ಗಾಲೆ (ಶ್ರೀಲಂಕಾ): ಸ್ಪಿನ್ ಬೌಲಿಂಗ್ ಅಂದ್ರೇನೆ ಹಾಗೆ. ಅಲ್ಲೊಂದು ಮಾಂತ್ರಿಕತೆ ಇದ್ದೇ ಇರುತ್ತೆ. ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಶಾ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಹಾಕಿದ ಎಸೆತ "ಬೌಲ್ ಆಫ್ ದಿ ಸೆಂಚುರಿ"ಯ ಮಾದರಿಯಲ್ಲಿದೆ. ಇದು ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಬಾಲ್ ಆಫ್ ದಿ ಸೆಂಚುರಿಯನ್ನು ನೆನಪಿಸಿತು.
ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿನ ಈ ಎಸೆತ ಇದೀಗ ಸದ್ದು ಮಾಡುತ್ತಿದೆ. ಯಾಸಿರ್ ಶಾ ಎಸೆದ ಆಕರ್ಷಕ ಎಸೆತ ಶ್ರೀಲಂಕಾದ ಕುಶಾಲ್ ಮೆಂಡಿಸ್ರನ್ನು ಒಂದೇ ಕ್ಷಣದಲ್ಲಿ ಪೆವಿಲಿಯನ್ ಸೇರುವಂತೆ ಮಾಡಿದೆ.
-
Ball of the Century candidate❓
— Sri Lanka Cricket 🇱🇰 (@OfficialSLC) July 18, 2022 " class="align-text-top noRightClick twitterSection" data="
Yasir Shah stunned Kusal Mendis with a stunning delivery which reminded the viewers of Shane Warne’s ‘Ball of the Century’.#SLvPAK pic.twitter.com/uMPcua7M5E
">Ball of the Century candidate❓
— Sri Lanka Cricket 🇱🇰 (@OfficialSLC) July 18, 2022
Yasir Shah stunned Kusal Mendis with a stunning delivery which reminded the viewers of Shane Warne’s ‘Ball of the Century’.#SLvPAK pic.twitter.com/uMPcua7M5EBall of the Century candidate❓
— Sri Lanka Cricket 🇱🇰 (@OfficialSLC) July 18, 2022
Yasir Shah stunned Kusal Mendis with a stunning delivery which reminded the viewers of Shane Warne’s ‘Ball of the Century’.#SLvPAK pic.twitter.com/uMPcua7M5E
76 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಕುಶಾಲ್ ಮೆಂಡಿಸ್ ಶತಕದ ಸನಿಹದಲ್ಲಿದ್ದರು. ಈ ಸಂದರ್ಭದಲ್ಲಿ 56ನೇ ಓವರ್ ಬೌಲಿಂಗ್ ಮಾಡಿದ ಶಾ, ಮೆಂಡಿಸ್ರನ್ನು ಕೆಣಕಲು ಲೆಗ್ ಸ್ಟಂಪ್ ಹೊರಗೆ ಬಾಲ್ ಮಾಡಿದರು. ಚೆಂಡು ಹಠಾತ್ತನೇ ತಿರುವು ಪಡೆದು ಬಲಭಾಗದಿಂದ ತೂರಿ ಬಂದು ಎಡಭಾಗದ ವಿಕೆಟ್ಗೆ ಅಪ್ಪಳಿಸಿ, ಅರೆಕ್ಷಣ ಎಲ್ಲರೂ ದಂಗಾಗುವಂತೆ ಮಾಡಿತು. ವಿಕೆಟ್ಗೆ ನೇರವಾಗಿದ್ದ ಬ್ಯಾಟರ್ ಮೆಂಡಿಸ್ ಔಟಾಗಿದ್ದು ನಂಬಲಸಾಧ್ಯವಾಯಿತು. ಇದನ್ನು ಬೌಲ್ ಆಫ್ ದಿ ಸೆಂಚುರಿ ಎಂದು ಬಣ್ಣಿಸಲಾಗಿದೆ.
ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ 1993 ರಲ್ಲಿ ಇದೇ ರೀತಿಯ ಬಾಲ್ ಆಫ್ ದಿ ಸೆಂಚುರಿ ಎಸೆದ ಸಾಧನೆ ಮಾಡಿದ್ದರು. ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಮೈಕ್ ಗ್ಯಾಟಿಂಗ್‌ರನ್ನು ವಂಚಿಸಿದ ಚೆಂಡು ಲೆಗ್ ಸ್ಟಂಪ್ನಿಂದ ತೂರಿ ಬಂದು ಆಫ್ ಸ್ಟಂಪ್ ಕೆಡವಿತ್ತು.
ಇದನ್ನೂ ಓದಿ: ನೆಟ್ಸ್‌ನಲ್ಲಿ ಕೆ.ಎಲ್.ರಾಹುಲ್‌ಗೆ ಜೂಲನ್ ಗೋಸ್ವಾಮಿ ಬೌಲಿಂಗ್: ವಿಡಿಯೋ ನೋಡಿ