ETV Bharat / sports

ಸೆಮಿಫೈನಲ್‌ ಸೋಲಿನ ನಂತರ ಕಣ್ಣೀರಿಟ್ಟ ರೋಹಿತ್‌ ಶರ್ಮಾ: ಸಮಾಧಾನ ಪಡಿಸಿದ ದ್ರಾವಿಡ್

author img

By

Published : Nov 10, 2022, 10:20 PM IST

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲಿನ ಬಳಿಕ ರೋಹಿತ್‌ ಶರ್ಮಾ ಕಣ್ಣೀರು ಹಾಕುವ ಮತ್ತು ಕೋಚ್​ ರಾಹುಲ್ ದ್ರಾವಿಡ್ ಸಾಂತ್ವನ ಹೇಳುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

Coach Dravid consoles teary-eyed Rohit after 10-wicket loss to England
ಸೆಮಿಫೈನಲ್‌ ಸೋಲಿನ ನಂತರ ಕಣ್ಣೀರಿಟ್ಟ ರೋಹಿತ್‌ ಶರ್ಮಾ: ಸಮಾಧಾನ ಪಡಿಸಿದ ದ್ರಾವಿಡ್

ಅಡಿಲೇಡ್ (ಆಸ್ಟ್ರೇಲಿಯಾ): ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಸೋಲಿನ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ತಂಡದ ಕೋಚ್ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧ ಪಂದ್ಯದಲ್ಲಿ ಭಾರತ 10 ವಿಕೆಟ್​ಗಳಿಂದ ಸೋಲು ಕಂಡಿದೆ. ಅಲೆಕ್ಸ್ ಹೇಲ್ಸ್ 47 ಎಸೆತಗಳಲ್ಲಿ 86 ರನ್ ಹಾಗೂ ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಬಾರಿಸಿ ಭಾರತದ ಬೌಲರ್​ಗಳ ಬೆವರು ಇಳಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಇದನ್ನೂ ಓದಿ: T20 World Cup: ಟೀಂ ಇಂಡಿಯಾದ ಫೈನಲ್​ ಕನಸು ಭಗ್ನ... ಇಂಗ್ಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಗೆಲುವು

ಈ ಹೀನಾಯ ಸೋಲಿನಿಂದ ನಾಯಕ ರೋಹಿತ್ ಶರ್ಮಾ ಸಂಪೂರ್ಣ ನಿರಾಶೆಗೊಂಡು ಕಣ್ಣೀರು ಸುರಿಸಿದ್ದಾರೆ. ಏಕಾಂಗಿಯಾಗಿ ಕುಳಿತು ರೋಹಿತ್​ಕಣ್ಣೀರು ಹಾಕಿದ್ದಾರೆ. ಆಗ ಪಕ್ಕದಲ್ಲೇ ಕುಳಿತಿದ್ದ ದ್ರಾವಿಡ್ ಬೆನ್ನು ತಟ್ಟಿ ಸಮಾಧಾನ ಮಾಡಿದ್ದಾರೆ. ರೋಹಿತ್‌ ಕಣ್ಣೀರು ಹಾಕುವ ಮತ್ತು ದ್ರಾವಿಡ್ ಸಾಂತ್ವನ ಹೇಳುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ಟೀಂ ಇಂಡಿಯಾದ ಬ್ಯಾಟಿಂಗ್​ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.