ETV Bharat / sports

ಮುಂದಿನ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಂಡೀಸ್, ಲಂಕಾ ಫೇಲ್‌: ಬಾಂಗ್ಲಾ, ಅಫ್ಘಾನ್ ಪಾಸ್​

ನವೆಂಬರ್​ 15, 2022 ವಿಶ್ವಕಪ್​ಗೆ ನೇರ ಅರ್ಹತೆ ಪಡೆದುಕೊಳ್ಳಲು ಅಂತಿಮ ದಿನಾಂಕವಾಗಿದ್ದು ಇಂಗ್ಲೆಂಡ್ , ಪಾಕಿಸ್ತಾನ, ಭಾರತ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಈಗಾಗಲೇ ಅರ್ಹತೆ ಪಡೆದುಕೊಂಡಿವೆ.

2022 T20 WC
2022 ಟಿ20 ವಿಶ್ವಕಪ್​
author img

By

Published : Nov 7, 2021, 4:53 PM IST

ದುಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಆದರೆ 2 ಬಾರಿಯ ವಿಶ್ವ ಚಾಂಪಿಯನ್​ ವೆಸ್ಟ್​ ಇಂಡೀಸ್​ ಮತ್ತು ಮಾಜಿ ಚಾಂಪಿಯನ್​ ಶ್ರೀಲಂಕಾ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ.

ಪ್ರಸ್ತುತ ವಿಶ್ವಕಪ್​ನಲ್ಲಿನ ಚಾಂಪಿಯನ್ ಮತ್ತು ರನ್ನರ್ ಅಪ್​ ತಂಡಗಳು​ ಮತ್ತು ಟಿ20 ಶ್ರೇಯಾಂಕದ ಅಗ್ರ 6 ತಂಡಗಳು 2022 ರ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆಯಲಿವೆ.

ನವೆಂಬರ್​ 15, 2022 ವಿಶ್ವಕಪ್​ಗೆ ನೇರ ಅರ್ಹತೆ ಪಡೆದುಕೊಳ್ಳಲು ಅಂತಿಮ ದಿನಾಂಕವಾಗಿದ್ದು ಇಂಗ್ಲೆಂಡ್ , ಪಾಕಿಸ್ತಾನ, ಭಾರತ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಈಗಾಗಲೇ ಅರ್ಹತೆ ಪಡೆದುಕೊಂಡಿವೆ.

ಶನಿವಾರ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ನಂತರ ವೆಸ್ಟ್​ ಇಂಡೀಸ್​ ತಂಡ ಟಿ20 ಶ್ರೇಯಾಂಕದಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ 9ನೇ ಸ್ಥಾನದಲ್ಲಿದ್ದರೆ ಬಾಂಗ್ಲಾದೇಶ 8ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವಕಪ್​ನಲ್ಲಿ ಸತತ 5 ಪಂದ್ಯಗಳಲ್ಲಿ ಸೋತರೂ ಕಳೆದ ತಿಂಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ಟಿ20 ಸರಣಿ ಗೆದ್ದಿದ್ದರಿಂದ ಬಾಂಗ್ಲಾದೇಶ 8ನೇ ಶ್ರೇಯಾಂಕವನ್ನು ಉಳಿಸಿಕೊಳ್ಳಲು ನೆರವಾಗಿದೆ.

ವೆಸ್ಟ್​ ಇಂಡೀಸ್,​ ಶ್ರೀಲಂಕಾ ತಂಡಗಳ ಜೊತೆಗೆ ಪ್ರಸ್ತುತ ಸೂಪರ್ 12 ಪ್ರವೇಶಿಸಿದ ನಮೀಬಿಯಾ ಮತ್ತು ಸ್ಕಾಟ್ಲೆಂಡ್​ ತಂಡಗಳು ಮುಂದಿನ ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಆಡಲಿವೆ.

ಇದನ್ನೂ ಓದಿ: ಬೌಲರ್​ ನಾಯಕನಾಗಲಾರ ಎಂದು ಎಲ್ಲೂ ಹೇಳಿಲ್ಲ, ಕೊಹ್ಲಿ ಜಾಗಕ್ಕೆ ಈತನೇ ಸೂಕ್ತ: ನೆಹ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.