ETV Bharat / sports

'ನೀವು ನಮ್ಮೊಂದಿಗಿರಲ್ಲ ಎನ್ನುವುದನ್ನು ಊಹಿಸಿಕೊಳ್ಳಲಾಗುತ್ತಿಲ್ಲ​': ಶೇನ್‌ ವಾರ್ನ್ ಮಕ್ಕಳ ವೇದನೆ - ಶೇನ್ ವಾರ್ನ್​ ಮಗ ಜಾಕ್ಸನ್

ಹೃದಯಾಘಾತದಿಂದ ಥಾಯ್ಲೆಂಡ್​ನ ಕೊಹ್ ಸಮುಯಿ ದ್ವೀಪದ ವಿಲ್ಲಾದಲ್ಲಿ 52 ವರ್ಷದ ವಾರ್ನ್​ ಸಾವನ್ನಪ್ಪಿದ್ದರು. ಈ ಆಘಾತಕಾರಿ ಸುದ್ದಿಯ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮಗ ಜಾಕ್ಸನ್ ಮತ್ತು ಪುತ್ರಿಯರಾದ ಬ್ರೂಕ್ ಮತ್ತು ಸಮ್ಮರ್ ತಂದೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Warne's children release heart-breaking tributes
ಶೇನ್ ವಾರ್ನ್​ ಮಕ್ಕಳಿಂದ ಶ್ರದ್ಧಾಂಜಲಿ
author img

By

Published : Mar 7, 2022, 10:03 PM IST

ಮೆಲ್ಬೋರ್ನ್: ಕಳೆದ ಶುಕ್ರವಾರ ಥಾಯ್ಲೆಂಡ್‌ನಲ್ಲಿ ಹಠಾತ್ ನಿಧನರಾದ ಆಸ್ಟ್ರೇಲಿಯಾ ಲೆಜೆಂಡರಿ ಲೆಗ್ ಸ್ಪಿನ್ನರ್​ ಶೇನ್ ವಾರ್ನ್ ಅವರ ಮೂರು ಮಕ್ಕಳು ತಂದೆಯ ಸಾವಿಗೆ ಮಮ್ಮಲ ಮರುಗಿದ್ದಾರೆ.

ಹೃದಯಾಘಾತದಿಂದ ಥಾಯ್ಲೆಂಡ್​ನ ಕೊಹ್ ಸಮುಯಿ ದ್ವೀಪದ ವಿಲ್ಲಾದಲ್ಲಿ 52 ವರ್ಷದ ವಾರ್ನ್​ ಸಾವನ್ನಪ್ಪಿದ್ದರು. ಈ ಆಘಾತಕಾರಿ ಸುದ್ದಿಯ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಗ ಜಾಕ್ಸನ್ ಮತ್ತು ಪುತ್ರಿಯರಾದ ಬ್ರೂಕ್ ಮತ್ತು ಸಮ್ಮರ್ ತಂದೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದ ರಿಯಾಲಿಟಿ ಶೋ 'ಎಸ್‌ಎಎಸ್: ಹೂ ಡೇರ್ಸ್ ವಿನ್ಸ್'ನಲ್ಲಿ ಕಾಣಿಸಿಕೊಂಡಿದ್ದ ಜಾಕ್ಸನ್, ತನ್ನ ತಂದೆಯೊಂದಿಗೆ ಹೊಂದಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದರು. "ನನ್ನ ಸಹೋದರನಿಗೆ, ನನ್ನ ಆತ್ಮೀಯ ಗೆಳೆಯನಿಗೆ ಮತ್ತು ನನ್ನ ತಂದೆಗೆ ಹೇಳುವುದೇನೆಂದರೆ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಹೃದಯದಲ್ಲಿ ನೀವು ಬಿಟ್ಟುಹೋದ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಪೋಕರ್ ಟೇಬಲ್​ನಲ್ಲಿ ಕುಳಿತುಕೊಳ್ಳುವುದು, ಗಾಲ್ಫ್ ಕೋರ್ಸ್ ಸುತ್ತಲೂ ನಡೆಯುವುದು, ಸೇಂಟ್ಸ್ ಪಂದ್ಯವನ್ನು ನೋಡುವುದು ಮತ್ತು ಪಿಜ್ಜಾ ತಿನ್ನುವುದು ಇನ್ಮುಂದೆ ನನಗೆ ಹಿಂದಿನಂತಿರುವುದಿಲ್ಲ.

ಏನೇ ಆದರೂ ನೀವು ನಾನು ಯಾವಾಗಲೂ ಸಂತೋಷದಿಂದಿರಬೇಕೆಂದು ಬಯಸುತ್ತಿದ್ದಿರಿ ಎಂದು ನನಗೆ ತಿಳಿದಿದೆ, ನೀವೊಬ್ಬ ಅತ್ಯುತ್ತಮ ತಂದೆಯಾಗಿದ್ದೀರಿ, ನಾನು ನೀವು ಬಯಸಿದಂತೆ ಸಂತೋಷವಾಗಿರಲು ಪ್ರಯತ್ನಿಸುತ್ತೇನೆ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಡ್ಯಾಡ್​, ನೀವು ನನ್ನ ಉತ್ತಮ ಸಂಗಾತಿ, ನಾನು ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ. ಆದಷ್ಟು ಬೇಗ ಸಿಗೋಣ" ಎಂದು ಜಾಕ್ಸನ್​ ಮನದ ವೇದನೆ ಹೊರಹಾಕಿದ್ದಾರೆ.

