ETV Bharat / sports

ಜೀವನ ಇಷ್ಟಕ್ಕೆ ಮುಗಿದಿಲ್ಲ, ನಾಳೆ ಸೂರ್ಯ ಮತ್ತೆ ಉದಯಿಸಲಿದ್ದಾನೆ : ಕಮ್​ಬ್ಯಾಕ್ ಸಂದೇಶ ಕೊಟ್ಟ ಬುಮ್ರಾ - ಇಂಡಿಯನ್ ಪ್ರೀಮಿಯರ್ ಲೀಗ್

ನಾವು ಸಾಕಷ್ಟು ಹೋರಾಟ ನೀಡಿದ್ದೇವೆ. ಕೆಲವು ಪಂದ್ಯಗಳಲ್ಲಿ ಅದೃಷ್ಟ ನಮ್ಮದಾಗಿರುತ್ತದೆ ಅಥವಾ ವಿರೋಧಿ ತಂಡದ ಪರ ಇರುತ್ತದೆ. ಆದರೆ, ಆಟ ಇರುವುದೇ ಹೀಗೆ. ನಾವು ಉತ್ತಮವಾಗಿ ಆಡಿಲ್ಲ ಎಂದು ಹೇಳಲು ಹಿಂಜರಿಯುವುದಿಲ್ಲ. ಅಂಕಪಟ್ಟಿ ಸುಳ್ಳು ಹೇಳುವುದಿಲ್ಲ. ಉಳಿದಿರುವ ಪಂದ್ಯಗಳಲ್ಲಿ ನಮ್ಮಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಮತ್ತು ಒಳ್ಳೆಯ ತಂಡವಾಗಿ ಹೊರ ಬರಲು ಪ್ರಯತ್ನಿಸುತ್ತೇವೆ" ಎಂದು ಯಾರ್ಕರ್ ಸ್ಪೆಷಲಿಸ್ಟ್​ ಹೇಳಿದ್ದಾರೆ..

Jasprit Bumrah on Mumbai Indians failure
ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್
author img

By

Published : Apr 17, 2022, 5:18 PM IST

ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್​ಗೆ 15ನೇ ಆವೃತ್ತಿ ತುಂಬಾ ಕಠಿಣವಾಗಿ ಮಾರ್ಪಟ್ಟಿದೆ. ಆಡಿರುವ 6 ಪಂದ್ಯಗಳಲ್ಲೂ ಸೋಲು ಕಂಡಿರುವ ತಂಡ ಇನ್ನು ಅಂಕ ಪಟ್ಟಿಯಲ್ಲಿ ಖಾತೆ ತೆರೆದಿಲ್ಲ. ತಂಡದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಏಕೈಕ ಬೌಲರ್ ಬುಮ್ರಾ ಈ ಬಾರಿ ತಮ್ಮ ತಂಡ ಸಾಕಷ್ಟು ಉತ್ತಮವಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಶನಿವಾರ ಲಖನೌ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ 17 ರನ್​ಗಳ ಸೋಲು ಕಂಡ ಬಳಿಕ ಮಾತನಾಡಿದ ಅವರು, ತಮ್ಮ ತಂಡದಿಂದ ಉತ್ತಮ ಆಟ ಮೂಡಿ ಬಂದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇಷ್ಟಕ್ಕೆ ಜೀವನ ಮುಗಿದಿಲ್ಲ. ಇಂದು ಮುಳುಗಿರುವ ಸೂರ್ಯ ನಾಳೆ ಉದಯಿಸಲೇಬೇಕು ಎಂದು ಕಮ್​ಬ್ಯಾಕ್ ಮಾಡುವ ಸಂದೇಶ ರವಾನಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ನಾಯಕ ಕೆ ಎಲ್‌ ರಾಹುಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ ಮುಂಬೈ, 9 ವಿಕೆಟ್‌ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು.

