ಪೋರ್ಟ್ ಆಫ್ ಸ್ಪೇನ್: ಕ್ರಿಕೆಟ್ನಲ್ಲಿ ಸ್ಪಿನ್ ಅಂದ್ರೇನೆ ಹಾಗೆ. ಅದ್ಯಾವಾಗ ಚೆಂಡು ತಿರುವು ಪಡೆದು ಒಳನುಗ್ಗಿ ವಿಕೆಟ್ ಉರುಳಿಸುತ್ತದೆ ಎಂಬುದು ತಿಳಿಯದು. ಕ್ರಿಕೆಟ್ ಲೋಕ ಕಂಡ ಅಪ್ರತಿಮ ಸ್ಪಿನ್ ಮಾಂತ್ರಿಕರೆಂದರೆ, ಅದು ಶ್ರೀಲಂಕಾದ ಮುತ್ತಯ್ಯ ಮುರಳೀಧರ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಭಾರತದ ಅನಿಲ್ ಕುಂಬ್ಳೆ. ಕುಂಬ್ಳೆ ನಿವೃತ್ತಿ ಬಳಿಕ ಹರ್ಭಜನ್ ಸಿಂಗ್ ಭಾರತ ಕ್ರಿಕೆಟ್ನ ಸ್ಪಿನ್ ಮಾಂತ್ರಿಕರಾಗಿದ್ದರು. ಹರ್ಭಜನ್ ತೆರೆಮರೆಗೆ ಸರಿದ ಬಳಿಕ ಉದಯಿಸಿದ್ದು ರವಿಚಂದ್ರನ್ ಅಶ್ವಿನ್.
ತಮಿಳುನಾಡಿನ ರವಿಚಂದ್ರನ್ ಅಶ್ವಿನ್ ಭಾರತ ಕ್ರಿಕೆಟ್ನ ಸದ್ಯದ ಟಾಪ್ ಸ್ಪಿನ್ ಬೌಲರ್. ತಮ್ಮ ಕೇರಂ ಶೈಲಿಯ ಮೂಲಕ ವಿಶ್ವಮಾನ್ಯರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್ ಆಗಿರುವ ಈ ಆಫ್ ಸ್ಪಿನ್ನರ್, ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ತಮ್ಮೆಲ್ಲ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಉರುಳಿಸಿ ಕೆರಿಬಿಯನ್ನರನ್ನು ಪುಡಿಗಟ್ಟಿದ್ದ ಸ್ಪಿನ್ ಮಾಂತ್ರಿಕ, 2ನೇ ಟೆಸ್ಟ್ನಲ್ಲಿ ಪಡೆದಿದ್ದು ಒಂದು ವಿಕೆಟ್ ಆದರೂ, ಉತ್ತಮವಾಗಿ ಆಡುತ್ತಿದ್ದ ನಾಯಕ ಕ್ರೆಗ್ ಬ್ರಾಥ್ವೇಟ್ರನ್ನು ಕಣ್ಣುಮಿಟುಕಿಸುವ ಅವಧಿಯೊಳಗೆ ಪೆವಿಲಿಯನ್ಗೆ ಕಳುಹಿಸಿದ್ದರು.
