ETV Bharat / sports

India vs England: ನೆಟ್‌ ಬೌಲರ್‌ಗೆ ಸೋಂಕು ತಗುಲಿದ ಬಳಿಕ ಪಂತ್‌ಗೂ ಕೋವಿಡ್‌; ಐಸೋಲೇಷನ್‌ ಆದ ಸಹಾ

author img

By

Published : Jul 15, 2021, 7:31 PM IST

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಟೀ ಇಂಡಿಯಾ ಆಟಗಾರ, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಅವರ ಕೋವಿಡ್‌ ವರದಿ ಪಾಸಿಟಿವ್‌ ಬಂದಿದೆ. ಇದಕ್ಕೂ ಮುನ್ನ ನೆಟ್ ಬೌಲರ್ ದಯಾನಂದ್ ಗರಾನಿಗೆ ಸೋಂಕು ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಂತ್‌ ವರದಿ ಕೂಡ ಪಾಸಿಟಿವ್‌ ಆಗಿದ್ದು, ಸೆಲ್ಫ್‌ ಕ್ವಾರಂಟೈನ್‌ ಆಗಿದ್ದಾರೆ.

Wicket-keeper Rishabh Pant nears completion of his self-quarantine period while net bowler Dayanand Garani has tested positive for COVID-19
ನೆಟ್‌ ಬೌಲರ್‌ಗೆ ಪಾಸಿಟಿವ್‌ ಬಂದ ಕೆಲವೇ ಗಂಟೆಗಳಲ್ಲಿ ರಿಷಬ್‌ ಪಂಥ್‌ಗೆ ಕೋವಿಡ್‌ ಸೋಂಕು

ನವದೆಹಲಿ: ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್‌ಗೆ ಕೋವಿಡ್‌ ಸೋಂಕು ತಗುಲಿದೆ. ನೆಟ್‌ ಬೌಲರ್ ದಯಾನಂದ್ ಗರಾನಿ ಅವರಲ್ಲಿ ಸೋಂಕು ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಪಂತ್‌ಗೂ ಸೋಂಕು ತಗುಲಿದ್ದು ದೃಢಪಟ್ಟಿದೆ.

  • 🚨 NEWS: #TeamIndia off to Durham; Two members test positive

    Wicket-keeper batsman Rishabh Pant, who tested positive for COVID-19 on 8th July, nears completion of his self-quarantine period while training assistant/net bowler Dayanand Garani has tested positive.

    Details 👇

    — BCCI (@BCCI) July 15, 2021 " class="align-text-top noRightClick twitterSection" data=" ">

ಮತ್ತೊಬ್ಬ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ಬೌಲಿಂಗ್ ಕೋಚ್ ಭಾರತ್ ಅರುಣ್ ಮತ್ತು ಹೆಚ್ಚುವರಿ ಆಟಗಾರ ಅಭಿಮನ್ಯು ಈಶ್ವರನ್ ಅವರ ಕೋವಿಡ್‌ ಆರ್‌ಟಿ-ಪಿಸಿಆರ್ ನೆಗೆಟಿವ್‌ ಬಂದಿದೆ. ಈ ಮೂವರನ್ನು ಐಸೋಲೇಷನ್‌ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಾರಣ ಇವರನ್ನು ಪ್ರತ್ಯೇಕಿಸಲಾಗಿದೆ. ಅಭ್ಯಾಸ ಪಂದ್ಯಕ್ಕಾಗಿ ಈ ಆಟಗಾರರು ಮತ್ತು ಸಿಬ್ಬಂದಿ ಟೀಂ ಇಂಡಿಯಾದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ. ಜುಲೈ 20 ರಿಂದ ಡರ್ಹಾಮ್‌ನಲ್ಲಿ ಆರಂಭವಾಗುವ ಅಭ್ಯಾಸ ಪಂದ್ಯವನ್ನು ಪಂತ್ ಮತ್ತು ಸಹಾ ಇಬ್ಬರೂ ಮಿಸ್‌ ಮಾಡಿಕೊಳ್ಳಲಿದ್ದಾರೆ.

ಆಗಸ್ಟ್ 4 ರಂದಿಂದ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ನಡೆಯಲಿದೆ. ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಬಳಿಕ ಭಾರತೀಯ ಟೆಸ್ಟ್ ತಂಡ ಒಂದು ತಿಂಗಳಿಗೂ ಹೆಚ್ಚು ಕಾಲ ಇಂಗ್ಲೆಂಡ್‌ನಲ್ಲಿದೆ. ಫೈನಲ್ ನಂತರ, ತಂಡದ ಸದಸ್ಯರು ವಿಶ್ರಾಂತಿ ಪಡೆದಿದ್ದರು. ಡರ್ಹಾಮ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕಿಂತ ಮುನ್ನ ಎಲ್ಲರೂ ಒಟ್ಟುಗೂಡುವ ನಿರೀಕ್ಷೆಯಿದೆ.

Wicket-keeper Rishabh Pant nears completion of his self-quarantine period while net bowler Dayanand Garani has tested positive fo
ವೆಂಬ್ಲಿಯಲ್ಲಿ ಫುಟ್ಬಾಲ್‌ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ತೆಗೆದಿರುವ ಫೋಟೋ

ರಿಷಬ್‌ ಪಂತ್ ಸೋಂಕು ಲಕ್ಷಣರಹಿತರಾಗಿದ್ದಾರೆ. ಇತ್ತೀಚೆಗೆ ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಯುರೋ 2020 ಫುಟ್ಬಾಲ್ ಪಂದ್ಯವನ್ನು ಅವರು ವೀಕ್ಷಿಸಿದ್ದರು. ತಂಡವು ಇಂಗ್ಲೆಂಡ್‌ಗೆ ತೆರಳುವ ಮುನ್ನ ಮೇ 13 ರಂದು ಪಂತ್ ಮೊದಲ ಕೋವಿಡ್‌ ಲಸಿಕೆ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.