ಪೋರ್ಟ್ ಆಫ್ ಸ್ಪೇನ್(ಟ್ರಿನಿಡಾಡ್): ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವಾಡ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿತು. ಈ ವೇಳೆ, ಆರಂಭಿಕರಾಗಿ ಶಿಖರ್ ಧವನ್ ಹಾಗೂ ಯಂಗ್ ಪ್ಲೇಯರ್ ಶುಭ್ಮನ್ ಗಿಲ್ ಕಣಕ್ಕಿಳಿದಿದ್ದರು. ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ ಈ ಅರ್ಧಶತಕ ಅವರ ಬ್ಯಾಟ್ನಿಂದ ಸಿಡಿದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಗಿಲ್ ಅರ್ಧಶತಕ ಸಾಧನೆ ಮಾಡಿದರು. 2019ರಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಏಕದಿನ ಪಂದ್ಯವಾಡಿರುವ ಗಿಲ್ಗೆ ತಂಡದಲ್ಲಿ ಹೆಚ್ಚಿನ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ನಲ್ಲಿ ತಮಗೆ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು 64ರನ್ಗಳಿಕೆ ಮಾಡಿದರು. ಜೊತೆಗೆ ನಾಯಕ ಧವನ್ ಜೊತೆ ಸೇರಿ 119ರನ್ಗಳ ಜೊತೆಯಾಟವಾಡಿದರು. ಚೊಚ್ಚಲ ಅರ್ಧಶತಕ ಸಾಧನೆ ಮಾಡಿರುವ ಗಿಲ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.
-
Sara Tendulkar will be very pleased after watching Shubman Gill batting tonight.#INDvWI #WIvIND #WIvsIND pic.twitter.com/98pfSZwcLt
— CRICKET VIDEOS🏏 (@Abdullah__Neaz) July 22, 2022 " class="align-text-top noRightClick twitterSection" data="
">Sara Tendulkar will be very pleased after watching Shubman Gill batting tonight.#INDvWI #WIvIND #WIvsIND pic.twitter.com/98pfSZwcLt
— CRICKET VIDEOS🏏 (@Abdullah__Neaz) July 22, 2022Sara Tendulkar will be very pleased after watching Shubman Gill batting tonight.#INDvWI #WIvIND #WIvsIND pic.twitter.com/98pfSZwcLt
— CRICKET VIDEOS🏏 (@Abdullah__Neaz) July 22, 2022
ಶುಬ್ಮನ್ ಗಿಲ್ ಈಗಾಗಲೇ ಟೀಂ ಇಂಡಿಯಾ ಪರ 11 ಟೆಸ್ಟ್ ಪಂದ್ಯ ಆಡಿದ್ದು, ಟಿ-20 ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಆದರೆ, ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ.
97ರನ್ಗಳಿಸಿ ಶಿಖರ್ ಧವನ್ ಔಟ್: ನಾಯಕನ ಜವಾಬ್ದಾರಿ ಹೊತ್ತುಕೊಂಡು ಉತ್ತಮವಾಗಿ ಬ್ಯಾಟ್ ಬೀಸಿದ ಶಿಖರ್ ಧವನ್ 97ರನ್ಗಳಿಕೆ ಮಾಡಿ, ವಿಕೆಟ್ ಓಪ್ಪಿಸಿದರು. ತಾವು ಎದುರಿಸಿದ 99 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 97ರನ್ಗಳಿಸಿ ಬ್ರೋಕ್ಸ್ ಓವರ್ನಲ್ಲಿ ಔಟಾದರು.