ETV Bharat / sports

IND vs WI 5th T20: ಸೂರ್ಯಕುಮಾರ್​ ಅರ್ಧಶತಕ; ವೆಸ್ಟ್​ ಇಂಡೀಸ್​ಗೆ 166 ರನ್​ ಗುರಿ - ETV Bharath Kannada news

West Indies vs India, 5th T20I: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಣ ಐದನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರ ಜವಾಬ್ದಾರಿಯುತ ಆಟದಿಂದ ಭಾರತ ತಂಡವು 9 ವಿಕೆಟ್​ ನಷ್ಟಕ್ಕೆ 165 ರನ್​ ಗಳಿಸಿದೆ.

west-indies-vs-india-5th-t20-at-florida
IND vs WI 5th T20: ಸೂರ್ಯಕುಮಾರ್​ ಅರ್ಧಶತಕ: ವೆಸ್ಟ್​ ಇಂಡೀಸ್​ಗೆ 166 ರನ್​ ಗುರಿ
author img

By

Published : Aug 13, 2023, 7:55 PM IST

Updated : Aug 13, 2023, 11:01 PM IST

ಫ್ಲೋರಿಡಾ (ಅಮೆರಿಕ): ಇಲ್ಲಿನ ಬ್ರೋವರ್ಡ್​ ರೀಜನಲ್ ಪಾರ್ಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಣ ಐದನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 165 ರನ್​ ಗಳಿಸಿತು. ಈ ಮೂಲಕ ವೆಸ್ಟ್​ ಇಂಡೀಸ್​ ತಂಡಕ್ಕೆ 166 ರನ್‌ಗಳ ಗುರಿ ನೀಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಹಿಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಯಶಸ್ವಿ ಜೈಸ್ವಾಲ್​ ಮತ್ತು ಶುಭ್​ಮನ್​ ಗಿಲ್​ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫರಾದರು. ಜೈಸ್ವಾಲ್​​ 5 ರನ್​ ಗಳಿಸಿದರೆ ಅಕೀಲ್ ಹುಸೇನ್​ಗೆ ವಿಕೆಟ್​ ಒಪ್ಪಿಸಿದರೆ, ಶುಭ್​ಮನ್​ ಗಿಲ್ ಕೂಡ​ 9 ರನ್​ ಗಳಿಸಿ ಅಕೀಲ್ ಹುಸೇನ್​ ಎಸೆತದಲ್ಲಿ ಎಲ್​ವಿ ಬಲೆಗೆ ಬಿದ್ದರು.

ಬಳಿಕ ಬಂದ ಸ್ಪೋಟಕ ಬ್ಯಾಟ್ಸ್​ಮನ್​ ಸೂರ್ಯ ಕುಮಾರ್​ ಯಾದವ್​ ಅರ್ಧಶತಕ ಗಳಿಸಿ ಭಾರತ ತಂಡಕ್ಕೆ ಆಸರೆಯಾದರು. ಸೂರ್ಯ ಕುಮಾರ್​ 3 ಸಿಕ್ಸರ್​, 4 ಬೌಂಡರಿ ನೆರವಿನಿಂದ 61 ರನ್​ ಗಳಿಸಿದ್ದಾಗ ಜೇಸನ್​ ಹೋಲ್ಡರ್​ ಎಸೆತದಲ್ಲಿ ಎಲ್​ಬಿಗೆ ಬಲಿಯಾದರು. ಬಳಿಕ ಬಂದ ತಿಲಕ್​ ವರ್ಮಾ 2 ಸಿಕ್ಸರ್​, 3 ಬೌಂಡರಿಯೊಂದಿಗೆ 27 ರನ್​ ಗಳಿಸಿ ಔಟಾದರು. ನಂತರ ಬಂದ ಸಂಜು ಸಾಮ್ಸನ್​​ 13 ರನ್​, ನಾಯಕ ಹಾರ್ದಿಕ್​ ಪಾಂಡ್ಯ 14 ರನ್​, ಅಕ್ಷರ್ ಪಟೇಲ್​ 13 ರನ್​, ಅರ್ಷದೀಪ್​ ಸಿಂಗ್​ 8 ರನ್​, ಮುಕೇಶ್ ಕುಮಾರ್​ 4 ರನ್​ ಗಳಿಸಿದರು. ಅಂತಿಮವಾಗಿ ಭಾರತ ತಂಡ 9 ವಿಕೆಟ್​ ನಷ್ಟಕ್ಕೆ 165 ರನ್​ ಗಳಿಸಲಷ್ಟೇ ಶಕ್ತವಾಯಿತು.

