ETV Bharat / sports

ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!? - Sunrisers Hyderabad David Warner

ಇದೀಗ 8 ವರ್ಷಗಳ ಫ್ರಾಂಚೈಸಿ ಜೊತೆಗಿನ ಸಂಬಂಧ 2021ಕ್ಕೆ ಕೊನೆಯಾಗಲಿದೆ ಎಂದು ಸ್ವತಃ ವಾರ್ನರ್​ ತಿಳಿಸಿದ್ದಾರೆ. ಇದೇ ಕಾರಣದಿಂದ ಟೂರ್ನಿ ಮಧ್ಯೆಯೇ ವಾರ್ನರ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ವಿಲಿಯಮ್ಸನ್​ರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಬೇರೆ ಫ್ರಾಂಚೈಸಿ ತಂಡದ ಪರ ಆಡಲಿದ್ದಾರೆ..

David warner
ಡೇವಿಡ್ ವಾರ್ನರ್​
author img

By

Published : Sep 28, 2021, 3:54 PM IST

ದುಬೈ : 2014ರಿಂದ ಸನ್​ರೈಸರ್ಸ್ ಹೈದರಾಬಾದ್​ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್ ಡೇವಿಡ್​ ವಾರ್ನರ್​ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇನ್ನೆಂದು ತಾವೂ ಫ್ರಾಂಚೈಸಿಯೊಂದಿಗೆ ಮೈದಾನದಲ್ಲಿ ಕಾಣಿಸುವುದಿಲ್ಲ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಖಚಿತ ಪಡಿಸಿದ್ದಾರೆ.

14ನೇ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ವಾರ್ನರ್​​ ಅವರನ್ನು ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ತಂಡದಿಂದ ಹೊರಗಿಡಲಾಗಿತ್ತು. ಅಲ್ಲದೆ ವಾರ್ನರ್​ ಪಂದ್ಯದ ವೇಳೆ ಮೈದಾನದಲ್ಲಿ ಎಲ್ಲೂ ಕಾಣಿಸದಿದ್ದದ್ದೂ ಅಭಿಮಾನಿಗಳಿಗೆ ಆಶ್ಚರ್ಯಗೊಳಿಸಿತ್ತು.

ವಾರ್ನರ್​ ಈ ವರ್ಷದ ಐಪಿಎಲ್​ನಲ್ಲಿ 10 ಪಂದ್ಯಗಳಿಂದ ಕೇವಲ 181 ರನ್​ಗಳಿಸಿದ್ದಾರೆ. ಇದು ಅವರ ಐಪಿಎಲ್​ನಲ್ಲೇ ಅತ್ಯಂತ ಕನಿಷ್ಠ ಮೊತ್ತ. ಹಾಗಾಗಿ, ನಿನ್ನೆಯ ಪಂದ್ಯದಲ್ಲಿ ಅವರನ್ನು ಡ್ರಾಪ್ ಮಾಡಿ ಇಂಗ್ಲೆಂಡ್ ಓಪನರ್​ ಜೇಸನ್ ರಾಯ್ ಅವರನ್ನು ಫ್ರಾಂಚೈಸಿ ಕಣಕ್ಕಿಳಿಸಿತ್ತು. ಈ ಪಂದ್ಯವನ್ನು ಹೈದರಾಬಾದ್​ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು.

ವಾರ್ನರ್​ ಮೈದಾನದಲ್ಲಿ ಕಾಣದ್ದಕ್ಕೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಆಸೀಸ್​ ಸ್ಟಾರ್, ದುರಾದೃಷ್ಟವಶಾತ್​ ತಾನು ಇನ್ಮುಂದೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ದಯವಿಟ್ಟು ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸಿ ಎಂದು ವಾರ್ನರ್​ ಪ್ರತಿಕ್ರಿಯಿಸಿದ್ದಾರೆ.

Warner says won't be at stadium again
ಡೇವಿಡ್​ ವಾರ್ನರ್ ಇನ್​ಸ್ಟಾಗ್ರಾಮ್ ಪೋಸ್ಟ್​

2014ರಿಂದಲೂ ಫ್ರಾಂಚೈಸಿ ಪರ ಆಡುತ್ತಿರುವ ಅವರು, 2016ರಲ್ಲಿ ಏಕಾಂಗಿ ಪ್ರದರ್ಶನ ತೋರಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. 2018ರಲ್ಲಿ ಬಾಲ್ ಟ್ಯಾಂಪರಿಂಗ್​ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿ, 2019ರಲ್ಲಿ ಕಮ್ ಬ್ಯಾಕ್ ಮಾಡಿದ್ದರು. ಮತ್ತೆ 2020ರಲ್ಲಿ ತಂಡದ ನಾಯಕತ್ವಕ್ಕೆ ಮರಳಿದ್ದರು.

ಇದೀಗ 8 ವರ್ಷಗಳ ಫ್ರಾಂಚೈಸಿ ಜೊತೆಗಿನ ಸಂಬಂಧ 2021ಕ್ಕೆ ಕೊನೆಯಾಗಲಿದೆ ಎಂದು ಸ್ವತಃ ವಾರ್ನರ್​ ತಿಳಿಸಿದ್ದಾರೆ. ಇದೇ ಕಾರಣದಿಂದ ಟೂರ್ನಿ ಮಧ್ಯೆಯೇ ವಾರ್ನರ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ವಿಲಿಯಮ್ಸನ್​ರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಬೇರೆ ಫ್ರಾಂಚೈಸಿ ತಂಡದ ಪರ ಆಡಲಿದ್ದಾರೆ.

ಇದನ್ನು ಓದಿ:ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ: ತಲೆದಂಡಕ್ಕೆ ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.