ಹೋಬಾರ್ಟ್ (ಆಸ್ಟ್ರೇಲಿಯಾ) : ಇತ್ತೀಚಿನ ದಿನಗಳಲ್ಲಿ ಬೌಂಡರಿ ಬಳಿಯ ರಿಲೇ ಕ್ಯಾಚ್‌ಗಳು ಕ್ರಿಕೆಟ್‌ನಲ್ಲಿ ರೂಢಿಯಾಗಿವೆ. ಆದರೆ, ಅವುಗಳ ಹೊರತಾಗಿಯೂ ಈ ಕ್ಯಾಚ್ ಮಾತ್ರ ಸಂಪೂರ್ಣ ವಿಭಿನ್ನವಾಗಿದ್ದು, ಅಭಿಮಾನಿಗಳನ್ನು ಚಕಿತಗೊಳಿಸುತ್ತದೆ.
ಶನಿವಾರ ಹೋಬರ್ಟ್‌ನ ಬ್ಲಂಡ್‌ಸ್ಟೋನ್ ಅರೆನಾದಲ್ಲಿ ಹಾಜರಿದ್ದ ಪ್ರೇಕ್ಷಕರಿಗೆ ನಿಖರವಾಗಿ ಏನಾಯಿತು ಎಂಬುದೇ ತಕ್ಷಣಕ್ಕೆ ತಿಳಿಯಲಿಲ್ಲ. ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಮಹಿಳಾ ಬಿಗ್ ಬ್ಯಾಷ್ ಲೀಗ್ ನಡುವೆ ಇಂಥಹದೊಂದು ವಿಭಿನ್ನ ಪ್ರಯತ್ನ ನಡೆದಿದೆ. ಬ್ರಿಜೆಟ್ ಪ್ಯಾಟರ್ಸನ್ ಅವರು ಒಂದು ಕೈನಲ್ಲಿಯೇ ಕ್ಯಾಚ್ ಹಿಡಿದು ಮತ್ತೆ ಪೆವಿಲಿಯನ್‌ಗೆ ಬಾಲ್ ಎಸೆದಿದ್ದಾರೆ.
ಡೀಪ್ ಮಿಡ್ ವಿಕೆಟ್‌ನಲ್ಲಿ ನಿಂತಿದ್ದ ಪ್ಯಾಟರ್ಸನ್ ತನ್ನ ಬಲಗೈಯಿಂದ ಚೆಂಡನ್ನು ಹಿಡಿದರು. ಆಕೆಯ ಆವೇಗವು ಬೌಂಡರಿ ಗೆರೆಯ ಮೇಲೆ ಹೋಗುವಂತೆ ಮಾಡಿತು. ತಕ್ಷಣ ಎಚ್ಚೆತ್ತ ಅವರು ಚೆಂಡನ್ನು ಮತ್ತೆ ಪೆವಿಲಿಯನ್‌ಗೆ ಎಸೆದರು.
-
Bridget Patterson walks the boundary tightrope - and catches a classic! #OhWhatAFeeling | @Toyota_Aus | #WBBL07 pic.twitter.com/C7FzpZket6
— cricket.com.au (@cricketcomau) October 16, 2021 " class="align-text-top noRightClick twitterSection" data="
">Bridget Patterson walks the boundary tightrope - and catches a classic! #OhWhatAFeeling | @Toyota_Aus | #WBBL07 pic.twitter.com/C7FzpZket6
— cricket.com.au (@cricketcomau) October 16, 2021Bridget Patterson walks the boundary tightrope - and catches a classic! #OhWhatAFeeling | @Toyota_Aus | #WBBL07 pic.twitter.com/C7FzpZket6
— cricket.com.au (@cricketcomau) October 16, 2021
ಪ್ಯಾಟರ್ಸನ್ ಮೈದಾನದಲ್ಲಿ ಮಾಡಿದ ಅಸಾಧಾರಣ ಪ್ರಯತ್ನವನ್ನು ಬೌಲ್ ಮಾಡಿದ ಬೌಲರ್ ಅಮಂಡಾ ವೆಲ್ಲಿಂಗ್ಟನ್ ಸೇರಿದಂತೆ ಅನೇಕರು 'ನಂಬಲಸಾಧ್ಯ' ಎಂದು ಬಣ್ಣಿಸಿದ್ದಾರೆ.