ಮುಂಬೈ (ಮಹಾರಾಷ್ಟ್ರ): ಭಾರತದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಕಾಶ್ವೀ ಗೌತಮ್ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ ಮಿನಿ ಹರಾಜಿನ ಯುದ್ಧದಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಗುಜರಾತ್ ಜೈಂಟ್ಸ್ ಕಾಶ್ವೀ ಗೌತಮ್ಗೆ 2 ಕೋಟಿ ರೂ. ಕೊಟ್ಟು ಖರೀದಿಸಿದೆ. ಮಿನಿ ಹರಾಜಿನಲ್ಲಿ ಇದು ಅಚ್ಚರಿಯ ನಡೆಯಾಗಿದೆ.
ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಭಾರತದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಕಾಶ್ವೀ ಗೌತಮ್ ತಲಾ ಎರಡು ಕೋಟಿಗೆ ಮಾರಾಟವಾಗಿ, ಅತಿ ಹೆಚ್ಚು ಮೊತ್ತ ಪಡೆದವರಾಗಿದ್ದಾರೆ. ಕನ್ನಡತಿ ವೃಂದಾ ದಿನೇಶ್ 1.30 ಕೋಟಿಗೆ ಯುಪಿ ವಾರಿಯರ್ಸ್ ಪಾಲಾದರೆ, ಶಬ್ನಿಮ್ ಇಸ್ಮಾಯಿಲ್ 1.20 ಕೋಟಿಗೆ ಮುಂಬೈ ಮತ್ತು ಫೋಬೆ ಲಿಚ್‌ಫೀಲ್ಡ್ ಅವರನ್ನು 1 ಕೋಟಿಗೆ ರೂಪಾಯಿಗೆ ಗುಜರಾತ್ ಪಾಲಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತದ ಏಕ್ತಾ ಬಿಶ್ತ್ ಅವರನ್ನು 60 ಲಕ್ಷ ರೂಪಾಯಿಗೆ ಖರೀದಿಸಿದ್ದು ದೊಡ್ಡ ಬಿಡ್ ಆಗಿದೆ.
-
𝐓𝐨𝐩 𝟓 𝐁𝐮𝐲𝐬!
— Women's Premier League (WPL) (@wplt20) December 9, 2023 " class="align-text-top noRightClick twitterSection" data="
The players who got the cash registers ringing during the #TATAWPLAuction 2024 💰@TataCompanies pic.twitter.com/xdM7KOrZm1
">𝐓𝐨𝐩 𝟓 𝐁𝐮𝐲𝐬!
— Women's Premier League (WPL) (@wplt20) December 9, 2023
The players who got the cash registers ringing during the #TATAWPLAuction 2024 💰@TataCompanies pic.twitter.com/xdM7KOrZm1𝐓𝐨𝐩 𝟓 𝐁𝐮𝐲𝐬!
— Women's Premier League (WPL) (@wplt20) December 9, 2023
The players who got the cash registers ringing during the #TATAWPLAuction 2024 💰@TataCompanies pic.twitter.com/xdM7KOrZm1
ಕಾವೇರಿದ್ದು ಹೇಗೆ?: ಗೌತಮ್ ಅವರ ಮೂಲ ಬೆಲೆ 10 ಲಕ್ಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮೊದಲ ಬಿಡ್ ಆರಂಭಿಸಿತು. ಇದಕ್ಕೆ ಜೈಂಟ್ಸ್ ಪೈಪೋಟಿಯ ಬಿಡ್ ಮಾಡಿತು. 50 ಲಕ್ಷದವರೆಗೆ ಈ ಎರಡು ಪ್ರಾಂಚೈಸಿಗಳು ಕಾದಾಡಿದವು. 50 ಲಕ್ಷ ದಾಟುತ್ತಿದ್ದಂತೆ ಬೆಂಗಳೂರು ಹಿಂದೆ ಸರಿಯಿತು. ಆದರೆ ನಂತರ ಕಣಕ್ಕಿಳಿದದ್ದು ಯುಪಿ ವಾರಿಯರ್ಸ್ 75 ಲಕ್ಷ ಮತ್ತು 1 ಕೋಟಿಯ ಬಿಡ್ ಮಾಡಿತು. ಗುಜರಾತ್ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಕೋಟಿ ಕೊಟ್ಟು ಆಟಗಾರ್ತಿಯನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಬ್ಯಾಟಿಂಗ್ನಲ್ಲಿ ದೊಡ್ಡ ಹೊಡೆತಗಳನ್ನು ಆಡಬಲ್ಲ ಕಾಶ್ವೀ ಗೌತಮ್ ಮಹಿಳೆಯರ ದೇಶಿಯ ಅಂಡರ್-19 ಲೀಗ್‌ನಲ್ಲಿ ಚಂಡೀಗಢ ಮತ್ತು ಅರುಣಾಚಲ ಪ್ರದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದರು. ಟಿ20 ಪಂದ್ಯಗಳನ್ನು ಆಡಿದ್ದು, 22 ವಿಕೆಟ್‌ಗಳನ್ನು ಪಡೆದಿದ್ದಾರೆ.
