ಮುಂಬೈ: ಇಂದು ಡಬ್ಲ್ಯೂಪಿಎಲ್ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟ್ಸ್ ಮುಖಾಮುಖಿಯಾಗಲಿದ್ದು, ಟಾಸ್ ಗೆದ್ದ ಸ್ಮೃತಿ ಮಂಧಾನ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಹನ್ನೊಂದು: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಹನ್ನೊಂದು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್
-
🚨 Toss Update 🚨@mandhana_smriti has won the toss & @RCBTweets have elected to bowl against @DelhiCapitals in their first match of the #TATAWPL. #RCBvDC pic.twitter.com/qXBmbH7562
— Women's Premier League (WPL) (@wplt20) March 5, 2023 " class="align-text-top noRightClick twitterSection" data="
">🚨 Toss Update 🚨@mandhana_smriti has won the toss & @RCBTweets have elected to bowl against @DelhiCapitals in their first match of the #TATAWPL. #RCBvDC pic.twitter.com/qXBmbH7562
— Women's Premier League (WPL) (@wplt20) March 5, 2023🚨 Toss Update 🚨@mandhana_smriti has won the toss & @RCBTweets have elected to bowl against @DelhiCapitals in their first match of the #TATAWPL. #RCBvDC pic.twitter.com/qXBmbH7562
— Women's Premier League (WPL) (@wplt20) March 5, 2023
ಸಂಜೆ 7:30ಕ್ಕೆ ಯುಪಿ ವಾರಿಯರ್ಸ್ ಮತ್ತು ಉದ್ಘಾಟನಾ ಪಂದ್ಯದಲ್ಲಿ ಸೋತ ಗುಜರಾತ್ ಜೈಂಟ್ಸ್ ನಡುವೆ ಮ್ಯಾಚ್ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯ ಮೊಲದ ಪಂದ್ಯವನ್ನು 'ಸ್ಪೋರ್ಟ್ಸ್ ಫಾರ್ ಆಲ್' ಪರಿಕಲ್ಪನೆಯ ಭಾಗವಾಗಿ ಭಾರತದಲ್ಲಿ ಯುವತಿಯರ ವೃತ್ತಿಜೀವನದ ಆಯ್ಕೆಗಳಲ್ಲಿ ಕ್ರಿಕೆಟ್ನ್ನು ಒಂದಾಗಿಸಲು ಹೊರಟಿದೆ. ಹಾಗೇ ಕ್ರೀಡೆಯ ಎಲ್ಲಾ ಹಂತಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಆರ್‌ಸಿಬಿ ಒಡೆತನ ಹೊಂದಿರುವ ಡಿಯಾಜಿಯೊ ಇಂಡಿಯಾ ಹೊಂದಿದೆ.
WPL ವೇದಿಕೆಯ ಮೂಲಕ ಫ್ರ್ಯಾಂಚೈಸಿ ಇತರ ವಿಷಯಗಳ ಜೊತೆಗೆ, ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲು ಐಕಾನ್‌ಗಳನ್ನು ನಿರ್ಮಿಸಲು ಬಯಸಿದೆ. ಅದರ ಹಿಂಟ್‌ಲ್ಯಾಂಡ್ ಸ್ಕೌಟಿಂಗ್ ಸಿಸ್ಟಮ್ ಮೂಲಕ ದೇಶದ ಮೂಲೆ ಮೂಲೆಯ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಹುಡುಕುವುದು, ಸ್ಥಳೀಯ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುವುದು ಹಾಗೂ ಪ್ರತಿಭೆಯನನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾದ ವೇದಿಕೆ ಸೃಷ್ಟಿಸಲು ಡಿಯಾಜಿಯೊ ಇಂಡಿಯಾ ಚಿಂತನೆ ನಡೆಸಿದೆ.
ಫ್ರ್ಯಾಂಚೈಸಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಸ್ಮೃತಿ ಮಂಧಾನ, "ಆರ್‌ಸಿಬಿಯಂತಹ ಫ್ರಾಂಚೈಸಿಗಳು ಮಹಿಳೆಯರ ಸಮಾನ ಭಾಗವಹಿಸುವಿಕೆಯ ಉದ್ದೇಶಕ್ಕೆ ಬದ್ಧರಾಗಿರುವುದು ಸಂತಸ ತಂದಿದೆ. ದೇಶದ ಕ್ರಿಕೆಟ್ ಬೆಳವಣಿಗೆ ಆರ್‌ಸಿಬಿ ಕೊಡುಗೆ ಮಹತ್ತರವಾದದ್ದು, ಇಂತಹ ಜನಪ್ರಿಯ ತಂಡದ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಮಹಿಳಾ ಐಪಿಎಲ್ ಆರಂಭಕ್ಕೆ ಭಾರತ ಅಲ್ಲದೇ ವಿದೇಶದಿಂದಲೂ ಬೇಡಿಕೆ ಇತ್ತು. ಈಗ ನನ್ನಂತಹ ಅನೇಕ ಆಟಗಾರ್ತಿಯರ ಕನಸು ನನಸಾಗಲಿದೆ" ಎಂದಿದ್ದಾರೆ.
ಡಿಯಾಜಿಯೊ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಮತ್ತು ಆರ್‌ಸಿಬಿ ಅಧ್ಯಕ್ಷರಾದ ಪ್ರಥಮೇಶ್ ಮಿಶ್ರಾ ಮಾತನಾಡಿ, ಲಿಂಗ ಅಸಮಾನತೆಯು ನೈತಿಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲದೆ ನಿರ್ಣಾಯಕ ಆರ್ಥಿಕ ಸವಾಲಾಗಿದೆ. ಲಿಂಗ ಸಮಾನತೆ ಮತ್ತು ಮಹಿಳೆಯ ಸಮಾನತೆಯಿಂದ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ ಎಂದು ಡಿಯಾಜಿಯೊ ನಂಬುತ್ತದೆ. ಮಹಿಳಾ ತಂಡದಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ನಮ್ಮ ಕಾರ್ಯಸೂಚಿಯ ಮೇಲಿರುತ್ತದೆ. ಇದು ನಮ್ಮ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮಹಿಳಾ ಐಪಿಎಲ್‌ನಲ್ಲಿಂದು 2 ಪಂದ್ಯ: ಆರ್‌ಸಿಬಿ vs ಡೆಲ್ಲಿ ಕುತೂಹಲ; ನಿಮ್ಮ ಬೆಂಬಲ ಯಾರಿಗೆ?