ETV Bharat / sports

ವಿಲಿಯಮ್ಸನ್‌ ಜೊತೆ ಕ್ರಿಕೆಟ್​ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ : ವಾರ್ನರ್​ ಭಾವುಕ ಪೋಸ್ಟ್​

2021ರ ಐಪಿಎಲ್​​ನಲ್ಲಿ ಡೇವಿಡ್ ವಾರ್ನರ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಜೊತೆಗೆ ತಂಡ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರಿಂದ ಫ್ರಾಂಚೈಸಿ ಟೂರ್ನಿ ಮಧ್ಯದಲ್ಲಿ ವಾರ್ನರ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್​ ವಿಲಿಯಮ್ಸನ್​​ಗೆ ನಾಯಕತ್ವ ನೀಡಿತ್ತು..

Warner to Williamson
ಡೇವಿಡ್​ ವಾರ್ನರ್​ ಕೇನ್​ ವಿಲಿಯಮ್ಸನ್​
author img

By

Published : Feb 16, 2022, 7:43 PM IST

ಹೈದರಾಬಾದ್​(ಡೆಸ್ಕ್​) : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​​ ಡೇವಿಡ್​ ವಾರ್ನರ್​ ತಾವೂ ಐಪಿಎಲ್​ನಲ್ಲಿ ಕೇನ್​ ವಿಲಿಯಮ್ಸನ್​ ಅವರ ಜೊತೆಗೆ ಸನ್​ರೈಸರ್ಸ್ ತಂಡದಲ್ಲಿ ಕ್ರಿಕೆಟ್​ ಆಡುವುದನ್ನು ಸಾಕಷ್ಟು ಮಿಸ್​​ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ ತಂಡದ ಮಾಜಿ ನಾಯಕ ವಾರ್ನರ್‌​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಲಿಯಮ್ಸನ್ ಜೊತೆಗಿನ ಸಾಕಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ನಿಮ್ಮ ಜೊತೆಗೆ ಬ್ರೇಕ್​ ಫಾಸ್ಟ್​ ಮಾಡುವುದನ್ನು ಮತ್ತು ನಿಮ್ಮ ಜೊತೆಗೆ ಕ್ರಿಕೆಟ್​ ಆಡುವುದನ್ನು ಮಿಸ್​ ಮಾಡಿಕೊಳ್ಳಲಿದ್ದೇನೆ ಬ್ರದರ್​ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:ಆರ್​ಸಿಬಿಯಲ್ಲಿ ಸಿಕ್ಕಿದ ಈ ಪಾತ್ರ ನನ್ನ ವೃತ್ತಿಜೀವನವನ್ನೇ ಬದಲಾಯಿಸಿತು: ಹರ್ಷಲ್ ಪಟೇಲ್

2021ರ ಐಪಿಎಲ್​​ನಲ್ಲಿ ಡೇವಿಡ್ ವಾರ್ನರ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಜೊತೆಗೆ ತಂಡ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದರಿಂದ ಫ್ರಾಂಚೈಸಿ ಟೂರ್ನಿ ಮಧ್ಯದಲ್ಲಿ ವಾರ್ನರ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್​ ವಿಲಿಯಮ್ಸನ್​​ಗೆ ನಾಯಕತ್ವ ನೀಡಿತ್ತು.

2022ರ ಐಪಿಎಲ್​ಗೆ ರಿಟೈನ್ ಮಾಡಿಕೊಳ್ಳುವ ವೇಳೆ ಕೂಡ ಕೇನ್​ ವಿಲಿಯಮ್ಸನ್​ ಜೊತೆಗೆ ಯುವ ಬೌಲರ್​ಗಳಾದ ಅಬ್ದುಲ್ ಸಮದ್​ ಮತ್ತು ಉಮ್ರಾನ್ ಮಲಿಕ್​ರನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಇನ್ನು ಮೆಗಾ ಹರಾಜಿನಲ್ಲಿ ಡೇವಿಡ್​ ವಾರ್ನರ್​ರನ್ನು ಡೆಲ್ಲಿ ಕ್ಯಾಪಿಟಲ್ಸ್​ 6.25 ಕೋಟಿ ರೂ. ನೀಡಿ ಖರೀದಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.