ದುಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದ ಎಬಿ ಡಿ ವಿಲಿಯರ್ಸ್ ಕಳೆದ ಮೂರು ಪಂದ್ಯಗಳಿಂದ ವೈಫಲ್ಯ ಅನುಭವಿಸಿದ್ದಾರೆ. ಯುಎಇನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 0,12, 11 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.
ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವಿಲಿಯರ್ಸ್, ಭಾರತದಲ್ಲಿ ನಡೆದಿದ್ದ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಯುಎಇಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಬಹಳ ನಿರಾಶೆ ತಂದಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ, ಸ್ವತಃ ವಿಲಿಯರ್ಸ್ ಮಗ ಕೂಡ ತಂದೆ ವಿಕೆಟ್ ಒಪ್ಪಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿರೋ ವಿಡಿಯೋವೊಂದು ವೈರಲ್ ಆಗುತ್ತಿದೆ.
- — lawgical Anna🍁 (@annaanupam1) September 26, 2021 " class="align-text-top noRightClick twitterSection" data="
— lawgical Anna🍁 (@annaanupam1) September 26, 2021
">— lawgical Anna🍁 (@annaanupam1) September 26, 2021
ಬುಮ್ರಾ ಎಸೆದ 17ನೇ ಓವರ್ನಲ್ಲಿ ಎಬಿಡಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ್ದರು. ಆದರೆ, 19ನೇ ಓವರ್ನಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಬುಮ್ರಾ ಮ್ಯಾಕ್ಸ್ವೆಲ್ ಮತ್ತು ಎಬಿಡಿಯನ್ನು ಸತತ 2 ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು.
ಎಬಿಡಿ ಔಟಾಗುತ್ತಿದ್ದಂತೆ ತಾಯಿ ಡೇನಿಯಲ್ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮಗ ಬೇಸರದಿಂದ ತಮ್ಮ ಮುಂದಿರುವ ಚೇರ್ಗೆ ಗುದ್ದಿದ್ದಾರೆ. ಆದರೆ, ಕೋಪದಲ್ಲಿ ಗುದ್ದಿದ್ದರಿಂದ ನೋವು ಕೂಡ ಅನುಭವಿಸಿದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಅದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು 166 ರನ್ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿದೆ. ಅದ್ಭುತವಾಗಿ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಗಳು ಮುಂಬೈ ಇಂಡಿಯನ್ಸ್ ತಂಡವನ್ನು 111ರನ್ಗಳಿಗೆ ಆಲೌಟ್ ಮಾಡುವ ಮೂಲಕ 54 ರನ್ಗಳಿಂದ ಜಯ ಸಾಧಿಸಿತು.
ಇದನ್ನು ಓದಿ:IPL 2021: ಮುಂಬೈ ವಿರುದ್ಧ 54 ರನ್ಗಳ ಭರ್ಜರಿ ಜಯ ಸಾಧಿಸಿದ ಆರ್ಸಿಬಿ