ಗಯಾನ (ವೆಸ್ಟ್ ಇಂಡೀಸ್): ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು ಕುಲದೀಪ್ ಯಾದವ್ ಬದಲಿಗೆ ರವಿ ಬಿಷ್ಣೋಯ್ ಆಡಲಿದ್ದಾರೆ.
ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಸಣ್ಣ ಗಾಯಕ್ಕೆ ತುತ್ತಾದ ಕಾರಣ ಕುಲದೀಪ್ ಯಾದವ್ ಅವರ ಬದಲಾಗಿ ರವಿ ಬಿಷ್ಣೋಯಿ ಅವರನ್ನು ಆಡಿಸಲಾಗುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು. ವೆಸ್ಟ್ ಇಂಡೀಸ್ ತಂಡ ಮೊದಲ ಪಂದ್ಯ ಗೆದ್ದ ತಂಡದೊಂದಿಗೆ ಮೈದಾನಕ್ಕಿಳಿಯಲಿದೆ.
-
India have won the toss and elect to bat first in the 2nd T20I against West Indies.
— BCCI (@BCCI) August 6, 2023 " class="align-text-top noRightClick twitterSection" data="
Live - https://t.co/mhKN4Dq5T0… #WIvIND pic.twitter.com/i8oWQTp4y5
">India have won the toss and elect to bat first in the 2nd T20I against West Indies.
— BCCI (@BCCI) August 6, 2023
Live - https://t.co/mhKN4Dq5T0… #WIvIND pic.twitter.com/i8oWQTp4y5India have won the toss and elect to bat first in the 2nd T20I against West Indies.
— BCCI (@BCCI) August 6, 2023
Live - https://t.co/mhKN4Dq5T0… #WIvIND pic.twitter.com/i8oWQTp4y5
ಪಿಚ್ ಹೇಗಿದೆ?: ಮಧ್ಯಮ ವೇಗಿಗಳಿಗೆ ಪಿಚ್ ಹೆಚ್ಚು ಸಹಕಾರಿ. ಸ್ಪಿನ್ ಬೌಲರ್ಗಳೂ ಈ ವಿಕೆಟ್ನಲ್ಲಿ ಯಶಸ್ಸು ಕಂಡಿದ್ದಾರೆ. ತ್ರಿವಳಿ ಸ್ಪಿನ್ನರ್ಗಳ ಜೊತೆಗೆ ಹಾರ್ದಿಕ್ ಪಾಂಡ್ಯ ಇಂದೂ ಸಹ ಮೊದಲ ಪಂದ್ಯದಂತೆ ವಿಂಡೀಸ್ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆಯಲ್ಲಿದ್ದಾರೆ. ಇಲ್ಲಿ ನಡೆದಿರುವ 11 ಟಿ20 ಪಂದ್ಯಗಳ ಸ್ಕೋರ್ ಪ್ರಕಾರ, 123 ಸರಾಸರಿಯ ರನ್ ಎಂದು ಹೇಳಲಾಗಿದೆ. ಮೊದಲು ಬ್ಯಾಟ್ ಮಾಡುತ್ತಿರುವ ಟೀಂ ಇಂಡಿಯಾ 150 ಪ್ಲಸ್ ಸ್ಕೋರ್ ಕಲೆ ಹಾಕಿದ್ದಲ್ಲಿ ಗೆಲುವು ಸರಳ.
ತಿಲಕ್ ವರ್ಮಾ ಮೇಲೆ ಹೆಚ್ಚಿನ ನಿರೀಕ್ಷೆ: ಪಾದಾರ್ಪಣೆ ಪಂದ್ಯದಲ್ಲಿ 39 ರನ್ ಗಳಿಸಿದ ತಿಲಕ್ ವರ್ಮಾ ಮೇಲೆ ಇಂದು ಹೆಚ್ಚು ನಿರೀಕ್ಷೆ ಇದೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಬ್ಯಾಟಿಂಗ್ ಮೂಲಕ ಮಿಂಚಿದ್ದ ಯುವ ಬ್ಯಾಟರ್ಗೆ ಈ ಸರಣಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಅಗತ್ಯವಿದೆ.
-
A look at our Playing XI for the 2nd T20I 👇👇
— BCCI (@BCCI) August 6, 2023 " class="align-text-top noRightClick twitterSection" data="
Live - https://t.co/mhKN4Dq5T0…… #WIvIND pic.twitter.com/oZQdC7tnzj
">A look at our Playing XI for the 2nd T20I 👇👇
— BCCI (@BCCI) August 6, 2023
Live - https://t.co/mhKN4Dq5T0…… #WIvIND pic.twitter.com/oZQdC7tnzjA look at our Playing XI for the 2nd T20I 👇👇
— BCCI (@BCCI) August 6, 2023
Live - https://t.co/mhKN4Dq5T0…… #WIvIND pic.twitter.com/oZQdC7tnzj
ಮೊದಲ ಪಂದ್ಯ ಹೀಗಿತ್ತು..: ಲಾರಾ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 4 ರನ್ನಿಂದ ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ನೀಡಿದ್ದ 150 ರನ್ಗಳ ಗುರಿ ಬೆನ್ನತ್ತಿದ್ದ ಭಾರತ, ಸತತ ವಿಕೆಟ್ ನಷ್ಟದಿಂದ ನಿಗದಿತ ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟ ಅನುಭವಿಸಿ 145 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಇದರಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಹಿನ್ನಡೆ ಅನುಭವಿಸಿದೆ.
ತಂಡಗಳು ಇಂತಿವೆ..ಭಾರತ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಇದನ್ನೂ ಓದಿ: IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್ ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್ ಸ್ಟಾರ್ಸ್