ಸಿಲ್ಹೆಟ್ (ಬಾಂಗ್ಲಾದೇಶ): ಮಹಿಳಾ ಏಷ್ಯಾಕಪ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ 59 ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ 8 ಅಂಕಗಳಿಂದ ಕ್ವಾಲಿಫೈ ಆಗಿದೆ. ಭಾರತದ ವನಿತೆಯರು ಐದು ಪಂದ್ಯಗಳನ್ನಾಡಿದ್ದು ಪಾಕಿಸ್ತಾನದ ವಿರುದ್ಧ ನಿನ್ನೆ ಸೋಲನುಭವಿಸಿದ್ದು ಬಿಟ್ಟರೆ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಅಕ್ಟೋಬರ್ 10ರಂದು ಕೊನೆ ಪಂದ್ಯವನ್ನು ಥಾಯ್ಲೆಂಡ್ನೊಂದಿಗೆ ಆಡಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನೆತೆಯರು 5 ವಿಕೆಟ್ ನಷ್ಟಕ್ಕೆ 159 ರನ್ಗಳ ಗಳಿಸಿದರು. ಶಿಫಾಲಿ ವರ್ಮಾ ಮತ್ತು ನಾಯಕಿ ಮಂಧಾನ ಅವರ ಅಧ್ಭುತ ಆರಂಭಿಕ ಜೊತೆಯಾಟವಾಡಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಮಂಧಾನ ಅವರ ತಂಡ ನೀಡಿದ್ದ 160 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ಗೆ 100 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತದ ವನಿತೆಯರು 59ರನ್ ಗೆಲುವು ಸಾಧಿಸಿದರು. ಫರ್ಗಾನಾ ಹೊಕ್(30), ಮುರ್ಷಿದಾ ಖಾತುನ್ (21) ಮತ್ತು ನಾಯಕಿ ನಿಗರ್ ಸುಲ್ತಾನಾ(36) ಆಡಿದ್ದು ಬಿಟ್ಟರೆ ಮತ್ತೆ ಯಾರೂ ಸಾಂಗಿಕ ಪ್ರದರ್ಶನ ನೀಡಲಿಲ್ಲ.
-
India back to winning ways in the #WomensAsiaCup2022 👏
— ICC (@ICC) October 8, 2022 " class="align-text-top noRightClick twitterSection" data="
Scorecard: https://t.co/egcKxhjLAB pic.twitter.com/aquiD32eM3
">India back to winning ways in the #WomensAsiaCup2022 👏
— ICC (@ICC) October 8, 2022
Scorecard: https://t.co/egcKxhjLAB pic.twitter.com/aquiD32eM3India back to winning ways in the #WomensAsiaCup2022 👏
— ICC (@ICC) October 8, 2022
Scorecard: https://t.co/egcKxhjLAB pic.twitter.com/aquiD32eM3
ಮಧ್ಯಮ ಮತ್ತು ಕೆಳ ಕ್ರಮಾಂಕ ವಿಫಲ : ರಿತು ಮೋನಿ(4), ಲತಾ ಮೊಂಡಲ್(1), ಫಾಹಿಮಾ ಖಾತುನ್(1), ರುಮಾನಾ ಅಹ್ಮದ್(0) ವಿಕೆಟ್ ಒಪ್ಪಿಸಿದರು. ನಹಿದಾ ಅಕ್ಟರ್(0) ಮತ್ತು ಸಲ್ಮಾ ಖಾತುನ್(5) ನಾಟೌಟ್ ಆಗಿ ಉಳಿದರು.
ಭಾರತದ ಪರ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ತಲಾ ಎರಡು ವಿಕೆಟ್ ಮತ್ತು ರೇಣು ಸಿಂಗ್ ಮತ್ತು ಸ್ನೇಹ ರಾಣ ಒಂದೊಂದು ವಿಕೆಟ್ ಪಡೆದರು.
ಶಫಾಲಿ ವರ್ಮಾ ಅರ್ಧಶತಕ : ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಭಾರತೀಯ ವನಿತೆಯರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನದ ಎರುರಿನ ಸೋಲಿಗೆ ಕಾರಣವಾಗಿದ್ದ ಬ್ಯಾಟಿಂಗ್ ವೈಫಲ್ಯವನ್ನು ಈ ಪಂದ್ಯದಲ್ಲಿ ಸುಧಾರಿಸಿ ಆಡಿದ್ದಾರೆ. ಆರಂಭಿಕರಾಗಿ ಬಂದ ನಾಯಕಿ ಮಂಧಾನ ಮತ್ತು ಶಫಾಲಿ ವರ್ಮಾ 96 ರನ್ಗಳ ಜೊತೆಯಾಟ ನೀಡಿದರು. ಇದರಿಂದ ಬಾಂಗ್ಲಾಕ್ಕೆ 160 ರನ್ಗಳ ಕಠಿಣ ಗುರಿ ನೀಡಲು ಸಾಧ್ಯವಾಯಿತು.
ಮಂಧಾನ 6 ಬೌಂಡರಿಯಿಂದ 47 ರನನ್ ಗಳಿಸಿ ಔಟ್ ಆದರು. ನಂತರ ಬಂದ ರಾಡ್ರಿಗಸ್ (35) ಶಫಾಲಿ ವರ್ಮಾನಿಗೆ ಸಾಥ್ ನೀಡಿದರು. ಆರಂಭಿಕರಾಗಿ ಬಂದ ಶಫಾಲಿ ವರ್ಮಾ 5 ಬೌಂಡರಿ ಮತ್ತು 2 ಸಿಕ್ಸರ್ನಿಂದ 55 ರನ್ ಗಳಿಸಿದರು.
ಮಧ್ಯಮ ಕ್ರಮಾಂಕ ಕುಸಿತ : ಆರಂಭಕ ಆಟಗಾರರು ನೀಡಿದ ಉತ್ತಮ ಜೊತೆಯಾಟವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಮುಂದುವರೆಸಲಿಲ್ಲ. ರಿಚಾ ಘೋಷ್(4), ಕಿರಣ್ ನವಗಿರೆ(0) ಮತ್ತು ದೀಪ್ತಿ ಶರ್ಮಾ (10) ಬೇಗ ವಿಕೆಟ್ ಒಪ್ಪಿಸಿದರು.
ಅರ್ಧಶತಕ ಗಳಿಸಿ ಎರಡು ವಿಕೆಟ್ ಪಡೆದ ಶಫಾಲಿ ಶರ್ಮಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಸಂಕ್ಷಿಪ್ತ ಸ್ಕೋರ್ : ಭಾರತ 20 ಓವರ್ಗೆ 5 ವಿಕೇಟ್ ನಷ್ಟಕ್ಕೆ 159ರನ್ ಮತ್ತು ಬಾಂಗ್ಲಾದೇಶ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 100 ರನ್
ಫಲಿತಾಂಶ: ಭಾರತಕ್ಕೆ 59 ರನ್ಗಳ ಗೆಲುವು.
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ: ಚಹರ್ ಬದಲಿಗೆ ವಾಷಿಂಗ್ಟನ್ ಸುಂದರ್ ಇನ್