ತರೊಬಾ(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ನಡೆಸಲಿದೆ. ಮುಂಬರುವ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ಸರಣಿ ಉಭಯ ತಂಡಗಳಿಗೆ ಮಹತ್ವದಾಗಿದೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆಯೊಂದಿಗೆ ಕಣಕ್ಕಿಳಿದಿವೆ. ಟಿ - 20 ಕ್ರಿಕೆಟ್ನಿಂದ ಹೊರಗುಳಿದಿದ್ದ ಆರ್.ಅಶ್ವಿನ್ ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್), ರಿಷಭ್ ಪಂತ್(ವಿ.ಕೀ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್. ಅರ್ಷದೀಪ್ ಸಿಂಗ್
-
🚨 Here's #TeamIndia's Playing XI 👇
— BCCI (@BCCI) July 29, 2022 " class="align-text-top noRightClick twitterSection" data="
Follow the match ▶️ https://t.co/qWZ7LSCVXA #WIvIND pic.twitter.com/F5lu3EZy3N
">🚨 Here's #TeamIndia's Playing XI 👇
— BCCI (@BCCI) July 29, 2022
Follow the match ▶️ https://t.co/qWZ7LSCVXA #WIvIND pic.twitter.com/F5lu3EZy3N🚨 Here's #TeamIndia's Playing XI 👇
— BCCI (@BCCI) July 29, 2022
Follow the match ▶️ https://t.co/qWZ7LSCVXA #WIvIND pic.twitter.com/F5lu3EZy3N
ಇದನ್ನೂ ಓದಿರಿ: IND vs WI T20I: ಶುಭಾರಂಭದ ತವಕದಲ್ಲಿ ರೋಹಿತ್ ಬಳಗ..ಯಾರಿಗೆಲ್ಲ ಚಾನ್ಸ್?
ವಿಶ್ರಾಂತಿ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಜಾಗಕ್ಕೆ ಶ್ರೇಯಸ್ ಅಯ್ಯರ್ ಅವಕಾಶ ಗಿಟ್ಟಿಸಿಕೊಂಡಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಉಳಿದಂತೆ ರವಿ ಬಿಷ್ಣೋಯ್ ಹಾಗೂ ಅರ್ಷದೀಪ್ ಚಾನ್ಸ್ ಪಡೆದುಕೊಂಡಿರುವ ಕಾರಣ ಅನುಭವಿ ಹರ್ಷಲ್ ಪಟೇಲ್ ಹೊರಗುಳಿದಿದ್ದಾರೆ. ಹೊಡಿ ಬಡಿ ಆಟಕ್ಕೆ ವೆಸ್ಟ್ ಇಂಡೀಸ್ ಕೂಡ ಫೇಮಸ್ ಆಗಿದ್ದು, ಹೀಗಾಗಿ ಟೀಂ ಇಂಡಿಯಾ ಬೌಲರ್ಗಳ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಭುವನೇಶ್ವರ್ ಕುಮಾರ್ ,ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಜೊತೆ ಅಶ್ವಿನ್ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಳ್ಳಲಾಗಿದೆ.
ವೆಸ್ಟ್ ಇಂಡೀಸ್: ಶಮರ್ ಬ್ರೂಕ್ಸ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ನಿಕೋಲಸ್ ಪೂರನ್ (ವಿ.ಕೀ/ಕ್ಯಾಪ್ಟನ್), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಕೀಮೋ ಪಾಲ್
ವೆಸ್ಟ್ ಇಂಡೀಸ್ ತಂಡದ ಪರ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವಕಾಶ ಗಿಟ್ಟಿಸಿಕೊಂಡಿದ್ದು, ಇವರ ಜೊತೆ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಸಹ ಇರುವುದು ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆ.