ETV Bharat / sports

WI vs Ind: ವಾರ್ನರ್​ ಪಾರ್ಕ್​ನಲ್ಲಿ ಮೆರೆದಾಡಿದ ಭಾರತ.. ವಿಂಡೀಸ್​ ವಿರುದ್ಧ 7 ವಿಕೆಟ್​ ಜಯ - ಭಾರತ ವೆಸ್ಟ್​ ಇಂಡೀಸ್ ಪಂದ್ಯದ ಫಲಿತಾಂಶ

ವಾರ್ನರ್ ಪಾರ್ಕ್​ನಲ್ಲಿ ನಡೆದ 3ನೇ ಟಿ-20 ಪಂದ್ಯದಲ್ಲಿ ಭಾರತ ವೆಸ್ಟ್​ ಇಂಡೀಸ್​ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆಯಿತು.

west-indies-vs-ind
Etv Bharatವಿಂಡೀಸ್​ ವಿರುದ್ಧ 7 ವಿಕೆಟ್​ ಜಯ
author img

By

Published : Aug 3, 2022, 7:36 AM IST

ವಾರ್ನರ್ ಪಾರ್ಕ್​​(ವೆಸ್ಟ್ ಇಂಡೀಸ್​): ಕಳೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ನ ಒಬೆಡ್​ ಮೆಕಾಯ್​ ದಾಲಿಗೆ ತತ್ತರಿಸಿ ಸೋಲನುಭವಿಸಿದ್ದ ಭಾರತ ತಂಡ 3ನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. 5 ಪಂದ್ಯಗಳ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆಯಿತು.

ಟಾಸ್​ ಗೆದ್ದ ಭಾರತ ವೆಸ್ಟ್​ ಇಂಡೀಸ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ವಿಂಡೀಸ್​ನ ಆರಂಭಿಕ ಆಟಗಾರರಾದ ಬ್ರೆಂಡೆನ್​ ಕಿಂಗ್​ ಮತ್ತು ಕೈಲ್​ ಮೇಯರ್ಸ್​ ಮೊದಲ ವಿಕೆಟ್​ಗೆ 57 ರನ್​ ಕಲೆ ಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕಿಂಗ್ಸ್​ ಅಪಾಯಕಾರಿಯಾಗುವ ಮೊದಲೇ ಹಾರ್ದಿಕ್​ ಪಾಂಡ್ಯ ಪೆವಿಲಿಯನ್​ ದಾರಿ ತೋರಿಸಿದರು.

ಮೇಯರ್ಸ್​ ಅರ್ಧಶತಕ: ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ವಿಂಡೀಸ್​ನ ಆಲ್​ರೌಂಡರ್​ ಕೈಲ್ ಮೇಯರ್ಸ್​ ಪಂದ್ಯದಲ್ಲಿ ಮಿಂಚಿದರು. ಅರ್ಧಶತಕ (73) ಗಳಿಸಿ ತಂಡಕ್ಕೆ ನೆರವಾದರು. ನಾಯಕ ನಿಕೋಲಸ್​ ಪೂರನ್​ 22, ರೋವ್​ಮನ್ ಪೊವೆಲ್​ 23, ಸಿಮ್ರಾನ್​ ಹೆಟ್ಮಾಯಿರ್​ 20 ಗಳಿಸಿದರು. 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 164 ರನ್​ಗಳ ಸವಾಲಿನ ಮೊತ್ತ ದಾಖಲಿಸಿತು. ಭುವನೇಶ್ವರ್​ ಕುಮಾರ್ 2, ಹಾರ್ದಿಕ್​ ಪಾಂಡ್ಯಾ, ಅರ್ಷದೀಪ್​ ಸಿಂಗ್​ ತಲಾ 1 ವಿಕೆಟ್ ಪಡೆದರು.

ಉದಯಿಸಿದ "ಸೂರ್ಯ": 164 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್​ ಶರ್ಮಾ ಗಾಯಗೊಂಡು ನಿವೃತ್ತರಾದರು. ಈ ವೇಳೆ, ತಂಡದ ಗೆಲುವಿನ ಜವಾಬ್ದಾರಿ ಹೊತ್ತ ಆರಂಭಿಕನಾಗಿ ಪಡ್ತಿ ಪಡೆದ ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟ್​ ಬೀಸಿದರು.

44 ಎಸೆತಗಳಲ್ಲಿ 76 ರನ್​ ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಯಾದವ್​ಗೆ ಶ್ರೇಯಸ್​ ಅಯ್ಯರ್​ 24, ರಿಷಬ್​ ಪಂತ್​ 33* ಸಾಥ್​ ನೀಡಿದರು. ಕೊನೆಯಲ್ಲಿ ದೀಪಕ್​ ಹೂಡಾ 10 ರನ್​ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು.

ವೆಸ್ಟ್​ ಇಂಡೀಸ್​ನ ಡೊಮಿನಿಕ್​ ಡ್ರೇಕ್ಸ್​, ಜಾಸನ್ ಹೋಲ್ಡರ್​, ಅಕೀಲ್​ ಹುಸೈನ್​ ತಲಾ ಒಂದು ವಿಕೆಟ್​ ಪಡೆದರು. 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಪಡೆಯಿತು.

ಓದಿ: ಬ್ಯಾಡ್ಮಿಂಟನ್​ ಫೈನಲ್​: ಸೋತ ಭಾರತಕ್ಕೆ ಬೆಳ್ಳಿ, ಚಿನ್ನಕ್ಕೆ ಕೊರಳೊಡ್ಡಿದ ಮಲೇಷ್ಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.