ETV Bharat / sports

ಸುಮ್ಮನೇ ಸೋಲೊಪ್ಪಿಕೊಳ್ಳುವವರಲ್ಲ, ಭಾರತದಂತಹ ತಂಡಕ್ಕೂ ಸ್ಪರ್ಧೆವೊಡ್ಡಲಿದ್ದೇವೆ: ನಮೀಬಿಯಾ ಕೋಚ್

2019ರಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ನಮೀಬಿಯಾ ತಮ್ಮ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ತಮಗಿಂತ ಅನುಭವಿಗಳಾದ ನೆದರ್ಲೆಂಡ್ಸ್ ಮತ್ತು ಐರ್ಲೆಂಡ್​ ತಂಡಗಳನ್ನ ಮಣಿಸಿ ಸೂಪರ್ 12ಗೆ ಪ್ರವೇಶ ಪಡೆದಿದೆ. ಈ ಕುರಿತು ಮಾತನಾಡಿರುವ ಕೋಚ್​ ಪಿಯರ್ ಡಿ ಬ್ರೈನ್ ತಾವು ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಜೊತೆ ಇದುವರೆಗೆ ಆಡಿಲ್ಲ. ಆದರೆ ವಿಶ್ವಕಪ್​ನಲ್ಲಿ ಸ್ಪರ್ಧಾತ್ಮಕ ಪೈಪೋಟಿ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Namibia super 12
ನಮೀಬಿಯಾ ಸೂಪರ್ 12
author img

By

Published : Oct 23, 2021, 7:47 AM IST

ದುಬೈ: ಇದೇ ಮೊದಲ ಬಾರಿಗೆ ವಿಶ್ವಕಪ್​ಗೆ ಅರ್ಹತೆ ಪಡೆದಿದ್ದ ನಮೀಬಿಯಾ ತಂಡ ಶುಕ್ರವಾರ ನಡೆದ ಐರ್ಲೆಂಡ್​ ವಿರುದ್ಧದ ಕೊನೆಯ ಸೂಪರ್​ ಲೀಗ್​ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸಿ ಸೂಪರ್ 12ಗೆ ಪ್ರವೇಶ ಪಡೆದಿದೆ.

2019ರಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ನಮೀಬಿಯಾ ತಮ್ಮ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ತಮಗಿಂತ ಅನುಭವಿಗಳಾದ ನೆದರ್ಲೆಂಡ್ಸ್ ಮತ್ತು ಐರ್ಲೆಂಡ್​ ತಂಡಗಳನ್ನ ಮಣಿಸಿ ಸೂಪರ್ 12ಗೆ ಪ್ರವೇಶ ಪಡೆದಿದೆ. ಈ ಕುರಿತು ಮಾತನಾಡಿರುವ ಕೋಚ್​ ಪಿಯರ್ ಡಿ ಬ್ರೈನ್, ತಾವು ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಜೊತೆ ಇದುವರೆಗೆ ಆಡಿಲ್ಲ. ಆದರೆ ವಿಶ್ವಕಪ್​ನಲ್ಲಿ ಸ್ಪರ್ಧಾತ್ಮಕ ಪೈಪೋಟಿ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೋಡಿ, ನಮ್ಮ ಪಾಲಿಗೆ ಈ ಸಂಭ್ರಮದ ಕ್ಷಣವನ್ನು ಆನಂದಿಸುವ ಸಮಯ. ಆದರೆ ನಾವು ಇಲ್ಲಿಗೆ ಖಂಡಿತ ಸೋಲೊಪ್ಪಿಕೊಳ್ಳುವುದಕ್ಕೆ ಬಂದಿಲ್ಲ. ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ಅಂತಹ ದೊಡ್ಡ ತಂಡಗಳ ಜೊತೆಗೆ ಅಡುವುದು ನಮ್ಮ ಆಟಗಾರರಿಗೆ ಅತ್ಯುತ್ತಮ ಅನುಭವವಾಗಲಿದೆ. ಆದರೆ ನಾವು ಎಲ್ಲೇ ಆಡಿದರೂ ಸ್ಪರ್ಧಾತ್ಮಕವಾಗಿ ಆಡುತ್ತೇವೆ ಎನ್ನುವುದು ನಿಮಗೆ ಗೊತ್ತಿದೆ. ಆದ್ದರಿಂದ ನಾವು ಸ್ಪರ್ಧಿಸಲು ಹೋಗಲಿದ್ದೇವೆ, ಅದರ ಕಡೆಗೆ ಸಂಪೂರ್ಣ ಗಮನ ನೀಡಲಿದ್ದೇವೆ ಎಂದು ಎಂದು ಬ್ರೈನ್ ನಮೀಬಿಯಾ ಸೂಪರ್ 12 ಪ್ರವೇಶಿಸುತ್ತಿದ್ದಂತೆ ಹೇಳಿಕೊಂಡಿದ್ದಾರೆ.

ನಾವು ವಿಶ್ವಕಪ್​ನಲ್ಲಿ ಸೂಪರ್ 12ರ ಹಂತಕ್ಕೆ ಸೇರುವ ಮೂಲಕ ಇತಿಹಾಸ ನಿರ್ಮಿಸಿದ್ದೇವೆ. ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಇಂತಹ ದೊಡ್ಡ ಆಟಗಾರರ ಎದುರು ಆಡಲು ಹೊರಟಿದ್ದೇವೆ. ಮುಂದಿನ 24 ಗಂಟೆಗಳನ್ನ ಆನಂದಿಸಲಿದ್ದೇವೆ. ನಂತರ ಮತ್ತೆ ಒಟ್ಟಾಗಿ ಕುಳಿತು, ಮುಂದಿನ ಪಂದ್ಯಗಳ ಬಗ್ಗೆ ಕೆಲವು ಗುರಿಗಳನ್ನು ಸಿದ್ಧಪಡಿಸಿಕೊಳ್ಳಿದ್ದೇವೆ ಎಂದಿದ್ದಾರೆ.

ನಮೀಬಿಯಾ ತುಂಬಾ ಸೀಮಿತ ಸೌಕರ್ಯಗಳನ್ನು ಹೊಂದಿರುವ ರಾಷ್ಟ್ರ. ಕೇವಲ 25 ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ರಾಷ್ಟ್ರ ಟಿ20 ವಿಶ್ವಕಪ್​ನಲ್ಲಿ ಸೂಪರ್​ 12 ಪ್ರವೇಶಿಸಿರುವುದೇ ದೊಡ್ಡ ಸಾಧನೆ. ಆದರೆ ಭಾರತ, ಪಾಕಿಸ್ತಾನ ಅಂತಹ ತಂಡಗಳ ಜೊತೆಗೆ ಆಡುವುದು ಅವರ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ.

ಇದನ್ನು ಓದಿ: ಕ್ವಾಲಿಫೈಯರ್ ಮುಕ್ತಾಯ: ಸೂಪರ್ 12 ಟೀಂಗಳು, ಭಾರತ ತಂಡದ ವೇಳಾಪಟ್ಟಿ ಹೀಗಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.