10 ಲಕ್ಷದ ಮೂಲ ಬೆಲೆಯೊಂದಿಗೆ ಅನ್‌ಕ್ಯಾಪ್ಡ್ ಇಂಡಿಯಾ ಆಲ್‌ರೌಂಡರ್ ಎಸ್ ಸಜನಾ ಅವರನ್ನು 15 ಲಕ್ಷಕ್ಕೆ ಮತ್ತು ಅಮನ್‌ದೀಪ್ ಕೌರ್ 10 ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ಗೆ ಬಿಕರಿಯಾಗಿದ್ದಾರೆ. ಭಾರತದ ಆಲ್‌ರೌಂಡರ್‌ಗಳಾದ ಗೌತಮಿ ನಾಯಕ್, ಪೂನಂ ಖೇಮ್ನಾರ್ ಮತ್ತು ಗೊಂಗಡಿ ತ್ರಿಶಾ ಮಾರಾಟವಾಗದೆ ಉಳಿದಿದ್ದಾರೆ. 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅನ್‌ಕ್ಯಾಪ್ಡ್ ಇಂಡಿಯಾ ಆಲ್‌ರೌಂಡರ್ ಸೈಮಾ ಠಾಕೂರ್ ಅವರು ಯುಪಿ ವಾರಿಯರ್ಸ್ ಸೇರಿಕೊಂಡರು. ಮೊದಲ ಅನ್‌ಕ್ಯಾಪ್ ಸ್ಪಿನ್ನರ್ ಪ್ರಿಯಾ ಮಿಶ್ರಾ ಗುಜರಾತ್ ಜೈಂಟ್ಸ್‌ಗೆ ಸೇರಿದರೆ, ಕರ್ನಾಟಕದ ಬ್ಯಾಟರ್ ವೃಂದಾ ದಿನೇಶ್ 1.3 ಕೋಟಿಗೆ ಯುಪಿ ವಾರಿಯರ್ಸ್ ಪಾಲಾದರೆ, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ.
ಬಿಡ್ ವಿವರ:
- ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಏಕ್ತಾ ಬಿಶ್ತ್, ಬಿಡ್ ಮೊತ್ತ - ₹ 60 ಲಕ್ಷ
ಜಾರ್ಜಿಯಾ ವೇರ್ಹ್ಯಾಮ್ ಬಿಡ್ ಮೊತ್ತ - ₹ 40 ಲಕ್ಷ
ಸೋಫಿ ಮೊಲಿನೆಕ್ಸ್, ಬಿಡ್ ಮೊತ್ತ - ₹ 30 ಲಕ್ಷ
ಸಿಮ್ರಾನ್ ಬಹದ್ದೂರ್, ಬಿಡ್ ಮೊತ್ತ - ₹ 30 ಲಕ್ಷ
ಸಬ್ಬಿನೇನಿ ಮೇಘನಾ, ಬಿಡ್ ಮೊತ್ತ - ₹ 30 ಲಕ್ಷ
ಕೇಟ್ ಕ್ರಾಸ್, ಬಿಡ್ ಮೊತ್ತ - ₹ 30 ಲಕ್ಷ
ಶುಭಾ ಸತೀಶ್, ಬಿಡ್ ಮೊತ್ತ - ₹ 10 ಲಕ್ಷ - ಮುಂಬೈ ಇಂಡಿಯನ್ಸ್:
ಶಬ್ನಿಮ್ ಇಸ್ಮಾಯಿಲ್, ಬಿಡ್ ಮೊತ್ತ - ₹ 1.2 ಕೋಟಿ
ಪ್ರಿಯಾಂಕಾ ಕೌಶಾಲ್, ಬಿಡ್ ಮೊತ್ತ - ₹ 10 ಲಕ್ಷ
ಕೀರ್ತನಾ ಬಾಲಕೃಷ್ಣನ್, ಬಿಡ್ ಮೊತ್ತ - ₹ 10 ಲಕ್ಷ
ಫಾತಿಮಾ ಜಾಫರ್, ಬಿಡ್ ಮೊತ್ತ - ₹ 10 ಲಕ್ಷ
ಅಮನ್‌ದೀಪ್ ಕೌರ್, ಬಿಡ್ ಮೊತ್ತ -₹ 10 ಲಕ್ಷ
ಎಸ್. ಸಂಜನಾ, ಬಿಡ್ ಮೊತ್ತ -₹ 15 ಲಕ್ಷ - ಗುಜರಾತ್ ಜೈಂಟ್ಸ್
ಕಾಶ್ವೀ ಗೌತಮ್, ಬಿಡ್ ಮೊತ್ತ -₹ 2 ಕೋಟಿ
ಫೋಬೆ ಲಿಚ್ಫೀಲ್ಡ್, ಬಿಡ್ ಮೊತ್ತ - ₹ 1ಕೋಟಿ
ವೇದಾ ಕೃಷ್ಣಮೂರ್ತಿ, ಬಿಡ್ ಮೊತ್ತ -₹ 30 ಲಕ್ಷ
ಮೇಘನಾ ಸಿಂಗ್,ಬಿಡ್ ಮೊತ್ತ -₹ 30 ಲಕ್ಷ
ಲಾರೆನ್ ಚೀಟಲ್, ಬಿಡ್ ಮೊತ್ತ -₹ 30 ಲಕ್ಷ
ಪ್ರಿಯಾ ಮಿಶ್ರಾ, ಬಿಡ್ ಮೊತ್ತ -₹ 20 ಲಕ್ಷ
ತರನ್ನುಮ್ ಪಠಾಣ್, ಬಿಡ್ ಮೊತ್ತ - ₹ 10 ಲಕ್ಷ
ಮನ್ನತ್ ಕಶ್ಯಪ್, ಬಿಡ್ ಮೊತ್ತ -₹ 10 ಲಕ್ಷ
ಕ್ಯಾಥರಿನ್ ಬ್ರೈಸ್, ಬಿಡ್ ಮೊತ್ತ -₹ 10 ಲಕ್ಷ
ತ್ರಿಶಾ ಪೂಜಿತಾ, ಬಿಡ್ ಮೊತ್ತ - ₹ 10 ಲಕ್ಷ - ಡೆಲ್ಲಿ ಕ್ಯಾಪಿಟಲ್ಸ್ :
ಅನ್ನಾಬೆಲ್ ಸದರ್ಲ್ಯಾಂಡ್, ಬಿಡ್ ಮೊತ್ತ -₹ 2 ಕೋಟಿ
ಅಶ್ವನಿ ಕುಮಾರಿ, ಬಿಡ್ ಮೊತ್ತ -₹ 10 ಲಕ್ಷ
ಅಪರ್ಣಾ ಮಂಡಲ್ ಬಿಡ್ ಮೊತ್ತ -₹ 10 ಲಕ್ಷ - ಯುಪಿ ವಾರಿಯರ್ಸ್
ವೃಂದಾ ದಿನೇಶ್, ಬಿಡ್ ಮೊತ್ತ - ₹1.3 ಕೋಟಿ
ಡ್ಯಾನಿ ವ್ಯಾಟ್, ಬಿಡ್ ಮೊತ್ತ -₹ 30 ಲಕ್ಷ
ಗೌಹರ್ ಸುಲ್ತಾನಾ, ಬಿಡ್ ಮೊತ್ತ -₹ 30 ಲಕ್ಷ
ಸೈಮಾ ಠಾಕೋರ್, ಬಿಡ್ ಮೊತ್ತ -₹ 10 ಲಕ್ಷ
ಪೂನಂ ಖೇಮ್ನಾರ್, ಬಿಡ್ ಮೊತ್ತ - ₹ 10 ಲಕ್ಷ
ಇದನ್ನೂ ಓದಿ: ಡಬ್ಲ್ಯುಪಿಎಲ್ ಹರಾಜು: ಅನ್ನಾಬೆಲ್ಗೆ 2 ಕೋಟಿ ಕೊಟ್ಟ ಡೆಲ್ಲಿ, 1 ಕೋಟಿಗೆ ಗುಜರಾತ್ ಪಾಲಾದ ಫೋಬೆ