ವಾರ್ನ್ ಅವರ ಹಿರಿಯ ಮಗಳು ಬ್ರೂಕ್ ಮಾತನಾಡಿದ್ದು, ತಂದೆ ಇನ್ನಿಲ್ಲ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. "ಡ್ಯಾಡ್​, ನೀವು ಇನ್ನು ಮುಂದೆ ನಮ್ಮೊಂದಿಗೆ ಇರುವುದಿಲ್ಲ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತು ಅದರಲ್ಲಿ ಅರ್ಥವಿಲ್ಲ ಅನ್ನಿಸುತ್ತಿದೆ. ನಿಮ್ಮನ್ನು ನಮ್ಮಿಂದ ಬೇಗನೆ ತೆಗೆದುಕೊಂಡು ಹೋಗಲಾಗಿದೆ, ಇದು ಸರಿಯಲ್ಲ. ನೀವಿಲ್ಲದ ಜೀವನ ತುಂಬಾ ಕ್ರೂರವಾಗಿರಲಿದೆ. ನಾವು ಒಟ್ಟಿಗೆ ನಗುತ್ತಿದ್ದೆವು ಮತ್ತು ಪರಸ್ಪರ ತಮಾಷೆ ಮಾಡುತ್ತಿದ್ದೆವು ಮತ್ತು ನಾವು ಸಂತೋಷವಾಗಿದ್ದೆವು. ನಾನು ನಮ್ಮ ಕೊನೆಯ ನೆನಪುಗಳನ್ನು ಶಾಶ್ವತವಾಗಿಟ್ಟುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಮುಂದುವರಿಸಿ "ನಾವಿಬ್ಬರು ಅನೇಕ ವಿಧಗಳಲ್ಲಿ ತುಂಬಾ ಹೋಲುತ್ತಿದ್ದೆವು. ನಾನು ನಿಮ್ಮ ಜೀನ್‌ಗಳನ್ನು ಪಡೆದುಕೊಂಡಿದ್ದೇನೆ, ಅದರಿಂದ ನನಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ ಎಂದು ನಾನು ಯಾವಾಗಲೂ ತಮಾಷೆ ಮಾಡುತ್ತಿದ್ದೆ. ಆದರೆ ನಿಮ್ಮನ್ನು ತಂದೆ ಹೇಳಿಕೊಳ್ಳುವುದಕ್ಕೆ ನನಗೆ ಖುಷಿಯಿದೆ ಮತ್ತು ಹೆಮ್ಮೆಯನ್ನಿಸುತ್ತದೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ನಿಮ್ಮನ್ನು ತಂಬಾ ಮಿಸ್​ ಮಾಡಿಕೊಳ್ಳಲಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾರ್ನ್‌ನ ಕಿರಿಯ ಮಗಳು ಸಮ್ಮರ್, "ಅಪ್ಪಾ, ನಾನು ಈಗಾಗಲೇ ನಿನ್ನನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಬಯಸಬಹುದಾದಂಥ ತಂದೆ ನೀವು. ನಮ್ಮ ಸಮಯವನ್ನು ದೋಚಲಾಗಿದೆ. ನನಗೆ ನಿಮ್ಮೊಂದಿಗೆ ಹೆಚ್ಚಿನ ರಜಾದಿನಗಳು ಕಳೆಯಬೇಕು ಎನ್ನಿಸುತ್ತಿದೆ. ನೀವು ಸತ್ತಿಲ್ಲ ಡ್ಯಾಡ್, ನೀವು ಕೇವಲ ಬೇರೆ ಸ್ಥಳಕ್ಕೆ ಹೋಗಿದ್ದೀರಾ, ಅದು ನಮ್ಮ ಹೃದಯದಲ್ಲಿದೆ, ನಾವು ಮತ್ತೆ ಭೇಟಿಯಾಗುವವರೆಗೂ ನಾನು ನಿಮ್ಮನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ" ಎಂದು ತಮ್ಮೊಳಗಿನ ತಂದೆಯ ಜೊತೆಗಿನ ಬಾಂಧವ್ಯವನ್ನು ಬಿಚ್ಚಿಟ್ಟರು.

ಇದನ್ನೂ ಓದಿ:ಮೆಲ್ಬೋರ್ನ್​ ಕ್ರಿಕೆಟ್​​ ಮೈದಾನದಲ್ಲಿ ಶೇನ್​ ವಾರ್ನ್​​ಗೆ ಅಂತಿಮ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.