ಆಕ್ಲೆಂಡ್: ಹರ್ಮನ್ಪ್ರೀತ್ ಕೌರ್, ಯಸ್ತಿಕಾ ಭಾಟಿಯಾ ಮತ್ತು ಮಿಥಾಲಿ ರಾಜ್ ಅರ್ಧಶತಗಳ ನೆರವಿನಿಂದ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ 278 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಆರಂಭಿಕರಾದ ಸ್ಮೃತಿ ಮಂಧಾನ(10) ಮತ್ತು ಶೆಫಾಲಿ ವರ್ಮಾ(12) ವೈಫಲ್ಯ ಅನುಭವಿಸಿತ್ತು. ಆದರೆ ಅನುಭವಿ ಮಿಥಾಲಿ ರಾಜ್ ಮತ್ತು ಯುವ ಬ್ಯಾಟರ್ ಯಸ್ತಿಕಾ 3ನೇ ವಿಕೆಟ್ಗೆ 130 ರನ್ಗಳ ಜೊತೆಯಾಟ ನೀಡಿ ಚೇತರಿಕೆ ತಂದುಕೊಟ್ಟರು.
-
Innings Break!
— BCCI Women (@BCCIWomen) March 19, 2022 " class="align-text-top noRightClick twitterSection" data="
Solid show by #TeamIndia to post 2⃣7⃣7⃣/7⃣ on the board! 👏 👏 #CWC22 | #INDvAUS
6⃣8⃣ for captain @M_Raj03
5⃣9⃣ for @YastikaBhatia
5⃣7⃣* for vice-captain @ImHarmanpreet
3⃣4⃣ for @Vastrakarp25
Over to our bowlers now. 👍
Scorecard ▶️ https://t.co/SLZ4bayb4f pic.twitter.com/EAqhkwqL4O
">Innings Break!
— BCCI Women (@BCCIWomen) March 19, 2022
Solid show by #TeamIndia to post 2⃣7⃣7⃣/7⃣ on the board! 👏 👏 #CWC22 | #INDvAUS
6⃣8⃣ for captain @M_Raj03
5⃣9⃣ for @YastikaBhatia
5⃣7⃣* for vice-captain @ImHarmanpreet
3⃣4⃣ for @Vastrakarp25
Over to our bowlers now. 👍
Scorecard ▶️ https://t.co/SLZ4bayb4f pic.twitter.com/EAqhkwqL4OInnings Break!
— BCCI Women (@BCCIWomen) March 19, 2022
Solid show by #TeamIndia to post 2⃣7⃣7⃣/7⃣ on the board! 👏 👏 #CWC22 | #INDvAUS
6⃣8⃣ for captain @M_Raj03
5⃣9⃣ for @YastikaBhatia
5⃣7⃣* for vice-captain @ImHarmanpreet
3⃣4⃣ for @Vastrakarp25
Over to our bowlers now. 👍
Scorecard ▶️ https://t.co/SLZ4bayb4f pic.twitter.com/EAqhkwqL4O
ಭಾಟಿಯಾ 83 ಎಸೆತಗಲ್ಲಿ 6 ಬೌಂಡರಿ ಸಹಿತ 59 ರನ್ಗಳಿಸಿದರೆ, ಮಿಥಾಲಿ ರಾಜ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 68 ರನ್ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಹರ್ಮನ್ಪ್ರೀತ್ ಕೌರ್ 47 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ಮತ್ತು ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 34 ರನ್ಗಳಿಸಿದರು. ಈ ಜೋಡಿ 47 ಎಸೆತಗಳಲ್ಲಿ 64 ರನ್ ಸೇರಿಸಿ ತಂಡದ ಮೊತ್ತವನ್ನು 250 ಗಡಿ ದಾಟಿಸಿದರು.
ಯುವ ವಿಕೆಟ್ ಕೀಪರ್ ರಿಚಾ ಘೋಷ್ ಕೇವಲ 8 ರನ್ ಮತ್ತು ಸ್ನೇಹ್ ರಾಣಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 30ಕ್ಕೆ3, ಅಲಾನಾ ಕಿಂಗ್ 52ಕ್ಕೆ 2 ಮತ್ತು ಜೊನಾಸೆನ್ 40ಕ್ಕೆ1 ವಿಕೆಟ್ ಪಡೆದರು.
ಇದನ್ನೂ ಓದಿ:ಧೋನಿ ಬಗ್ಗೆ ಅಪಾರ ಗೌರವವಿದೆ, ಅವಶ್ಯಕತೆ ಬಂದಾಗ ಅವರ ಪಕ್ಕ ನಿಲ್ಲುವ ಮೊದಲ ವ್ಯಕ್ತಿ ನಾನು: ಗಂಭೀರ್