-
Unplayable! A classic off-spinner's dismissal from Ashwin 🔥 #INDvWIonFanCode #WIvIND pic.twitter.com/dPcUucA0xQ
— FanCode (@FanCode) July 22, 2023 " class="align-text-top noRightClick twitterSection" data="
">Unplayable! A classic off-spinner's dismissal from Ashwin 🔥 #INDvWIonFanCode #WIvIND pic.twitter.com/dPcUucA0xQ
— FanCode (@FanCode) July 22, 2023Unplayable! A classic off-spinner's dismissal from Ashwin 🔥 #INDvWIonFanCode #WIvIND pic.twitter.com/dPcUucA0xQ
— FanCode (@FanCode) July 22, 2023
ಮ್ಯಾಜಿಕ್ ಡೆಲಿವರಿ: ಭಾರತ ನೀಡಿರುವ ಬೃಹತ್ ಮೊತ್ತಕ್ಕೆ ಉತ್ತರವಾಗಿ ವಿಂಡೀಸ್ ಪಡೆ ಉತ್ತಮವಾಗಿ ಬ್ಯಾಟ್ ಮಾಡುತ್ತಿದೆ. ಕೆರಿಬಿಯನ್ ನಾಯಕ ಕ್ರೆಗ್ ಬ್ರಾಥ್ವೆಟ್ 75 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. 5 ಬೌಂಡರಿ 1 ಸಿಕ್ಸರ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಆರ್. ಅಶ್ವಿನ್ 72ನೇ ಓವರ್ನ 4 ನೇ ಎಸೆತದಲ್ಲಿ ವಿಂಡೀಸ್ ನಾಯಕನಿಗೆ ಶಾಕ್ ನೀಡಿದರು.
ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್, ಮುಕೇಶ್ ಕುಮಾರ್ ಅವರ ಬಿಗು ದಾಳಿಯಲ್ಲಿ 235 ಎಸೆತಗಳನ್ನು ಎದುರಿಸಿದ್ದ ಬ್ರಾಥ್ವೇಟ್ ಅದೊಂದು ಮ್ಯಾಜಿಕ್ ಎಸೆತವನ್ನು ಮಾತ್ರ ತಡೆಯಲಾಗಲಿಲ್ಲ. ಅಶ್ವಿನ್ ಎಸೆದ ಆಫ್ ಸ್ಪಿನ್ ಬ್ಯಾಟ್ ಮತ್ತು ಪ್ಯಾಡಿನ ಮಧ್ಯೆ ನುಸುಳಿ ನೇರವಾಗಿ ವಿಕೆಟ್ ಬೇಲ್ ಎಗರಿಸಿತು. ಇದನ್ನು ಕಂಡು ಕೆರಿಬಿಯನ್ ಆಟಗಾರ ಕೆಲಕ್ಷಣ ಅವಾಕ್ಕಾಗಿದ್ದರು.
ಎಲ್ಲ ಎಸೆತಗಳನ್ನು ಸರಾಗವಾಗಿ ಎದುರಿಸಿ ನಿಂತಿದ್ದ ಬ್ರಾಥ್ವೇಟ್ಗೆ ಆಫ್ಸೈಡ್ನಿಂದ ದೊಡ್ಡ ತಿರುವು ಪಡೆದ ಈ ಚೆಂಡು ಮಾತ್ರ ಬಲಿ ಪಡೆದುಕೊಂಡಿತು. ಈ ಮೂಲಕ ಅಶ್ವಿನ್ ಮೊದಲ ವಿಕೆಟ್ ಪಡೆದರು. ಇದು ಪಂದ್ಯದ ಹೈಲೈಟ್ ಕೂಡ ಆಗಿದೆ.
ಸದ್ಯ ವಿಂಡೀಸ್ 5 ವಿಕೆಟ್ಗೆ 229 ರನ್ ಗಳಿಸಿದ್ದು, ಇನ್ನೂ 209 ರನ್ಗಳ ಹಿನ್ನಡೆಯಲ್ಲಿದೆ. ಅಲಿಕ್ ಅಥಾಂಜೆ, ಜಾಸನ್ ಹೋಲ್ಡರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬಾಕಿ ಇರುವ ಇನ್ನೆರಡು ದಿನಗಳಲ್ಲಿ ಮೂರು ಇನಿಂಗ್ಸ್ ಮುಗಿದು ಫಲಿತಾಂಶ ಬರಬೇಕಿದೆ.
ಇದನ್ನೂ ಓದಿ: India vs West Indies 2nd Test: ವಿಂಡೀಸ್ಗೆ ನಾಯಕ ಕ್ರಿಗ್ ಬ್ರಾಥ್ವೇಟ್ ಅರ್ಧಶತಕದ ಬಲ; 3ನೇ ದಿನದಾಂತ್ಯಕ್ಕೆ 229/5