ಸೆಂಚುರಿಯನ್: ಪ್ರಸ್ತುತ ಭಾರತ ಬ್ಯಾಟಿಂಗ್ ಲೈನ್‌ಅಪ್ ದಕ್ಷಿಣ ಆಫ್ರಿಕಾದಲ್ಲಿನ ವೇಗಿಗಳಿಗೆ ನೆರವು ನೀಡುವ ಪಿಚ್ಗಳಲ್ಲಿ ಚಲನೆಯುಳ್ಳ ವೇಗದ ಬೌಲಿಂಗ್ಗೆ ಪ್ರತ್ಯುತ್ತರ ಕೊಡುವಷ್ಟು ಅನುಭವವನ್ನು ಹೊಂದಿದೆ ಎಂದಿರುವ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ್ ಪೂಜಾರ ವಿರಾಟ್ ಕೊಹ್ಲಿ ನೇತೃತ್ವದ ತಂಡ ಹರಿಣಗಳ ನಾಡಿನಲ್ಲಿ ಉತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನಿ ವಿದೇಶಿ ಸರಣಿಯಲ್ಲಿನ ಭಾರತ ತಂಡದ ಯಶಸ್ಸು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವುದಕ್ಕೆ ನಮ್ಮ ಆಟಗಾರರಲ್ಲಿ ವಿಶ್ವಾಸವನ್ನುಂಟು ಮಾಡಿದೆ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪೂಜಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
Team confidence ✅
— BCCI (@BCCI) December 23, 2021 " class="align-text-top noRightClick twitterSection" data="
Personal preparation ✅
South Africa challenge ✅@cheteshwar1 covers all bases in this interview with https://t.co/Z3MPyesSeZ
Full interview 🎥 🔽 #TeamIndia #SAvIND https://t.co/7ML9NJkYRu pic.twitter.com/7xhLiyJJcA
">Team confidence ✅
— BCCI (@BCCI) December 23, 2021
Personal preparation ✅
South Africa challenge ✅@cheteshwar1 covers all bases in this interview with https://t.co/Z3MPyesSeZ
Full interview 🎥 🔽 #TeamIndia #SAvIND https://t.co/7ML9NJkYRu pic.twitter.com/7xhLiyJJcATeam confidence ✅
— BCCI (@BCCI) December 23, 2021
Personal preparation ✅
South Africa challenge ✅@cheteshwar1 covers all bases in this interview with https://t.co/Z3MPyesSeZ
Full interview 🎥 🔽 #TeamIndia #SAvIND https://t.co/7ML9NJkYRu pic.twitter.com/7xhLiyJJcA
ನೀವು ಪ್ರವಾಸಿ ತಂಡವಾಗಿದ್ದಾಗ, ಅಲ್ಲಿ(ದ. ಆ) ವೇಗ ಮತ್ತು ಬೌನ್ಸ್ಗೆ ಹೆಚ್ಚು ನೆರವಾಗುತ್ತದೆ ಎಂದು ತಿಳಿದಿರುತ್ತದೆ. ಜೊತೆಗೆ ಬೌಲಿಂಗ್ನಲ್ಲಿ ವೈವಿದ್ಯಮಯ ಚಲನೆ ಹೊಂದಿರುತ್ತದೆ. ಹಾಗಾಗಿ ಭಾರತದಿಂದ ಹೋದಂತಹ ಬ್ಯಾಟರ್ಗಳಿಗೆ ಅಲ್ಲಿನ ಬೌಲರ್ಗಳನ್ನು ಎದುರಿಸುವುದು ಯಾವಾಗಲೂ ದೊಡ್ಡ ಸವಾಲಾಗಿರುತ್ತದೆ ಎಂದು ಪೂಜಾರಾ ಹೇಳಿದ್ದಾರೆ.
ನಮ್ಮ ಈ ತಂಡ ಅಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂದು ಕಲಿತಿದೆ. ಮತ್ತು ನಮ್ಮ ಬ್ಯಾಟಿಂಗ್ ಲೈನ್ ಅಪ್ ಅತ್ಯುತ್ತಮ ಸಮತೋಲನವನ್ನು ಹೊಂದಿದೆ. ಆದ್ದರಿಂದ ನಮ್ಮ ಬ್ಯಾಟರ್ಗಳು ಅಲ್ಲಿನ ಬೌಲರ್ಗಳನ್ನು ಎದುರಿಸಲು ಸಮರ್ಥರಿದ್ದಾರೆ ಮತ್ತು ನಮ್ಮ ತಯಾರಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಅಲ್ಲಿ ನಾವು ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಅನುಭವ ನೆರವಾಗಲಿದೆ: ಭಾರತ ತಂಡದಲ್ಲಿರುವ ಬಹುಪಾಲು ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದಾರೆ. ಇದೊಂದು ಅನುಭವಿಗಳ ತಂಡವಾಗಿದೆ ಮತ್ತು ಸರಣಿಯ ಪೂರ್ವ ಸಿದ್ಧತಾ ಭಾಗದಲ್ಲಿ ನಮ್ಮಿಂದ ಮ್ಯಾನೇಜ್ಮೆಂಟ್ ಏನನ್ನು ನಿರೀಕ್ಷಿಸುತ್ತಿದೆ ಎನ್ನುವುದು ನಮಗೆ ತಿಳಿದಿದೆ. ಬಹಳಷ್ಟು ತಂಡಗಳು ತವರಿನ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡುತ್ತವೆ.
ಇದೇ ದಕ್ಷಿಣ ಆಫ್ರಿಕಾ ತಂಡಕ್ಕೂ ಅನ್ವಯಿಸುತ್ತದೆ. ಅವರದು ವಿಶ್ವದ ಅತ್ಯುತ್ತಮ ಬೌಲಿಂಗ್ ಲೈನ್‌ಅಪ್ ಹೊಂದಿರುವ ತಂಡಗಳಲ್ಲಿ ಒಂದಾಗಿದೆ. ಅಂತಹ ವಿಶ್ವಶ್ರೇಷ್ಠ ಬೌಲರ್ಗಳನ್ನು ಎದುರಿಸುವುದು ಒಂದು ಸವಾಲಾಗಲಿದೆ ಎಂದಿದ್ದಾರೆ.
ಇಂಗ್ಲೆಂಡ್-ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಆತ್ಮ ವಿಶ್ವಾಸ ಹೆಚ್ಚಿಸಿದೆ
ಭಾರತ ತಂಡ ಕಳೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 2-1ರಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿದೆ. ಈ ಎರಡು ರಾಷ್ಟ್ರಗಳಲ್ಲಿ ಉತ್ತಮ ಪ್ರದರ್ಶನ ತೋರಿರುವುದು ತಂಡದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದು, ವಿಶ್ವದ ಯಾವುದೇ ರಾಷ್ಟ್ರದಲ್ಲಿ ಸರಣಿ ಗೆಲ್ಲಬಲ್ಲವು ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜೊತೆಗೆ ನಾವು ವಿಶ್ವಶ್ರೇಷ್ಠ ಬೌಲಿಂಗ್ ಲೈನ್ ಅಪ್ ಹೊಂದಿರುವುದರಿಂದ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು 33 ವರ್ಷದ ರಾಜ್ಕೋಟ್ ಕ್ರಿಕೆಟಿಗ ಹೇಳಿದ್ದಾರೆ.