ETV Bharat / sports

ರೋಚಕ ಟೆಸ್ಟ್​​ ಪಂದ್ಯದಲ್ಲಿ ಗೆದ್ದು ಬೀಗಿದ ವೆಸ್ಟ್​ ಇಂಡೀಸ್: ಪಾಕ್​ ತಂಡಕ್ಕೆ ವಿಲನ್​ ಆದ ಕೆಮರ್ ರೋಚ್ - ವೆಸ್ಟ್​ ಇಂಡೀಸ್​ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್

ಪಾಕ್​ ವಿರುದ್ಧದ ರೋಚಕ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸುವ ಮೂಲಕ ವೆಸ್ಟ್​ ಇಂಡೀಸ್​ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಖಾತೆ ತೆರೆದಿದೆ.

West Indies won
West Indies won
author img

By

Published : Aug 16, 2021, 9:21 AM IST

ಜಮೈಕಾ(ವೆಸ್ಟ್​ ಇಂಡೀಸ್​): ಪ್ರವಾಸಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಸವಾರಿ ಮಾಡಿದ ಆತಿಥೇಯ ವೆಸ್ಟ್​ ಇಂಡೀಸ್​​​ 1 ವಿಕೆಟ್​ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

168 ರನ್​ಗಳ ಗೆಲುವಿನ ಗುರಿ ಬೆನ್ನತ್ತಿದ್ದ ವೆಸ್ಟ್​ ಇಂಡೀಸ್​​ ಕೇವಲ 16 ರನ್ ​ಗಳಿಸುವಷ್ಟರಲ್ಲಿ ಆರಂಭಿಕ ಮೂರು ವಿಕೆಟ್​ ಕಳೆದುಕೊಂಡಿತು. ಬ್ರಾಥ್​ವೈಟ್ ​(2), ಪೂವೆಲ್ ​(4) ಹಾಗೂ ಬೋನರ್ ​(5) ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ರೊಸ್ಟೊನ್​ ಹಾಗೂ ಬ್ಲಾಕ್​ವುಡ್​ ಮುರಿಯದ 4ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟವಾಡಿದರು. ಆದರೆ ಇವರ ವಿಕೆಟ್​ ಪಡೆದುಕೊಳ್ಳುವಲ್ಲಿ ಪಾಕ್​​ನ ಅಶ್ರಫ್​ ಯಶಸ್ವಿಯಾಗಿ ತಂಡಕ್ಕೆ ಮತ್ತೆ ಮುನ್ನಡೆ ತಂದಿಟ್ಟರು.

142 ರನ್​​ಗಳಿಕೆ ಮಾಡಿದ್ದ ವೇಳೆ 8 ವಿಕೆಟ್​ ಕಳೆದುಕೊಂಡು ವೆಸ್ಟ್​ ಇಂಡೀಸ್ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಜೊತೆಗೆ ಗೆಲುವಿಗೆ 26 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕೆಮರ್​ (30 ಅಜೇಯ) ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ವೆಸ್ಟ್​ ಇಂಡೀಸ್ ಗೆಲುವಿನ ಖಾತೆ ಓಪನ್ ಮಾಡಿದೆ.

ದಾಖಲೆ ಬರೆದ ವೆಸ್ಟ್ ಇಂಡೀಸ್ ಬೌಲರ್​

ಪಾಕ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ನ ವೇಗದ ಬೌಲರ್ ಜೇಡನ್​ ಸೀಲ್ಸ್​ ದಾಖಲೆ ಬರೆದಿದ್ದಾರೆ. ಕೇವಲ 19 ವರ್ಷದ ಈ ಯುವ ವೇಗಿ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಕಬಳಿಕೆ ಮಾಡಿದ್ದು, ಕೆರಿಬಿಯನ್​ ತಂಡದ ಪರ ಅತಿ ಚಿಕ್ಕ ವಯಸ್ಸಿನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಮೊದಲ ಟೆಸ್ಟ್​ನ ಎರಡು ಇನ್ನಿಂಗ್ಸ್​​ನಿಂದ ಒಟ್ಟು 8 ವಿಕೆಟ್​ ಕಬಳಿಸಿದ್ದಾರೆ.​​​

ಇದನ್ನೂ ಓದಿ: ತೀವ್ರ ಕುತೂಹಲ ಮೂಡಿಸಿದ ಲಾರ್ಡ್ಸ್​ ಟೆಸ್ಟ್: ಸಂಕಷ್ಟದಲ್ಲಿರುವ ಭಾರತಕ್ಕೆ ರಿಷಭ್ ಆಕ್ಸಿಜನ್?

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 217 ಹಾಗೂ 203 ರನ್​, ವೆಸ್ಟ್​ ಇಂಡೀಸ್​​ 253 ಹಾಗೂ 168/9

ಶುಕ್ರವಾರದಿಂದ ಇದೇ ಮೈದಾನದಲ್ಲಿ ವೆಸ್ಟ್​ ಇಂಡೀಸ್​-ಪಾಕಿಸ್ತಾನದ ನಡುವೆ ಎರಡನೇ ಟೆಸ್ಟ್​ ಪಂದ್ಯ ಆರಂಭಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.