ಬೆಂಗಳೂರು: ಟಿ20 ಕ್ರಿಕೆಟ್ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಅಫ್ಘಾನಿಸ್ತಾನದೊಂದಿಗೆ ಕೊನೆಯ ಚುಟುಕು ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ ಕಪ್ ಗೆದ್ದುಕೊಂಡಿದೆ. ಆದರೆ ಈಗ ಟಿ20ಯಲ್ಲಿ ತಂಡ ಹೊಸ ಇತಿಹಾಸ ಬರೆಯಲು ಸಿದ್ಧವಾಗುತ್ತಿದೆ. ಬೆಂಗಳೂರಿನಲ್ಲಿಂದು ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೆ, ಟಿ20 ಇತಿಹಾಸದಲ್ಲಿ ಎದುರಾಳಿಯನ್ನು ಅತಿ ಹೆಚ್ಚು ಬಾರಿ ವೈಟ್‌ವಾಶ್ ಮಾಡಿದ ತಂಡವಾಗಿ ಭಾರತ ಹೊರಹೊಮ್ಮುವ ಸಾಧ್ಯತೆ ಇದೆ.
ಇಲ್ಲಿಯವರೆಗೆ ಟಿ20 ಇತಿಹಾಸದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಗಳಲ್ಲಿ ಅತಿ ಹೆಚ್ಚು ವೈಟ್‌ವಾಶ್ (8) ಮಾಡಿದ ತಂಡಗಳಾಗಿವೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಮಹತ್ವ ಪಡೆದುಕೊಂಡಿದೆ.
-
Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024 " class="align-text-top noRightClick twitterSection" data="
">Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024
ಈ ನಡುವೆ ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿರುವುದು ಗೊತ್ತೇ ಇದೆ. ಎರಡು ಪಂದ್ಯಗಳಲ್ಲಿ ಎದುರಾಳಿಯನ್ನು ಮಣಿಸಿರುವ ರೋಹಿತ್ ಟೀಂ ಮೂರನೇ ಟಿ20ಯಲ್ಲಿ ಅಮೋಘ ಪ್ರದರ್ಶನ ನೀಡಿ ಗೆಲ್ಲುವ ಸಂಕಲ್ಪ ತೊಟ್ಟಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಅಫ್ಘಾನಿಸ್ತಾನ ಈ ಪಂದ್ಯದಲ್ಲಿ ಎಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಭಾರತ ಈ ಸರಣಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದರೆ ಟಿ20 ವಿಶ್ವಕಪ್‌ಗೂ ಮುನ್ನ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬಹುದು. ಇನ್ನೊಂದೆಡೆ, ಮೊದಲೆರಡು ಪಂದ್ಯಗಳಲ್ಲಿ ಡಕೌಟ್ ಆಗಿದ್ದ ನಾಯಕ ರೋಹಿತ್ ಶರ್ಮಾ ಮೂರನೇ ಟಿ20ಯಲ್ಲಾದರೂ ಉತ್ತಮ ಪ್ರದರ್ಶನ ನೀಡುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲ.
ಭಾರತ-ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್/ಅವೇಶ್ ಖಾನ್.
ಅಫ್ಘಾನಿಸ್ತಾನ-ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ನವೀನ್ ಉಲ್ ಹಕ್, ಫಜಲ್ಹಕ್ ಫಾರೂಕಿ.
ಇದನ್ನೂ ಓದಿ: ಚೆಸ್ ಸ್ಪರ್ಧೆ: ವಿಶ್ವನಾಥನ್ ಆನಂದ್ರನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಪ್ರಜ್ಞಾನಂದ