ರೋಹಿತ್‌ ಶರ್ಮಾ ನಾಯಕತ್ವವಿರುವ ಈ ತಂಡಕ್ಕೆ ಈ ಬಾರಿಯ ಟೂರ್ನಿಯಲ್ಲಿ ಎದುರಾದ ಆರನೇ ಸೋಲು ಇದು. ಇದರಿಂದಾಗಿ, ಐಪಿಎಲ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಐದು ಬಾರಿ ಚಾಂಪಿಯನ್‌ ಆಗಿರುವ ಮುಂಬೈ ತಂಡಕ್ಕೆ, ಈ ಬಾರಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರ ಬೀಳುವ ಭೀತಿ ಎದುರಾಗಿದೆ.

"ನಾವು ಸಾಕಷ್ಟು ಹೋರಾಟ ನೀಡಿದ್ದೇವೆ. ಕೆಲವು ಪಂದ್ಯಗಳಲ್ಲಿ ಅದೃಷ್ಟ ನಮ್ಮದಾಗಿರುತ್ತದೆ ಅಥವಾ ವಿರೋಧಿ ತಂಡದ ಪರ ಇರುತ್ತದೆ. ಆದರೆ, ಆಟ ಇರುವುದೇ ಹೀಗೆ. ನಾವು ಉತ್ತಮವಾಗಿ ಆಡಿಲ್ಲ ಎಂದು ಹೇಳಲು ಹಿಂಜರಿಯುವುದಿಲ್ಲ. ಅಂಕಪಟ್ಟಿ ಸುಳ್ಳು ಹೇಳುವುದಿಲ್ಲ. ಉಳಿದಿರುವ ಪಂದ್ಯಗಳಲ್ಲಿ ನಮ್ಮಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಮತ್ತು ಒಳ್ಳೆಯ ತಂಡವಾಗಿ ಹೊರ ಬರಲು ಪ್ರಯತ್ನಿಸುತ್ತೇವೆ" ಎಂದು ಯಾರ್ಕರ್ ಸ್ಪೆಷಲಿಸ್ಟ್​ ಹೇಳಿದ್ದಾರೆ.

ಮುಂದುವರಿಸಿ, "ಜೀವನವೇ ಮುಗಿದು ಹೋಗಿಲ್ಲ. ನಾಳೆ ಸೂರ್ಯ ಮತ್ತೆ ಉದಯಿಸಲಿದ್ದಾನೆ. ಇದು ಕ್ರಿಕೆಟ್‌ ಆಟ, ಹೌದಲ್ವ? ಯಾರಾದರೂ ಒಬ್ಬರು ಗೆಲ್ಲಲೇಬೇಕು ಅಥವಾ ಸೋಲಬೇಕು. ನಾವು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿಲ್ಲ ಅಲ್ಲವೇ? ಕೇವಲ ಕ್ರಿಕೆಟ್‌ ಪಂದ್ಯದಲ್ಲಿ ಸೋತಿದ್ದೇವೆ. ಈ ಚೈತನ್ಯ ನಮ್ಮ ತಂಡದಲ್ಲಿದೆ. ನಮ್ಮಲ್ಲಿ ಯಾರೊಬ್ಬರೂ ನಿರಾಶರಾಗಿಲ್ಲ. ನಾವು ಎಷ್ಟು ಕಠಿಣ ಪ್ರಯತ್ನ ಮಾಡಿದ್ದೇವೆ ಎಂಬುದನ್ನ ಹೊರಗಿನ ಯಾರೊಬ್ಬರೂ ನೋಡಲು ಸಾಧ್ಯವಿಲ್ಲ" ಎಂದು ಬುಮ್ರಾ ಹೇಳಿದ್ದಾರೆ.

ಇದನ್ನೂ ಓದಿ:'ಕೊಹ್ಲಿ ಉತ್ತಮ ಕ್ರಿಕೆಟಿಗ, ಆದ್ರೆ ನನ್ನೆದುರು ಆಡಿದ್ದಿದ್ದರೆ ಇಷ್ಟು ರನ್-ಶತಕ ಸಿಡಿಸುತ್ತಿರಲಿಲ್ಲ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.