ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮುಂದಿನ ಒಂದರೆಡು ದಿನಗಳಲ್ಲಿ ಬಿಸಿಸಿಐನಿಂದ ಸಂಪೂರ್ಣ ಸ್ಪಷ್ಟತೆ ಸಿಗಲಿದೆ. ಆಫ್ರಿಕಾದಲ್ಲಿ ಹೊಸ COVID-19 ರೂಪಾಂತರದ ಕಂಡು ಬಂದಿರುವುದರಿಂದ ಯಾವುದೇ ರೀತಿಯ ಗೊಂದಲ ಉಂಟಾಗುವುದನ್ನ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನೀವು ಸಾಧ್ಯವಾದಷ್ಟು ಈ ವಿಚಾರದಲ್ಲಿ ಸಂಪೂರ್ಣ ಸ್ಪಷ್ಟತೆ ಬಯಸುತ್ತೀರಿ. ಆದ್ದರಿಂದ ತಂಡದ ಎಲ್ಲ ಹಿರಿಯ ಆಟಗಾರರೊಂದಿಗೆ ಮಾತನಾಡಿದ್ದೇವೆ. ನಿಸ್ಸಂಶಯವಾಗಿ ರಾಹುಲ್ ಭಾಯ್ (ದ್ರಾವಿಡ್) ತಂಡದಲ್ಲಿ ಮೊದಲಿಗೆ ಸಂಭಾಷಣೆಯನ್ನು ಪ್ರಾರಂಭಿಸಿದ್ದಾರೆ" 2ನೇ ಟೆಸ್ಟ್ಗೂ ಮುನ್ನ ನಡೆದ ಸುದ್ದಿಗೋಷ್ಠಿಯ ವೇಳೆ ಹೇಳಿದ್ದಾರೆ.
ದಿನದ ಆ ವಿಷಯವನ್ನು ಹೊರೆತುಪಡಿಸಿಯೂ ನಮ್ಮ ಗಮನ 2ನೇ ಟೆಸ್ಟ್ನಿಂದ ಹೊರ ಹೋಗುವುದಿಲ್ಲ. ಆದರೂ ನೀವು ಹೋಗಬೇಕಾದ ಸ್ಥಳದ ಪರಿಸ್ಥಿತಿಯ ಬಗ್ಗೆ ಮತ್ತು ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಬೇಕಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.
ನಾವು ಈ ಕುರಿತು ಮಂಡಳಿಯೊಂದಿಗೆ ಮಾತನಾಡುತ್ತಿದ್ದೇವೆ. ಒಂದು ಅಥವಾ ಒಂದೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ವೇಳಾಪಟ್ಟಿಯಂತೆ ಡಿಸೆಂಬರ್ 8ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾ ಮೊದಲಿಗೆ ಮೂರು ಟೆಸ್ಟ್ ಪಂದ್ಯಗಳು ನಂತರ 3 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನಾಡಲಿದೆ.
ಇದನ್ನೂ ಓದಿ:ಒಂದೆರಡು ದಿನಗಳಲ್ಲಿ ಕೊಹ್ಲಿಯ ODI ನಾಯಕತ್ವದ ಭವಿಷ್ಯ ನಿರ್ಧಾರ