ಚೆನ್ನೈ: ತಾನು ಕ್ರಿಕೆಟಿಗನಾಗಬೇಕೆಂಬ ಕನಸು ಬಡತನದಿಂದ ಕಮರಿದರೂ ಮಗ ವಾಷಿಂಗ್ಟನ್ ಸುಂದರ್ ಮೂಲಕ ಅದನ್ನು ನನಸಾಗಿಸಿಕೊಂಡಿರುವ ತಂದೆ ಎಂ ಸುಂದರ್ ಮಗನ ಯಶಸ್ವಿಗೆ ಈಗಾಗಲೇ ತಮ್ಮ ಕೈಲಾದದನ್ನೆಲ್ಲಾ ಮಾಡಿದ್ದಾರೆ. ಅದರಂತೆ ಮಗ ಭಾರತವನ್ನು ಪ್ರತಿನಿಧಿಸಿ ಅದಕ್ಕೆ ಪ್ರತಿಫಲ ಸಹ ತಂದುಕೊಟ್ಟಿದ್ದಾರೆ.
ಇದೀಗ ದೇಶಾದ್ಯಂತ ಕೊರೊನಾ ತಾಂಡವವಾಡುತ್ತಿರುವ ಪರಿಸ್ಥಿತಿಯಲ್ಲಿ ತಮ್ಮಿಂದ ಯಾವುದೇ ಕಾರಣಕ್ಕೂ ಮಗನಿಗೆ ಸೋಂಕು ತಗುಲಬಾರದೆಂದು, ಅವನ ವೃತ್ತಿ ಜೀವನಕ್ಕೆ ತನ್ನಿಂದ ಕಂಟಕವಾಗಬಾರದು ಎಂದು ಸರ್ಕಾರಿ ಅಧಿಕಾರಿಯಾಗಿರುವ ಎಂ ಸುಂದರ್ ಬೇರೆ ಮನೆಯಲ್ಲೇ ವಾಷಿಸುವ ಮೂಲಕ ಮತ್ತೊಂದು ತ್ಯಾಗ ಮಾಡುತ್ತಿದ್ದಾರೆ.
14 ನೇ ಆವೃತ್ತಿಯ ಐಪಿಎಲ್ ಮುಂದೂಡಲ್ಪಟ್ಟ ನಂತರ ವಾಷಿಂಗ್ಟನ್ ಮನೆಗೆ ಮರಳಿದ್ದಾರೆ. ಚೆನ್ನೈನಲ್ಲಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ನಾನು ಮಗ ಮನೆಗೆ ಮರಳುತ್ತಿದ್ದಂತೆ ಮಡದಿ ಮಕ್ಕಳನ್ನು ಬಿಟ್ಟು ಬೇರೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ ಎಂದು ಸುಂದರ್ ತಿಳಿಸಿದ್ದಾರೆ.
ಏಕೆಂದರೆ ಈಗಾಗಲೇ ಬಿಸಿಸಿಐ ಇಂಗ್ಲೆಂಡ್ಗೆ ತೆರಳುವ ಮುನ್ನ ಯಾರಾದರೂ ಕೋವಿಡ್ 19 ಸೋಂಕಿಗೆ ತುತ್ತಾದರೆ ಅವರನ್ನು ಪ್ರವಾಸದಿಂದಲೇ ಹೊರಗಿಡುವುದಾಗಿ ಎಚ್ಚರಿಕೆ ನೀಡಿದೆ. ತಾನು ವಾರಕ್ಕೆ 2-3 ದಿನ ಕೆಲಸಕ್ಕೆ ಹೋಗಬೇಕಿದೆ. ಈ ವೇಳೆ ನನಗೆ ಸೋಂಕು ತಗುಲಿ, ನನ್ನಿಂದ ಮಗನಿಗೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾನು ಮಗನ ವೃತ್ತಿ ಜೀವನಕ್ಕೆ ಮುಳಗಾಗಬಾರದೆಂದು ಆತ ಇಂಗ್ಲೆಂಡ್ಗೆ ಹೋಗುವವರೆಗೆ ಬೇರೆ ಮನಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನೆಟ್ ಬೌಲರ್ ಆಗಿ ಪ್ರವಾಸ ಕೈಗೊಂಡಿದ್ದ ಅವರು, ತಂಡದ ಪ್ರಮುಖ ಬೌಲರ್ಗಳು ಗಾಯಗೊಂಡ ಕಾರಣ ಪದಾರ್ಪಣೆ ಮಾಡುವ ಅವಕಾಶ ಪಡೆದು ಮಿಂಚಿದ್ದರು. ಗಬ್ಬಾದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದರ ಹಿಂದೆ ಇವರ ಪಾತ್ರ ಕೂಡ ಮಹತ್ವದಾಗಿತ್ತು.
ಇದನ್ನು ಓದಿ:ಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂ. ನೀಡಿ ಹೃದಯ ವೈಶಾಲ್ಯತೆ ಮೆರೆದ ಕೊಹ್ಲಿ