ETV Bharat / sports

ಈ ಇಬ್ಬರು ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ: ಮೈಕ್​ ಹೆಸನ್​ - ಆರ್​ಸಿಬಿ ಡೈರೆಕ್ಟರ್​ ಮೈಕ್ ಹೆಸನ್​

ಆರ್​ಸಿಬಿ ಕೋಚ್​ ಹಾಗೂ ಕ್ರಿಕೆಟ್​ ಕಾರ್ಯಾಚರಣೆಗಳ ನಿರ್ದೇಶಕ ಮೈಕ್​ ಹೆಸನ್​ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಹಲ್​ರನ್ನು ಖರೀದಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

Royal challengers
ರಾಯಲ್ ಚಾಲೆಂಜರ್ಸ್​ ಬೆಂಗಳೂರು
author img

By

Published : Dec 1, 2021, 3:20 PM IST

ಹೈದರಾಬಾದ್​(ಡೆಸ್ಕ್​): ಆಟಗಾರರ ರಿಟೈನ್​ ಬಗ್ಗೆ ಕಳೆದ ಕೆಲವು ದಿನಗಳಿಂದ ಮೂಡಿದ್ದ ಕುತೂಹಲ ಮಂಗಳವಾರಕ್ಕೆ ಮುಗಿದಿದೆ. ಆದರೆ, ಕೆಲವೊಂದು ಫ್ರಾಂಚೈಸಿಗಳು ಅಚ್ಚರಿಯ ನಿರ್ಧಾರ ತೆಗೆದುಕೊಂಡಿವೆ. ಪ್ರಮುಖ ಆರ್​ಸಿಬಿ ಕೇವಲ 3 ಆಟಗಾರರನ್ನು ರಿಟೈನ್​ ಮಾಡಿಕೊಂಡು ಸ್ಟಾರ್​ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಆದರೆ, ಆರ್​ಸಿಬಿ ಕೋಚ್​ ಹಾಗೂ ಕ್ರಿಕೆಟ್​ ಕಾರ್ಯಾಚರಣೆಗಳ ನಿರ್ದೇಶಕ ಮೈಕ್​ ಹೆಸನ್​ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಹಲ್​ರನ್ನು ಖರೀದಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

"ನಾವು ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್​ವೆಲ್​ ಮತ್ತು ಮೊಹಮ್ಮದ್​ ಸಿರಾಜ್ ಅವ​ರನ್ನು ಹೊಂದಿದ್ದೇವೆ. ಪರ್ಸ್​ನಲ್ಲಿ 57 ಕೋಟಿ ಉಳಿದಿದೆ. ಆಶಾದಾಯಕವಾಗಿ, ತಂಡವನ್ನು ಬಲಿಷ್ಠಗೊಳಿಸಲು ಮ್ಯಾನೇಜ್​ಮೆಂಟ್​​ ಚಹಲ್ ಮತ್ತು ಹರ್ಷಲ್ ಪಟೇಲ್ ಅವ​ರನ್ನು ಮತ್ತೆ ಖರೀದಿಸಲು ಸಾಧ್ಯವಾದಷ್ಟು ಪ್ರಯತ್ನಿಸಲಿದೆ. ಮೆಗಾ ಹರಾಜಿಗೆ ಕಾಯಲು ನನ್ನಿಂದ ಆಗುತ್ತಿಲ್ಲ. ಆರ್​ಸಿಬಿಗೆ ಇನ್ನೂ ಉತ್ತಮವಾದದ್ದು ಬರಬೇಕಿದೆ" ಎಂದು ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಆರ್​ಸಿಬಿ ವಿರಾಟ್​ ಕೊಹ್ಲಿಯನ್ನು 15 ಕೋಟಿರೂ, ಗ್ಲೇನ್​ ಮ್ಯಾಕ್ಸ್​ವೆಲ್​ಗೆ 12 ಮತ್ತು ಮೊಹಮ್ಮದ್ ಸಿರಾಜ್​ಗೆ 7 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ.

ಇದನ್ನು ಓದಿ: ಆರ್‌ಸಿಬಿಯಲ್ಲಿ ಉಳಿಯುವ ಕುರಿತು ಎರಡನೇ ಆಲೋಚನೆಯೇ ಮಾಡಿಲ್ಲ - ವಿರಾಟ್‌ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.