ನಾರ್ಥಾಂಪ್ಟನ್: ಇಂಗ್ಲೆಂಡ್ ವನಿತೆಯರ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಲ್ರೌಂಡರ್ ಹರ್ಲೀನ್ ಡಿಯೋಲ್ ಬೌಂಡರಿ ಲೈನ್ ಬಳಿ ಪಡೆದ ಅದ್ಭುತ ಕ್ಯಾಚ್ ಸಾಮಾಜಿಕ ಜಾಲಾತಾಣದಲ್ಲಿ ಕಿಚ್ಚೆಬ್ಬಿಸುತ್ತಿದೆ. ಭಾರತದ ಸ್ಟಾರ್ ಕ್ರಿಕೆಟಿಗರ ಜೊತೆಗೆ ವಿದೇಶಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಕೂಡ ಹರ್ಲೀನ್ ಪಡೆದ ಅದ್ಭುತ ಕ್ಯಾಚ್ಗೆ ಫಿದಾ ಆಗಿ ಮೆಚ್ಚುಗೆ ಸೂಚಿಸಿದ್ದಾರೆ.
ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಮೊದಲ ಮಹಿಳಾ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಆಮಿ ಜೋನ್ಸ್ ಅವರು ಶಿಖಾ ಪಾಂಡೆ ಎಸೆದ 18 ಓವರ್‌ನ 5ನೇ ಎಸೆತವನ್ನು ಲಾಂಗ್ ಆಫ್ನತ್ತ ಬಾರಿಸಿದರು. ಹರ್ಲೀನ್ ಡಿಯೋಲ್ ಬೌಂಡರಿ ಲೈನ್ ಬಳಿ ಚೆಂಡನ್ನು ಹಿಡಿದರಾದರೂ ವೇಗವಾಗಿ ಓಡಿದ್ದರಿಂದ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಚೆಂಡನ್ನು ಮೇಲಕ್ಕೆ ಎಸೆದು ಮತ್ತೆ ಬೌಂಡರಿ ಹೊರಗಿನಿಂದ ಡೈವ್ ಮಾಡಿ ಕ್ಯಾಚ್ ಪಡೆದುಕೊಂಡರು.
-
A fantastic piece of fielding 👏
— England Cricket (@englandcricket) July 9, 2021 " class="align-text-top noRightClick twitterSection" data="
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJ
">A fantastic piece of fielding 👏
— England Cricket (@englandcricket) July 9, 2021
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJA fantastic piece of fielding 👏
— England Cricket (@englandcricket) July 9, 2021
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJ
ಈ ಅದ್ಭುತ ಕ್ಯಾಚ್ಗೆ ಭಾರತ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್,ಹರ್ಭಜನ್ ಸಿಂಗ್ ಅಲ್ಲದೆ ಎಲ್ಲಾ ವರ್ಗದ ಸೆಲೆಬ್ರೆಟಿಗಳು ಕೂಡ ಹರ್ಲೀನ್ ಕ್ಯಾಚ್ಗೆ ಶಹಬ್ಬಾಶ್ಗಿರಿ ನೀಡಿದ್ದಾರೆ.
-
That was a brilliant catch @imharleenDeol. Definitely the catch of the year for me!pic.twitter.com/pDUcVeOVN8
— Sachin Tendulkar (@sachin_rt) July 10, 2021 " class="align-text-top noRightClick twitterSection" data="
">That was a brilliant catch @imharleenDeol. Definitely the catch of the year for me!pic.twitter.com/pDUcVeOVN8
— Sachin Tendulkar (@sachin_rt) July 10, 2021That was a brilliant catch @imharleenDeol. Definitely the catch of the year for me!pic.twitter.com/pDUcVeOVN8
— Sachin Tendulkar (@sachin_rt) July 10, 2021
ಭಾರತ ತಂಡ ಈ ಪಂದ್ಯವನ್ನು 18 ರನ್ಗಳಿಂದ ಸೋಲು ಕಂಡು ನಿರಾಶೆ ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 177 ರನ್ಗಳಿಸಿತು. ಆದರೆ ಭಾರತ ತಂಡ 8.4 ಓವರ್ಗಳಲ್ಲಿ 54 ರನ್ಗಳಿಸಿದ್ದ ವೇಳೆ ಮಳೆ ಬಂದು ಆಟ ಸ್ಥಗಿತಗೊಂಡಿತು. ಮಳೆ ಆಟಕ್ಕೆ ಅನುವು ಮಾಡಿಕೊಡದಿದ್ದರಿಂದ ಡಿಎಲ್ಎಸ್ ನಿಯಮದ ಪ್ರಕಾರ ಭಾರತ 18ರನ್ಗಳ ಸೋಲು ಕಾಣಬೇಕಾಯಿತು.
ಇದನ್ನು ಓದಿ: ಕನ್ಫರ್ಮ್: ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಜುಲೈ 17ಕ್ಕೆ ಮುಂದೂಡಿಕೆ