ಹ್ಯಾಮಿಲ್ಟನ್: ಮಧ್ಯಮ ಕ್ರಮಾಂಕದಲ್ಲಿ ಪಂದ್ಯವನ್ನು ಆಳಕ್ಕೆ ಕೊಂಡೊಯ್ಯಬಲ್ಲ ಬ್ಯಾಟರ್ ಇಲ್ಲದಿರುದು ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡದಿರುವುದು ನ್ಯೂಜಿಲ್ಯಾಂಡ್ ವಿರುದ್ಧದ 62 ರನ್ಗಳ ಸೋಲಿಗೆ ಕಾರಣ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಒಪ್ಪಿಕೊಂಡಿದ್ದಾರೆ.
ಕಿವೀಸ್ ನೀಡಿದ್ದ 261 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 198ಕ್ಕೆ ಆಲೌಟ್ ಆಗಿತ್ತು. ಆದರೆ ಚೇಸಿಂಗ್ ಆರಂಭದಲ್ಲೇ ಎಡವಿದ ಮಿಥಾಲಿ ಪಡೆ ಮೊದಲ 20 ಓವರ್ಗಳಲ್ಲಿ ಕೇವಲ 50 ರನ್ ಸಿಡಿಸಲಷ್ಟೇ ಶಕ್ತವಾಗಿತ್ತು.
ನಮ್ಮ ತಂಡದ ಬ್ಯಾಟಿಂಗ್ ವಿಭಾಗ, ಅದರಲ್ಲೂ ಅಗ್ರ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್ಗಳ ಅವಶ್ಯಕತೆಯಿದೆ. ಏಕೆಂದರೆ ಬೇರೆ ತಂಡಗಳು ಸುಲಭವಾಗಿ 250-260 ರನ್ಗಳನ್ನು ಗಳಿಸುತ್ತಿವೆ ಎಮದು ಪಂದ್ಯದ ನಂತರ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ನಾವು ಹೊಂದಿರುವ ಅಗ್ರಕ್ರಮಾಂಕವನ್ನು ನೋಡಿ, ಇದು ಚೇಸ್ ಮಾಡಬಲ್ಲ ಮೊತ್ತ ಎಂದು ಭಾವಿಸಿದ್ದೆವು. ಆದರೆ ಸತತ ವಿಕೆಟ್ ಕಳೆದುಕೊಂಡಿದ್ದರಿಂದ ಒತ್ತಡ ಹೆಚ್ಚಾಯಿತು. ಏಕೆಂದರೆ ನಮ್ಮ ಮಧ್ಯಮ ಕ್ರಮಾಂಕದಲ್ಲಿ ಪಂದ್ಯವನ್ನು ಆಳಕ್ಕೆ ಕೊಂಡೊಯ್ಯಬಲ್ಲ ಬ್ಯಾಟರ್ಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಪಿಚ್ ಬೌನ್ಸ್ಗೆ ಹೆಚ್ಚು ಅನುಕೂಲವಾಗಿತ್ತು, ಆದರೆ ಬ್ಯಾಟ್ ಬೀಸಲು ಕಷ್ಟವಿರಲಿಲ್ಲ. ಅವರ ಸೀಮರ್ಸ್ಗಳು ಒಳ್ಳೆಯ ಪ್ರದೇಶದಲ್ಲಿ ಚೆಂಡುಗಳನ್ನು ಎಸೆಯುತ್ತಿದ್ದರು. ಆದರೆ ಇದು ಆಡಲು ಕಷ್ಟಕರವಾಗಿರಲಿಲ್ಲ, ನಾವು ಇನ್ನು ಚೆನ್ನಾಗಿ ಆಡಬಹುದಿತ್ತು ಎಂದು ಮಿಥಾಲಿ ರಾಜ್ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣವೆಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ವಿಶ್ವಕಪ್: ಕಿವೀಸ್ ವಿರುದ್ಧ 62 ರನ್ಗಳ ಹೀನಾಯ ಸೋಲು ಕಂಡ ಭಾರತ