ತರೌಬಾ (ಟ್ರಿನಿಡಾಡ್): ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಪಂದ್ಯದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದು, ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇಂದಿನ ಪಂದ್ಯದಲ್ಲೂ ವಿಶ್ರಾಂತಿ ನೀಡಲಾಗಿದೆ. ಲಾರಾ ಮೈದಾನದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.
ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಗಳನ್ನು ಮಾಡಿದ್ದು ಕಳೆದೆರಡು ಪಂದ್ಯಗಳಲ್ಲಿ ಆಡಿದ್ದ ಉಮ್ರಾನ್ ಮಲಿಕ್ ಜಾಗದಲ್ಲಿ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ಮಾಡಿಕೊಡಲಾಗಿದ್ದು, ಕಳೆದ ಪಂದ್ಯದಲ್ಲಿ ಆಡಿದ್ದ ಅಕ್ಷರ್ ಪಟೇಲ್ ಬದಲಿಗೆ ಜಯದೇವ್ ಉನಾದ್ಕತ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಅದೇ ತಂಡದಲ್ಲಿ ಮುಂದುವರೆದಿದೆ.
-
West Indies have won the toss and elect to bowl first in the ODI series decider.
— BCCI (@BCCI) August 1, 2023 " class="align-text-top noRightClick twitterSection" data="
Live - https://t.co/K4OdgD66PY… #WIvIND pic.twitter.com/aVEXKzFTJT
">West Indies have won the toss and elect to bowl first in the ODI series decider.
— BCCI (@BCCI) August 1, 2023
Live - https://t.co/K4OdgD66PY… #WIvIND pic.twitter.com/aVEXKzFTJTWest Indies have won the toss and elect to bowl first in the ODI series decider.
— BCCI (@BCCI) August 1, 2023
Live - https://t.co/K4OdgD66PY… #WIvIND pic.twitter.com/aVEXKzFTJT
ಭಾರತ ತಂಡ ನಾಯಕ ಹಾರ್ದಿಕ್ ಸೇರಿ ನಾಲ್ವರು ವೇಗಿಗಳ ಜೊತೆ ಮೈದಾನಕ್ಕಿಳಿದಿದೆ. ಹಾರ್ದಿಕ್ ಪಾಂಡ್ಯ ಕಳೆದೆರಡು ಪಂದ್ಯದಲ್ಲಿ 5 ಪ್ಲೆಸ್ ಓವರ್ಗಳನ್ನು ಮಾಡುತ್ತಿದ್ದಾರೆ. ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಉನಾದ್ಕತ್ ಇಂದು ಮೈದಾನಕ್ಕಿಳಿಯುತ್ತಿದ್ದು, ಅವರ ಬೌಲಿಂಗ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಸೂರ್ಯ, ಸಂಜುಗೆ ಮತ್ತೊಂದು ಅವಕಾಶ: ಸೂರ್ಯ ಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ಗೆ ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ನೀಡಲಾಗಿದೆ. ಟಿ20 ಮಾದರಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಸೂರ್ಯ ಕುಮಾರ್ ಯಾದವ್ ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಮೊತ್ತದ ಸ್ಕೋರ್ ಮಾಡುವಲ್ಲಿ ಎಡವಿದ್ದಾರೆ. ಇನ್ನು ತುಂಬಾ ಸಮಯ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ಗೆ ಎರಡನೇ ಪಂದ್ಯದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆ ಪಂದ್ಯದಲ್ಲಿ 9 ರನ್ ಔಟ್ ಆಗಿದ್ದರು. ಇಂದಿನ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೆ ಅವರಿಗೆ ಅವಕಾಶ ನೀಡಲಾಗಿದೆ.
-
A look at #TeamIndia's Playing XI for the third and final ODI.
— BCCI (@BCCI) August 1, 2023 " class="align-text-top noRightClick twitterSection" data="
Two changes - Ruturaj Gaikwad and Jaydev Unadkat come in the XI for Umran Malik and Axar Patel. #WIvIND pic.twitter.com/WZHOXVARFb
">A look at #TeamIndia's Playing XI for the third and final ODI.
— BCCI (@BCCI) August 1, 2023
Two changes - Ruturaj Gaikwad and Jaydev Unadkat come in the XI for Umran Malik and Axar Patel. #WIvIND pic.twitter.com/WZHOXVARFbA look at #TeamIndia's Playing XI for the third and final ODI.
— BCCI (@BCCI) August 1, 2023
Two changes - Ruturaj Gaikwad and Jaydev Unadkat come in the XI for Umran Malik and Axar Patel. #WIvIND pic.twitter.com/WZHOXVARFb
ಆದರೆ ಸಂಜು ಸ್ಯಾಮ್ಸನ್ಗೆ ಕೇವಲ ಬ್ಯಾಟಿಂಗ್ ಮಾಡುವ ಅವಕಾಶ ಮಾತ್ರ ಸಿಗುತ್ತಿದೆ. ಟೆಸ್ಟ್ ಮತ್ತು ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಕೀಪಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್ ಉತ್ತಮ ಆಟವಾಡಿದ್ದರಿಂದ ಅವರೇ ವಿಕೆಟ್ ಹಿಂದೆ ಕಾರ್ಯನಿರ್ವಹಿಸಲಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬರಲಿದ್ದಾರೆ ಗಾಯಕ್ವಾಡ್: ಐಪಿಎಲ್ನಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿರುವ ರುತುರಾಜ್ ಗಾಯಕ್ವಾಡ್ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಾಗುತ್ತದೆ. ಈಗಾಗಲೇ ಆರಂಭಿಕರಾಗಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಎರಡು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಪಂದ್ಯದಲ್ಲೂ ಅವರೇ ಆರಂಭಿಕರಾಗಿ ಮುಂದುವರೆಯಲಿದ್ದಾರೆ. ರುತುರಾಜ್ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಮೈದಾನಕ್ಕಿಳಿಯಲಿದ್ದಾರೆ.
ತಂಡಗಳು ಇಂತಿವೆ.. ಭಾರತ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಕುಲದೀಪ್ ಯಾದವ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್ (ನಾಯಕ/ ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್.
ಇದನ್ನೂ ಓದಿ: IND vs WI 3rd ODI: ಲಾರಾ ಪಿಚ್ನಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ.. ಭಾರತ ತಂಡಕ್ಕೆ ದ್ರಾವಿಡ್ ಪ್ರಯೋಗ ಏನು?