ಫ್ಲೋರಿಡಾ: ಭಾರತದ ತ್ರಿವಳಿ ಸ್ಪಿನ್ನರ್ ಗಳಾದ ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್ ಅವರು ಹೆಣೆದ ಬಲೆಗೆ ಬೀಳುವ ಮೂಲಕ ಕೊನೆಯ, 5ನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಭಾರತದ ಎದುರು 88 ರನ್ಗಳ ಹೀನಾಯ ಸೋಲು ಕಂಡಿತು. ಪಂದ್ಯದಲ್ಲಿ ಸ್ಪಿನ್ನರ್ಗಳು ಎಲ್ಲ 10 ವಿಕೆಟ್ಗಳನ್ನು ಕಬಳಿಸಿದ್ದು ವಿಶೇಷವಾಗಿತ್ತು. ಟಿ-20ಯಲ್ಲಿ ಈ ಸಾಧನೆ ಮೂಡಿ ಬಂದಿದ್ದು ಇದೇ ಮೊದಲಾಗಿದೆ.
-
For his superb bowling display of 3⃣/1⃣5⃣, @akshar2026 bags the Player of the Match award as #TeamIndia beat West Indies in the fifth #WIvIND T20I to complete a 4-1 series win. 👏 👏
— BCCI (@BCCI) August 7, 2022 " class="align-text-top noRightClick twitterSection" data="
Scorecard 👉 https://t.co/EgKXTtbLEa pic.twitter.com/ihN8RyQT4S
">For his superb bowling display of 3⃣/1⃣5⃣, @akshar2026 bags the Player of the Match award as #TeamIndia beat West Indies in the fifth #WIvIND T20I to complete a 4-1 series win. 👏 👏
— BCCI (@BCCI) August 7, 2022
Scorecard 👉 https://t.co/EgKXTtbLEa pic.twitter.com/ihN8RyQT4SFor his superb bowling display of 3⃣/1⃣5⃣, @akshar2026 bags the Player of the Match award as #TeamIndia beat West Indies in the fifth #WIvIND T20I to complete a 4-1 series win. 👏 👏
— BCCI (@BCCI) August 7, 2022
Scorecard 👉 https://t.co/EgKXTtbLEa pic.twitter.com/ihN8RyQT4S
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 188 ರನ್ ಪೇರಿಸಿತು. ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದ ಇಶಾನ್ ಕಿಶನ್ 11 ವಿಫಲವಾದರೆ, ಶ್ರೇಯಸ್ ಅಯ್ಯರ್ ಜೊತೆಗೂಡಿದ ದೀಪಕ್ ಹೂಡಾ ಇನಿಂಗ್ಸ್ ಕಟ್ಟಿದರು. ಅಯ್ಯರ್ 64 ರನ್ ಬಾರಿಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಅರ್ಧಶತಕ ಗಳಿಸಿದರು. ಹೂಡಾ 38, ಹಾರ್ದಿಕ್ ಪಾಂಡ್ಯಾ ಅಬ್ಬರದ 28 ರನ್ ಚಚ್ಚಿದರು. ವಿಂಡೀಸ್ನ ಒಡಿಯನ್ ಸ್ಮಿತ್ 3 ವಿಕೆಟ್ ಪಡೆದರು.
ಸ್ಪಿನ್ತ್ರಯರ ಅಸ್ತ್ರಕ್ಕೆ ವಿಂಡೀಸ್ ತತ್ತರ: ಕಠಿಣ ಗುರಿ ಹಿಂದೆ ಬಿದ್ದ ವಿಂಡೀಸ್ಗೆ ಭಾರತದ ಸ್ಪಿನ್ನರ್ಗಳು ದುಸ್ವಪ್ನವಾದರು. ಶಮ್ರಾಹ್ ಬ್ರೂಕ್ಸ್ ಜೊತೆ ಇನಿಂಗ್ಸ್ ಆರಂಭಿಸಿದ ಜಾಸನ್ ಹೋಲ್ಡರ್ಗೆ(0) 3ನೇ ಎಸೆತದಲ್ಲಿಯೇ ಅಕ್ಸರ್ ಪಟೇಲ್ ಕ್ಲೀನ್ಬೌಲ್ಡ್ ಮಾಡಿದರು. ಇದಾದ ಬಳಿಕ ಶಮ್ರಾಹ್ ಬ್ರೂಕ್ಸ್ (13), ಡೆವೋನ್ ಥಾಮಸ್ (10) ರನ್ನೂ ಅಕ್ಸರ್ ಪೆವಿಲಿಯನ್ಗೆ ಅಟ್ಟಿದರು.
ಹೆಟ್ಮಾಯಿರ್ ಏಕಾಂಗಿ ಹೋರಾಟ: ಒಂದೆಡೆ ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಶಿಮ್ರಾನ್ ಹೆಟ್ಮಾಯಿರ್ ಇನಿಂಗ್ಸ್ ಕಟ್ಟುತ್ತಿದ್ದರು. ಭರ್ಜರಿ ಬ್ಯಾಟ್ ಬೀಸಿದ ವಿಂಡೀಸ್ ದಾಂಡಿಗ 56 ರನ್ ಸಿಡಿಸಿದರು. ತಂಡವನ್ನು ಗೆಲ್ಲಿಸಲು ಹೆಟ್ಮಾಯಿರ್ಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ.
ಬಳಿಕ 54 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಬಳಿಕ 50 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಪತನವಾದವು. 5 ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದರು. ಎಲ್ಲ ಹತ್ತು ವಿಕೆಟ್ಗಳಲ್ಲಿ ಅಕ್ಸರ್ ಪಟೇಲ್ 3, ರವಿ ಬಿಷ್ಣೋಯಿ 4, ಕುಲದೀಪ್ ಯಾದವ್ 3 ವಿಕೆಟ್ಗಳನ್ನು ಹಂಚಿಕೊಂಡರು.
ಪಂದ್ಯದ ದಿಕ್ಕನ್ನೇ ಬದಲಿಸಿದ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇದೇ ಮೊದಲ ಬಾರಿಗೆ ಸರಣಿಯಲ್ಲಿ ಎಲ್ಲ ಪಂದ್ಯ ಆಡಿದ ಅರ್ಷದೀಪ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಭಾರತ 5 ಪಂದ್ಯಗಳ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತು.
ಓದಿ: ಕಾಮನ್‌ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಜರೀನ್ಗೆ ಬಂಗಾರ, ಟೇಬಲ್ ಟೆನಿಸ್ನಲ್ಲಿ ಬೆಳ್ಳಿ ಪದಕ