ಹೋಬರ್ಡ್: ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು 4-0ಯಲ್ಲಿ ಆ್ಯಶಸ್ ವಶಪಡಿಸಿಕೊಂಡ ಸಂಭ್ರಮದಲ್ಲಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಏಷ್ಯಾದಲ್ಲಿ ಟೆಸ್ಟ್ಸಣಿಯನ್ನಾಡಲು ಎದುರು ನೋಡುತ್ತಿದ್ದೇವೆ, ಅಲ್ಲಿ ಗೆದ್ದರೆ ನಮ್ಮ ಸಾಮರ್ಥ್ಯ ತಿಳಿದಯಲಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಹೋಬರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 146 ರನ್ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದ್ದಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಸರಣಿ ಗೆದ್ದ ನಂತರ ನಿರೂಪಕರ ಕಮಿನ್ಸ್ ಪಡೆಗೆ ನಿಜವಾದ ಸವಾಲು ಏಷ್ಯಾದಲ್ಲಿ ಎದುರಾಗುವುದೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಲ್ಯಾಂಗರ್, "ಮುಂದಿನ ವರ್ಷ ಸಬ್ಕಾಂಟಿನೆಂಟ್ ಪ್ರವಾಸಗಳಿವೆ, ನಾವು ಏಷ್ಯಾದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಕಾಯುವುದಕ್ಕೆ ಆಗುತ್ತಿಲ್ಲ. ಅಲ್ಲಿಯೇ ನಮ್ಮ ತಂಡದ ನೈಜ ಸಾಮರ್ಥ್ಯ ಸಾಬೀತಾಗಲಿದೆ. ಈ ತಂಡ ಉತ್ತಮವಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಅಲ್ಲಿ ಪ್ರದರ್ಶನದ ನಂತರ ರೇಟಿಂಗ್ ನೀಡಬಹುದು" ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಮಾರ್ಚ್ 3ರಿಂದ ಏಪ್ರಿಲ್ 5ರವರೆಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಟೆಸ್ಟ್ , 3 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನಾಡಲಿದೆ. ಜೂನ್-ಜುಲೈನಲ್ಲಿ ಶ್ರೀಲಂಕಾ ಮತ್ತು 2023ಕ್ಕೆ ಭಾರತ ಪ್ರವಾಸ ಕೈಗೊಳ್ಳಲಿದೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 146 ರನ್ಗಳ ಜಯ; 4-0 ಆ್ಯಶಸ್ ಗೆದ್ದ ಕಮಿನ್ಸ್ ಪಡೆ