ETV Bharat / sports

ಪೂಜಾರ, ರಹಾನೆ ಪರ ರಾಹುಲ್​ ಬ್ಯಾಟ್​​: ಆದಷ್ಟು ಬೇಗ ಫಾರ್ಮ್​​ ಕಂಡುಕೊಳ್ಳಲಿದ್ದಾರೆ ಎಂದ ಕನ್ನಡಿಗ - ಭಾರತ-ಇಂಗ್ಲೆಂಡ್ ಟೆಸ್ಟ್​

ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರಹಾನೆ ಹಾಗೂ ಪೂಜಾರಾ ಪರವಾಗಿ ಕನ್ನಡಿಗ ರಾಹುಲ್​ ಬ್ಯಾಟ್​ ಬೀಸಿದ್ದು, ಆದಷ್ಟು ಬೇಗ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Rahul
Rahul
author img

By

Published : Aug 14, 2021, 3:04 PM IST

Updated : Aug 14, 2021, 3:59 PM IST

ಲಾರ್ಡ್ಸ್​​(ಲಂಡನ್​): ಆತಿಥೇಯ ಇಂಗ್ಲೆಂಡ್​​ ಹಾಗೂ ಪ್ರವಾಸಿ ಭಾರತದ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್​​​ ಮೈದಾನದಲ್ಲಿ ಎರಡನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 364ರನ್​​ಗಳಿಗೆ ಆಲೌಟ್​​ ಆಗಿದೆ. ತಂಡದ ಪರ ಕನ್ನಡಿಗ ರಾಹುಲ್​​ 129ರನ್​ಗಳಿಕೆ ಮಾಡಿ ಮಿಂಚಿದರೆ, ಪ್ರಮುಖ ಬ್ಯಾಟ್ಸಮನ್​ಗಳಾದ ರಹಾನೆ ಹಾಗೂ ಪೂಜಾರ ವೈಫಲ್ಯ ಅನುಭವಿಸಿದ್ದಾರೆ.

ಪೂಜಾರ, ರಹಾನೆ ಪರ ರಾಹುಲ್​ ಬ್ಯಾಟ್​​

ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್​ ಪೂಜಾರ ಮೇಲಿಂದ ಮೇಲೆ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದ್ದು, ಇದೇ ವಿಷಯಕ್ಕೆ ಸಂಬಂದಿಸಿದಂತೆ ಕೆ.ಎಲ್​​ ರಾಹುಲ್​ ಮಾತನಾಡಿದ್ದಾರೆ. ರನ್​ಗಳಿಕೆ ಮಾಡಲು ಹೆಣಗಾಡುತ್ತಿರುವ ಪೂಜಾರಾ ಹಾಗೂ ರಹಾನೆ ಆದಷ್ಟು ಬೇಗ ತಮ್ಮ ಫಾರ್ಮ್​ ಕಂಡುಕೊಳ್ಳಲಿದ್ದಾರೆ ಎಂದಿರುವ ರಾಹುಲ್​, ಅವರಿಬ್ಬರು ವಿಶ್ವ ದರ್ಜೆ ಪ್ಲೇಯರ್ಸ್​ಗಳು ಎಂದಿದ್ದಾರೆ. ಭಾರತ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಸಂದರ್ಭಗಳಲ್ಲಿ ಪೂಜಾರಾ ಹಾಗೂ ರಹಾನೆ ತಂಡಕ್ಕೆ ಸಾಥ್​ ನೀಡಿದ್ದು, ಆದಷ್ಟು ಬೇಗ ಕಳಪೆ ಫಾರ್ಮ್​ನಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರಾಹುಲ್​, ಇಂಗ್ಲೆಂಡ್​ನಲ್ಲಿ ಬ್ಯಾಟ್​ ಮಾಡುವುದು ತುಂಬಾ ಕಠಿಣ. ಪ್ರತಿಯೊಂದು ಇನ್ನಿಂಗ್ಸ್​ನಲ್ಲಿ ರನ್​ಗಳಿಕೆ ಮಾಡುವುದು ಸುಲಭವಾದ ಕೆಲಸವಲ್ಲ. ಉತ್ತಮ ಆರಂಭ ಪಡೆದುಕೊಂಡರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿರಿ: 'ನೈಟ್​​ ವಾಚ್​ಮ್ಯಾನ್​ ಕೆಲಸ ಸರಿಯಾಗಿ ಮಾಡಿದ್ದಾರೆ'...ರಹಾನೆ ಕಾಲೆಳೆದ ಕ್ರಿಕೆಟ್​​ ಪ್ರೇಮಿಗಳು!

ಪ್ರತಿವೊಂದು ಟೆಸ್ಟ್​​ ಶತಕ ನನಗೆ ವಿಶೇಷ. ಆದರೆ ಲಾರ್ಡ್ಸ್​ ಮೈದಾನದಲ್ಲಿ ಗಳಿಕೆ ಮಾಡಿರುವ ಶತಕ ಮತ್ತಷ್ಟು ಹತ್ತಿರವಾಗಿದೆ. ಜೊತೆಗೆ ಸ್ವಲ್ಪ ಹೆಚ್ಚಿಗೆ ವಿಶೇಷವಾಗಿದೆ ಎಂದರು. ಕ್ರಿಕೆಟ್ ಆಡಲು ಮೈದಾನಕ್ಕಿಳಿದಾಗ ದೇಶಕ್ಕಾಗಿ ರನ್​ಗಳಿಕೆ ಮಾಡಬೇಕು ಎಂಬ ಇರಾದೆ ಇರುತ್ತದೆ. ಲಾರ್ಡ್ಸ್​ ಮೈದಾನದಲ್ಲಿ ಉತ್ತಮ ರನ್​ಗಳಿಕೆ ಮಾಡಿರುವುದು ಸಂತೋಷ ನೀಡಿದೆ ಎಂದರು. ಕಳೆದ ಎರಡು ಟೆಸ್ಟ್​​ ಪಂದ್ಯಗಳಿಂದ ಪೂಜಾರಾ 4,12(ಅಜೇಯ) ಹಾಗೂ 9 ರನ್​ಗಳಿಕೆ ಮಾಡಿದ್ದು, ರಹಾನೆ 5, 1ರನ್​ಗಳಿಸಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ಭಾರತ - ಇಂಗ್ಲೆಂಡ್ ನಡುವಣ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿರುವ ಇಂಡಿಯಾ 364ರನ್​​ಗಳಿಗೆ ಆಲೌಟ್​ ಆಗಿದ್ದು, ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್​ 3 ವಿಕೆಟ್​​ಗಳ ​ನಷ್ಟಕ್ಕೆ 119ರನ್​ಗಳಿಕೆ ಮಾಡಿದೆ. ಇಂಗ್ಲೆಂಡ್ ಪರ ಬೌಲಿಂಗ್​ನಲ್ಲಿ ಮಿಂಚಿರುವ ಆ್ಯಂಡರ್ಸನ್​ 5 ವಿಕೆಟ್ ಪಡೆದುಕೊಂಡಿದ್ದು, ಭಾರತದ ವೇಗ ಸಿರಾಜ್​​ 2 ವಿಕೆಟ್​ ಕಿತ್ತಿದ್ದಾರೆ.

Last Updated : Aug 14, 2021, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.