ವೆಸ್ಟ್​ ಇಂಡೀಸ್ ಪರ, ರೊಮಾರಿಯೋ ಶೆಫರ್ಡ್​ 31/ 4 ವಿಕೆಟ್​ ಪಡೆದು ಮಿಂಚಿದರೆ, ಅಕೀಲ್​ ಹುಸೇನ್​ 24/2, ಜೇಸನ್​ ಹೋಲ್ಡರ್​ 36/2, ರೋಸ್ಟನ್​ ಚೇಸ್​​ 1 ವಿಕೆಟ್​ ಪಡೆದರು. ಈ ಮೊತ್ತವನ್ನು ಬೆನ್ನತ್ತಿರುವ ವೆಸ್ಟ್​ ಇಂಡೀಸ್​ ಪಡೆ, ಎರಡನೇ ಓವರ್​ನಲ್ಲಿ ಕೈಲ್ ಮೇಯರ್ಸ್ (10)​ ವಿಕೆಟ್​ ಕಳೆದುಕೊಂಡರೂ, ಅಬ್ಬರ ಆಟ ಮುಂದುವರೆಸಿದೆ. ಬ್ರಾಂಡನ್​ ಕಿಂಗ್​ 30 ರನ್​ ಗಳಿಸಿದ್ದು, ನಿಕೊಲಸ್​ ಪೂರನ್​ 27 ರನ್​ ಗಳಿಸಿ ಆಟ ಮುಂದುವರೆಸಿದ್ದಾರೆ. 7 ಓವರ್ ಅಂತ್ಯಕ್ಕೆ ವೆಸ್ಟ್​ ಇಂಡೀಸ್​ 71 ರನ್​ಗೆ 1 ವಿಕೆಟ್​ ಕಳೆದುಕೊಂಡಿದೆ.

ಇಂದಿನ ಪಂದ್ಯಕ್ಕೆ ಭಾರತ ಹಿಂದಿನ ತಂಡವನ್ನೇ ಕಣಕ್ಕಿಳಿಸಿದೆ. ವೆಸ್ಟ್​ ಇಂಡೀಸ್​ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಮೆಕಾಯ್‌ಗೆ ವಿಶ್ರಾಂತಿ ನೀಡಲಾಗಿದೆ.

ನಿನ್ನೆ ನಾಲ್ಕನೇ ಪಂದ್ಯ ನಡೆದ ಪಿಚ್​ನಲ್ಲೇ ಈ ಪಂದ್ಯವೂ ನಡೆಯುತ್ತಿದೆ. ಪಿಚ್​ ವರದಿ ಪ್ರಕಾರ, ಮೊದಲು ಬ್ಯಾಟಿಂಗ್​ ಮಾಡುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಆದರೆ ನಿನ್ನೆ ಟೀಂ ಇಂಡಿಯಾ ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿತ್ತು. ಈ ಪಿಚ್​ನಲ್ಲಿ ದೊಡ್ಡ ಮೊತ್ತವನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಚೇಸ್​ ಮಾಡಬಹುದು ಎಂಬುದನ್ನು ಬ್ಲೂ ಬಾಯ್ಸ್​​ ಪ್ರೂವ್​ ಮಾಡಿದ್ದಾರೆ.

ಭಾರತದ ಟಾಪ್​ ಐದು ಬ್ಯಾಟರ್​ಗಳು ಫಾರ್ಮ್​ನಲ್ಲಿದ್ದು, ಸ್ಪಿನ್​ ವಿಭಾಗವೂ ವೆಸ್ಟ್​ ಇಂಡೀಸ್​ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗುತ್ತಿದೆ. ಡೆತ್​ ಓವರ್​ಗಳಲ್ಲಿ ಮುಖೇಶ್​ ಕುಮಾರ್​ ವಿಕೆಟ್​ ಪಡೆಯುವುದರ ಜೊತೆಗೆ ರನ್​ ಗಳಿಕೆಗೆ ಕಡಿವಾಣ ಹಾಕುತ್ತಿದ್ದಾರೆ.

ಮೊದಲು ಬ್ಯಾಟಿಂಗ್​ಗೆ ಇಳಿಯುತ್ತಿರುವ ಭಾರತ ದೊಡ್ಡ ಗುರಿ ನೀಡುವ ಲೆಕ್ಕಾಚಾರದಲ್ಲಿದೆ ಎಂದು ಹಾರ್ದಿಕ್​ ತಿಳಿಸಿದ್ದಾರೆ. ಕಳೆದ ಪಂದ್ಯದ ಸೋಲಿಗೆ ಬೌಲರ್​ಗಳು ಕಾರಣ ಎಂದಿದ್ದ ಪೊವೆಲ್​, ಒಂದು ಬದಲಾವಣೆಯೊಂದಿಗೆ ಭಾರತವನ್ನು ಮಣಿಸುವ ಯೋಚನೆಯಲ್ಲಿದ್ದಾರೆ.

ಇದನ್ನೂ ಓದಿ: Fourth T20: ಗಿಲ್​, ಯಶಸ್ವಿ ಬ್ಯಾಟಿಂಗ್​ಗೆ ಮಂಡಿಯೂರಿದ ವಿಂಡೀಸ್​.. ಭಾರತಕ್ಕೆ 9 ವಿಕೆಟ್​ ಜಯ, ಇಂದು ಸರಣಿ ಕ್ಲೈಮ್ಯಾಕ್ಸ್

Last Updated : Aug 13, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.