 54 ರನ್ ಗಳಿಸಿದರು.
ರಾಹುಲ್ಗೆ ಸಾಥ್ ನೀಡದ ಜಡೇಜ: ಕೊನೆಯ ಓವರ್ಗಳಲ್ಲಿ ಅಬ್ಬರಿಸಲು ಸೂರ್ಯ ನೆರವಾಗುತ್ತಾರೆ ಎಂಬ ಉದ್ದೇಶದಿಂದ ಜಡೇಜಾಗೆ ಬಡ್ತಿ ನೀಡಿ ಮೈದಾನಕ್ಕೆ ಕಳಿಸಲಾಯಿತು. ಆದರೆ ಅಗತ್ಯ ಸಮಯದಲ್ಲಿ ಜಡೇಜಾರಿಂದ ಉತ್ತಮ ಇನ್ನಿಂಗ್ಸ್ ಬರಲಿಲ್ಲ. 9 ರನ್ಗೆ ಜಡೇಜ ವಿಕೆಟ್ ಒಪ್ಪಿಸಿದರು.
ಅರ್ಧಶತಕ ಗಳಿಸಿ ರಾಹುಲ್ ಔಟ್: ರಾಹುಲ್ ವಿಕೆಟ್ ಪತನದ ನಡುವೆಯೂ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಆದರೆ ಕೊನೆಯವರೆಗೂ ಇದ್ದು ತಂಡಕ್ಕೆ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆ ನಿಜವಾಗಲಿಲ್ಲ. 107 ಬಾಲ್ ಎದುರಿಸಿದ ರಾಹುಲ್ 1 ಬೌಂಡರಿಯ ಸಹಾಯದಿಂದ 66 ರನ್ ಗಳಿಸಿ ಔಟ್ ಆದರು. ಕೊನೆಯಲ್ಲಿ ಶಮಿ (6), ಬುಮ್ರಾ (1), ಕುಲ್ದೀಪ್ (10) ತಮ್ಮಿಂದಾದ ಇನ್ನಿಂಗ್ಸ್ ಆಡಿದರು. ಇದರಿಂದ ತಂಡ 50 ಓವರ್ಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 240 ರನ್ ಕಲೆಹಾಕಿತು.
ಆಸೀಸ್ ಪರ ಸ್ಟಾರ್ಕ್ 3 ವಿಕೆಟ್ ಪಡೆದರೆ ಜೋಶ್ ಹೇಜಲ್ವುಡ್, ಕಮಿನ್ಸ್ 2 ಮತ್ತು ಮ್ಯಾಕ್ಸ್ವೆಲ್, ಝಂಪಾ ಒಂದೊಂದು ವಿಕೆಟ್ ಕಿತ್ತರು.
ಇದನ್ನೂ ಓದಿ: ವಿಶ್ವಕಪ್ ಫೈನಲ್: ಕುತೂಹಲ ಮೂಡಿಸಿದ ಭಾರತ ತಂಡದ 11ರ ಬಳಗ, ಅಶ್ವಿನ್ಗೆ ಸಿಗುತ್ತಾ ಚಾನ್ಸ್?