ETV Bharat / sports

ಮಂಧಾನ, ಬೌಲರ್ಸ್ ಮಿಂಚಿನ ಪ್ರದರ್ಶನ: ವಿಂಡೀಸ್​ ವನಿತೆಯರ ವಿರುದ್ಧ ಭಾರತಕ್ಕೆ 81ರನ್​ಗಳ ಜಯ - ಭಾರತ vs ವೆಸ್ಟ್ ಇಂಡೀಸ್​ ಅಭ್ಯಾಸ ಪಂದ್ಯ

ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟರ್​ ಮಂಧಾನ 67 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 66 ರನ್​ಗಳಿಸಿದರೆ, ದೀಪ್ತಿ ಶರ್ಮಾ 64 ಎಸೆತಗಳಲ್ಲಿ 51 ರನ್​ಗಳಿಸಿ ಭಾರತ 258 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

Women's World Cup
ಮಹಿಳಾ ವಿಶ್ವಕಪ್ ಅಭ್ಯಾಸ ಪಂದ್ಯ
author img

By

Published : Mar 1, 2022, 3:49 PM IST

ರ್‍ಯಾಂಗಿಯೋರಾ(ನ್ಯೂಜಿಲ್ಯಾಂಡ್): ಸ್ಮೃತಿ ಮಂಧಾನ ಮತ್ತು ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಅಭ್ಯಾಸ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ.

ಏಕದಿನ ವಿಶ್ವಕಪ್​ಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 258 ರನ್​ಗಳಿಸಿತ್ತು. ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟರ್​ ಮಂಧಾನ 67 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 66 ರನ್​ಗಳಿಸಿದರೆ, ದೀಪ್ತಿ ಶರ್ಮಾ 64 ಎಸೆತಗಳಲ್ಲಿ 51, ಮಿಥಾಲಿ 42 ಎಸೆತಗಳಲ್ಲಿ 30, ಯಸ್ತಿಕಾ ಭಾಟಿಯಾ 53 ಎಸೆತಗಳಲ್ಲಿ 42 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

259 ರನ್​ಗಳ ಗುರಿ ಬೆನ್ನಟ್ಟಿದ ವಿಂಡೀಸ್​ ತಂಡವನ್ನು ಭಾರತೀಯ ಬೌಲರ್​ಗಳು 177ಕ್ಕೆ ನಿಯಂತ್ರಿಸುವಲ್ಲಿ ಸಫಲರಾದರು. ಶೆಮೈನ್ ಕ್ಯಾಂಪ್​ಬೆಲ್ಗ್ 86 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 63, ಹೇಲಿ ಮ್ಯಾಥ್ಯೂಸ್ 61 ಎಸೆತಗಳಲ್ಲಿ 44 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಆದರು.

ಸ್ಟಾರ್​ ಬ್ಯಾಟರ್​ಗಳಾದ ಡಿಯಾಂಡ್ರ ಡಾಟಿನ್​(1), ಕೈಸಿಯಾ ನೈಟ್​(23), ಅಲಿಯಾ ಅಲೇನ್​ (12) ನಾಯಕಿ ಸ್ಟೆಫನೀ ಟೇಲರ್​(8) ಚೆಡಿಯಾನ್ ನೇಷನ್​(1)ಭಾರತೀಯ ಬೌಲಿಂಗ್ ದಾಳಿಗೆ ಉತ್ತರಿಸಲಾಗದೇ ವಿಕೆಟ್ ಒಪ್ಪಿಸಿದರು.

ಯುವ ವೇಗಿ ಪೂಜಾ ವಸ್ತ್ರಾಕರ್​ 21ಕ್ಕೆ 3, ದೀಪ್ತಿ ಶರ್ಮಾ 31ಕ್ಕೆ 2, ಮೇಘನಾ ಸಿಂಗ್ 30ಕ್ಕೆ 2, ರಾಜೇಶ್ವರಿ ಗಾಯಕ್ವಾಡ್​ 39ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತದ ವನಿತೆಯರ ತಂಡ ವಿಶ್ವಕಪ್​ಗೂ ಮುನ್ನ ಕಿವೀಸ್​ ವಿರುದ್ಧ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ ನಂತರ ನಡೆದ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ವಿಶ್ವಕಪ್​ಗೂ ಮುನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ:ಈ ಕಾರಣಕ್ಕಾಗಿ ಐಪಿಎಲ್​ ಟೂರ್ನಿಯಿಂದ ಹಿಂದೆ ಸರಿದ ಜೇಸನ್​ ರಾಯ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.