ETV Bharat / sports

IPL: ಧೋನಿಗೆ ಮೊಣಕಾಲು ಗಾಯ: ಇಂದಿನ ಪಂದ್ಯದಲ್ಲಿ ಕಣಕ್ಕಿಳೀತಾರಾ? - ETV Bharath Kannada news

ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಧೋನಿ ನಿನ್ನೆ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ಇದು ಇಂದಿನ ಮೊದಲ ಪಂದ್ಯದಲ್ಲಿ ಅವರು ಕಣಕ್ಕಿಳೀತಾರಾ ಎಂಬ ಪ್ರಶ್ನೆ ಮೂಡಿಸಿದೆ.

ಮೊಣಕಾಲು ಗಾಯಕ್ಕೆ ಒಳಗಾದ ಧೋನಿ
Will MS Dhoni play or miss IPL 2023 opener against GT
author img

By

Published : Mar 31, 2023, 1:07 PM IST

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಇಂದು ಸಂಜೆ ಅಹಮದಾಬಾದ್‌ನಲ್ಲಿ ಅದ್ಧೂರಿ ಆರಂಭ ದೊರೆಯಲಿದೆ. ಮೊದಲ ದಿನ "ಕ್ಯಾಪ್ಟನ್​ ಕೂಲ್​" ಎಂದೇ ಖ್ಯಾತರಾಗಿರುವ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆಕ್ರಮಣಕಾರಿ ಆಟಗಾರ ಹಾರ್ದಿಕ್​ ಮುಂದಾಳತ್ವದ ಗುಜರಾತ್​ ಟೈಟಾನ್ಸ್​ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ನಾಲ್ಕು ಬಾರಿ ಚಾಂಪಿಯನ್​ ಆಗಿರುವ ಚೆನ್ನೈಯನ್ನು ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ಬೀಗಿದ ಟೈಟಾನ್ಸ್​ ಹೇಗೆ ಎದುರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಧೋನಿ ಅಲಭ್ಯ?: 16ನೇ ಆವೃತ್ತಿಯ ಐಪಿಎಲ್​ಗೆ ಗಾಯದ ಸಮಸ್ಯೆ ಕಾಡುತ್ತಿದೆ. ಈ ವರ್ಷ ಸ್ಟಾರ್​ ಆಟಗಾರರೇ ಇಂಜುರಿಗೆ ಒಳಗಾಗಿ ತಂಡಗಳಿಂದ ಹೊರಗಿದ್ದಾರೆ. ಈ ನಡುವೆ ಮಹೇಂದ್ರ ಸಿಂಗ್​ ಧೋನಿ ಕೂಡ ಅಭ್ಯಾಸದ ಸಂದರ್ಭದಲ್ಲಿ ಮೊಣಕಾಲು ಗಾಯಕ್ಕೊಳಗಾಗಿದ್ದು, ಮೊದಲ ಪಂದ್ಯಕ್ಕೆ ಗೈರಾಗುತ್ತಾರೆ ಎಂದು ಕೆಲವೆಡೆ ವರದಿಯಾಗಿದೆ.

ಆದರೆ ಮೊದಲ ಪಂದ್ಯದಲ್ಲಿ ಧೋನಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್​ ಕಿಂಗ್ಸ್ ಸಿಇಒ ಹೇಳಿದ್ದಾರೆ. "ನನಗೆ ತಿಳಿದಿರುವಂತೆ ಧೋನಿ ಶೇ 100 ರಷ್ಟು ಆಡುತ್ತಾರೆ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಧೋನಿ ಆಡದಿದ್ದರೆ, ಡೆವೊನ್ ಕಾನ್ವೇ ಅಥವಾ ಅಂಬಟಿ ರಾಯುಡು ವಿಕೆಟ್ ಕೀಪಿಂಗ್ ಮಾಡಬಹುದು. ಟೀಮ್​ನಲ್ಲಿ ಮಹಿ ಬಿಟ್ಟರೆ ಇವರಿಬ್ಬರು ಕೀಪಿಂಗ್​ ಸಾಮರ್ಥ್ಯ ಹೊಂದಿದ್ದಾರೆ" ಎಂದರು.

ಸಿಎಸ್‌ಕೆ ಸಿಇಒ ಸಹ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಈಗ ಅವರು ಕಣಕ್ಕಿಳಿಯುವ ಬಗ್ಗೆ ಅನುಮಾನ ಮೂಡಿಸಿದೆ. ಎಡ ಮೊಣಕಾಲಿನ ಗಾಯಕ್ಕೆ ತುತ್ತಾದ ಧೋನಿ ನಿನ್ನೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಬಂದಿರಲಿಲ್ಲ. ಫಿಸಿಯೋ ಕೂಡಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

41ನೇ ವಯಸ್ಸಿನಲ್ಲೂ ತಗ್ಗದ ಕ್ರಿಕೆಟ್​ ಪ್ರೇಮ: ಅಭ್ಯಾಸದ ವೇಳೆ ಕಾಣಿಸಿಕೊಂಡಿರುವ ವಿಡಿಯೋಗಳಲ್ಲಿ ಧೋನಿ ಅವರ ಫಿಟ್​​ನೆಸ್​ ಯುವ ಆಟಗಾರನನ್ನು ಮೀರಿಸುವಂತಿದೆ. ಅವರು ಈಗಲೂ ಬ್ಯಾಟ್​ ಹಿಡಿದಾಗ ಹೆಲಿಕ್ಯಾಪ್ಟರ್​ ​ಶಾಟ್ ಅ​ನ್ನು ಲೀಲಾಜಾಲವಾಗಿ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವರ ನಿವೃತ್ತಿಯ ಬಗ್ಗೆ ಒಂದೆಡೆ ಮಾತಾಗುತ್ತಿದ್ದರೆ, ಧೋನಿಯನ್ನು ಹತ್ತಿರದಿಂದ ಕಂಡ ಕೆಲ ಹಿರಿಯ ಹಾಗೂ ಕಿರಿಯ ಆಟಗಾರರು ಅವರಿನ್ನೂ ಎರಡರಿಂದ ಮೂರು ವರ್ಷ ಕ್ರಿಕೆಟ್​ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಷ್ಟು ಶಕ್ತರಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ಸಿಎಸ್​ಕೆ ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಧೋನಿ ಅಭ್ಯಾಸಕ್ಕೆ ಮೈದಾನಕ್ಕೆ ಬರುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿತ್ತು. ಇದು ಕೆಲವೇ ಗಂಟೆಯಲ್ಲಿ ವೈರಲ್​ ಆದದ್ದಲ್ಲದೇ, ಮೈದಾನಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.

ಇದನ್ನೂ ಓದಿ: ಚೆಪಾಕ್​ ಮೈದಾನದಲ್ಲಿ ತಲೈವಾಗೆ ಭರ್ಜರಿ ಸ್ವಾಗತ.. ಕಿವಿಗಡಚಿಕ್ಕಿದ ಧೋನಿ ಹರ್ಷೋದ್ಘಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.