ETV Bharat / sports

ODI World Cup 2023: ವಿಶ್ವಕಪ್​ ಗೆದ್ದ ತಂಡ ಗಳಿಸುವ ಮೊತ್ತ ಎಷ್ಟು ಗೊತ್ತಾ?

author img

By ETV Bharat Karnataka Team

Published : Sep 22, 2023, 8:29 PM IST

World Cup Winners prize money: ವಿಶ್ವಕಪ್​ನ ಫೈನಲ್​ ಪಂದ್ಯ ವಿಜೇತರಿಗೆ ಮಾತ್ರ ಅಲ್ಲ ಪ್ರತಿ ಪಂದ್ಯದ ಗೆಲುವಿಗೂ ಐಸಿಸಿ ಬಹುಮಾನ ನೀಡಲಿದೆ.

ODI World Cup 2023
ODI World Cup 2023

ದುಬೈ: ವಿಶ್ವಕಪ್​ ಮಹಾ ಕದನಕ್ಕೆ 10 ಅಂತಾರಾಷ್ಟ್ರೀಯ ತಂಡಗಳು ಸಿದ್ಧತೆ ನಡೆಸಿಕೊಳ್ಳುತ್ತಿದೆ. 10 ಎದುರಾಳಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದ ತಂಡ ಬೃಹತ್​ ಮೊತ್ತವನ್ನು ಟ್ರೋಫಿಯ ಜೊತೆಗೆ ಗೆಲ್ಲಲಿದೆ. 2023ರ ವಿಶ್ವಕಪ್​ಗೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನಲೆಯಲ್ಲಿ ಐಸಿಸಿ ಪ್ರಶಸ್ತಿ ಮೊತ್ತವನ್ನು ಪ್ರಕಟಿಸಿದೆ. ಅದರಂತೆ ವಿಜೇತ ತಂಡ ವಿಶ್ವಕಪ್‌ ಟ್ರೋಫಿಯ ಹೊರತಾಗಿ 4 ಮಿಲಿಯನ್ ಡಾಲರ್ ಗಳಿಸಲಿದೆ. ಅಂದರೆ ಭಾರತದ ರುಪಿಯ ಪ್ರಕಾರ 33,18,30,800 ಕೋಟಿ ಆಗಲಿದೆ.

ವಿಶ್ವಕಪ್​ನ ಒಟ್ಟಾರೆ ಬಹುಮಾನ ಮೊತ್ತ 10 ಮಿಲಿಯನ್​ ಯುಎಸ್ ಡಾಲರ್​ ಆಗಿದೆ. 2015 ಮತ್ತು 2019 ಆವೃತ್ತಿಯ ವಿಶ್ವಕಪ್​ ಫೈನಲ್​ ವಿಜೇತ ತಂಡಕ್ಕೂ ಇಷ್ಟೇ ಮೊತ್ತವನ್ನು ಬಹುಮಾನವಾಗಿ ನೀಡಲಾಗಿತ್ತು. 2023ರ ಪುರುಷರ ಏಕದಿನ ವಿಶ್ವಕಪ್‌ನ ರನ್ನರ್-ಅಪ್ ತಂಡ 2 ಮಿಲಿಯನ್ ಪಡೆಯುತ್ತದೆ ಮತ್ತು ಸೋತ ಸೆಮಿ-ಫೈನಲಿಸ್ಟ್‌ಗಳು ತಲಾ 800,000 ಯುಎಸ್​ ಡಾಲರ್​ ಪಡೆಯಲಿದ್ದಾರೆ.

  • The total prize pool for #CWC23, including the cash prize for the winners, has been announced 💰

    Details 👇

    — ICC (@ICC) September 22, 2023 " class="align-text-top noRightClick twitterSection" data=" ">

ಇತ್ತಿಚೆಗಿನ ನಿಯಮದಂತೆ ಪ್ರತೀ ಪಂದ್ಯದ ವಿಜೇತರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಹಣ ಪಾವತಿಸಲಿದೆ. ಲೀಗ್​ ಹಂತದ ಪ್ರತಿ ಪಂದ್ಯದ ವಿಜೇತರು 40,000 ಯುಎಸ್​ಡಿ ಗೆಲ್ಲಲಿದ್ದಾರೆ. ಲೀಗ್​ ಹಂತದಲ್ಲಿ 45 ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯದ ವಿಜೇತ ತಂಡ ಈ ಮೊತ್ತ ಪಡೆಯಲಿದೆ. ಸೆಮಿ-ಫೈನಲ್‌ಗೆ ಅರ್ಹತೆ ಪಡೆಯದ ಆರು ತಂಡಗಳು 100,000 ಯುಎಲ್​ಡಿ ಮೊತ್ತವನ್ನು ಪಡೆಯಲಿದೆ. 2023ರ ಏಕದಿನ ವಿಶ್ವಕಪ್‌ ರೌಂಡ್-ರಾಬಿನ್ ಸ್ವರೂಪದಲ್ಲಿ ಲೀಗ್​ ನಡೆಯಲಿದೆ. ಲೀಗ್​ನ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್‌ಗೆ ಪ್ರವೇಶಿಸುತ್ತವೆ. 46 ದಿನ 48 ಪಂದ್ಯಗಳ ಈವೆಂಟ್ ನಡೆಯಲಿದ್ದು, ಪಂದ್ಯಗಳು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಹತ್ತು ಮೈದಾನಗಳಲ್ಲಿ ನಡೆಯಲಿದೆ.

  • Prize money for ICC World Cup 2023: [approx]

    Winners - 33 crores
    Runner up - 16 crores
    Two Semi-finals - 6 crores each
    Group stage teams - 82 lakhs each pic.twitter.com/5F8M5plgTN

    — Johns. (@CricCrazyJohns) September 22, 2023 " class="align-text-top noRightClick twitterSection" data=" ">

13ನೇ ಆವೃತ್ತಿಯ ವಿಶ್ವಕಪ್​ ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ 2019ರ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್​ ಅಪ್​ ನ್ಯೂಜಿಲೆಂಡ್ ಆಡಲಿದೆ. ಆತಿಥೇಯ ಭಾರತ 1983 ಮತ್ತು 2011 ರ ಚಾಂಪಿಯನ್ ಆಗಿದ್ದು, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರಿಡಾಂಗಣದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದೇ ಮೊದಲ ಬಾರಿಗೆ ಪುರುಷರ ಏಕದಿನ ವಿಶ್ವಕಪ್‌ನ ಆತಿಥ್ಯವನ್ನು ಭಾರತ ವಹಿಸಿದೆ. 2011ರಲ್ಲಿ ಶ್ರೀಲಂಕಾ ಜೊತೆಗೆ ಜಂಟಿಯಾಗಿ ಪಂದ್ಯಗಳನ್ನು ಆಯೋಜಿಸಿತ್ತು.

1996ರ ಚಾಂಪಿಯನ್ ಶ್ರೀಲಂಕಾ ಅಕ್ಟೋಬರ್ 7ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. 1992ರ ವಿಜೇತರಾದ ಪಾಕಿಸ್ತಾನವು ಅಕ್ಟೋಬರ್ 6ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಪ್ರಥಮ ಪಂದ್ಯ​ ಆಡಲಿದೆ.

ಇದನ್ನೂ ಓದಿ: ICC ODI World Cup 2023: ವಿಶ್ವಕಪ್​ ಪಾಕ್​ ಟೀಮ್​ನಿಂದ ನಸೀಮ್​ ಶಾ ಔಟ್​, ಹಸನ್ ಅಲಿ ಇನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.