ಹೈದರಾಬಾದ್: ಇತ್ತೀಚೆಗೆ ದೇಶದಲ್ಲಿರುವ ಬ್ರಿಟನ್ನ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮಸಾಲೆ ದೋಸೆ ಸವಿದು ಖುಷಿಪಟ್ಟಿದ್ದರು. ಅದರಲ್ಲೂ ತಾವು ತಿಂದ ಮಸಾಲೆ ದೋಸೆಯ ಸವಿಯ ಅನುಭವವನ್ನ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ, ಹಾಗೂ ಮುಖ್ಯಮಂತ್ರಿಗಳಿಗೆ ಕನ್ನಡದಲ್ಲಿಯೇ ನಮಸ್ಕಾರ ಎಂದು ಸಂಬೋಧಿಸಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನೆಗೆದ್ದಿದ್ದರು.
-
Cricket expressions in Indian languages part 2.
— Alex Ellis (@AlexWEllis) August 7, 2021 " class="align-text-top noRightClick twitterSection" data="
Today, we’re down south in Bengaluru.
What better teacher than ‘The Coach’ #RahulDravid, who taught taught me this in #Kannada ಕನ್ನಡ 👇 pic.twitter.com/tDCtHOcIwa
">Cricket expressions in Indian languages part 2.
— Alex Ellis (@AlexWEllis) August 7, 2021
Today, we’re down south in Bengaluru.
What better teacher than ‘The Coach’ #RahulDravid, who taught taught me this in #Kannada ಕನ್ನಡ 👇 pic.twitter.com/tDCtHOcIwaCricket expressions in Indian languages part 2.
— Alex Ellis (@AlexWEllis) August 7, 2021
Today, we’re down south in Bengaluru.
What better teacher than ‘The Coach’ #RahulDravid, who taught taught me this in #Kannada ಕನ್ನಡ 👇 pic.twitter.com/tDCtHOcIwa
ಮತ್ತೆ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಸದ್ಯ ಸುದ್ದಿಯಲ್ಲಿದ್ದು, ಕ್ರಿಕೆಟ್ ದಂತಕಥೆ ಕನ್ನಡಿಗ ರಾಹುಲ್ ದ್ರಾವಿಡ್ರಿಂದ ಕನ್ನಡ ಪಾಠ ಕಲಿತಿದ್ದಾರೆ. ವಾಲ್ ಎಂದೇ ಖ್ಯಾತಿಯಲ್ಲಿರುವ ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರನ್ನ ಭೇಟಿ ಮಾಡಿದ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ರಾಹುಲ್ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ.
ಕನ್ನಡದ ಒಂದು ಪದವನ್ನು ನಾನು ಈಗ ರಾಹುಲ್ರಿಂದ ಕಲಿಯುತ್ತಿದ್ದೇನೆ ಎಂದು ಹೇಳಿರುವ ಅವರು, ರಾಹುಲ್ ಹೇಳಿಕೊಟ್ಟ ‘ಬೇಗ ಓಡಿ’ ಪದವನ್ನು ಕನ್ನಡದಲ್ಲಿ ಉಚ್ಛರಿಸಿ ಖುಷಿ ಪಟ್ಟಿದ್ದಾರೆ. ಈ ಸಂದರ್ಭವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನಗೆ ಕನ್ನಡ ಕಲಿಸಿಕೊಟ್ಟ ರಾಹುಲ್ ದ್ರಾವಿಡ್ಗಿಂತ ಮತ್ತೊಬ್ಬ ಉತ್ತಮ ಶಿಕ್ಷಕರಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮಸಾಲೆ ದೋಸೆ ಬೊಂಬಾಟ್ ಗುರು ... ಕನ್ನಡದಲ್ಲೇ ಟ್ವಿಟ್ ಮಾಡಿದ ಬ್ರಿಟಿಷ್ ಹೈ ಕಮಿಷನರ್