ETV Bharat / sports

ಮುಂದಿನ ವರ್ಷ ABD ಆರ್​​ಸಿಬಿಗೆ ಮರಳುತ್ತಾರೆ: ಗೆಳೆಯ ವಿರಾಟ್​ ಕೊಹ್ಲಿ ವಿಶ್ವಾಸ! - ಆರ್​​ಸಿಬಿ

ಎಬಿಡಿ ಕಳೆದ ವರ್ಷ ಎಲ್ಲ ಬಗೆಯ ಕ್ರಿಕೆಟ್​​ನಿಂದ ವಿದಾಯ ಘೋಷಿಸಿದ್ದರು. ಈ ಬಗ್ಗೆ ಮಾತನಾಡಿರುವ ಆರ್​​​​ಸಿಬಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ, ಎಬಿಡಿಯನ್ನು ತಾವು ಸಾಕಷ್ಟು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

Watch: Hopefully, AB de Villiers will be back at RCB next year in some capacity, says Kohli
ಮುಂದಿನ ವರ್ಷ ABD ಆರ್​​ಸಿಬಿಗೆ ಮರಳುತ್ತಾರೆ: ಗೆಳೆಯ ವಿರಾಟ್​ ಕೊಹ್ಲಿ ವಿಶ್ವಾಸ!
author img

By

Published : May 11, 2022, 4:38 PM IST

ನವದೆಹಲಿ: ಆತ್ಮೀಯ ಗೆಳೆಯ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ ವಿಲಿಯರ್ಸ್​​​​​​ ಮುಂದಿನ ವರ್ಷ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡಕ್ಕೆ ಮರಳಲಿದ್ದಾರೆ ಎಂದು ಭಾರತದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಬಿ ಡಿ ವಿಲಿಯರ್ಸ್​​​​​​​​ ಆರ್​​​​ಸಿಬಿ ಕುಟುಂಬದ ದೊಡ್ಡ ಸದಸ್ಯರಾಗಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

  • Interview of the year! Catch Virat Kohli in a relaxed, honest and fun avatar, even as Mr. Nags tries to annoy him just like he’s done over the years. 😎🤙

    Tell us what the best moment from this interview was for you, in the comments section. 👨‍💻#PlayBold #IPL2022 #RCB #ನಮ್ಮRCB pic.twitter.com/vV6MyRDyRt

    — Royal Challengers Bangalore (@RCBTweets) May 11, 2022 " class="align-text-top noRightClick twitterSection" data=" ">

ಎಬಿಡಿ ಕಳೆದ ವರ್ಷ ಎಲ್ಲ ಬಗೆಯ ಕ್ರಿಕೆಟ್​​ನಿಂದ ವಿದಾಯ ಘೋಷಿಸಿದ್ದರು. ಈ ಬಗ್ಗೆ ಮಾತನಾಡಿರುವ ಆರ್​​​​ಸಿಬಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ, ಎಬಿಡಿಯನ್ನು ತಾವು ಸಾಕಷ್ಟು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅವರೊಂದಿಗೆ ತಾವು ನಿತ್ಯ ಮಾತನಾಡುತ್ತಿರುವುದಾಗಿಯೂ ಇದೇ ವೇಳೆ ಕೊಹ್ಲಿ ನೆನಪು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕದಲ್ಲಿದ್ದು, ಗಾಲ್ಫ್​​ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ಆರ್​​ಸಿಬಿ ಚಟುವಟಿಕೆಗಳನ್ನು ತೀರಾ ಹತ್ತಿರದಿಂದ ವೀಕ್ಷಣೆ ಮಾಡ್ತಿದ್ದಾರೆ. ಅವರು ಮುಂದಿನ ವರ್ಷ ತಂಡದ ಜೊತೆ ಸೇರಲಿದ್ದಾರೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಿರಾಟ್​ ಕೊಹ್ಲಿ ರನ್​ಗಳ ಬರ ಎದುರಿಸುತ್ತಿದ್ದು, ಪ್ರಸ್ತುತ ಐಪಿಎಲ್​​ನಲ್ಲಿ 12 ಪಂದ್ಯಗಳಿಂದ ಕೇವಲ 216 ರನ್​ಗಳನ್ನು ಕಲೆ ಹಾಕಿದ್ದಾರೆ. ಇಷ್ಟು ಪಂದ್ಯಗಳಿಂದ ಕೊಹ್ಲಿ ಕೇವಲ ಒಂದು ಫಿಫ್ಟಿ ಬಾರಿಸಿದ್ದಾರೆ. ಅಷ್ಟೇ ಅಲ್ಲ ಮೂರು ಬಾರಿ ಗೋಲ್ಡನ್​ ಡಕ್​​​​​​​​( ಶೂನ್ಯಕ್ಕೆ) ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ನನ್ನ ಕ್ರಿಕೆಟ್​ ಜೀವನಲ್ಲಿ ಇಂತಹ ಸಂದರ್ಭ ಬಂದಿರಲಿಲ್ಲ, ಆದರೂ ನಾನು ಹಸನ್ಮುಖಿಯಾಗಿದ್ದೇನೆ. ಆಟದಿಂದ ನೋಡಬೇಕಾದ ಎಲ್ಲವನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ನಾಯಕತ್ವದಿಂದ ಕೆಳಗಿಳಿದ ರವೀಂದ್ರ ಜಡೇಜಾ ಈಗ ಐಪಿಎಲ್​​ನಿಂದಲೇ ಹೊರಕ್ಕೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.