ETV Bharat / sports

ಪಾಕ್ ವಿರುದ್ಧ ಆಸೀಸ್​ 3-0 ಕ್ಲೀನ್​ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್​ಗೆ ವಾರ್ನರ್​ ವಿದಾಯ

ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿ ಜಯಿಸಿ, ನಿವೃತ್ತಿ ಘೋಷಿಸಿದ ಡೇವಿಡ್​ ವಾರ್ನರ್​ಗೆ ಭರ್ಜರಿ ಉಡುಗೊರೆ ನೀಡಿದೆ.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​
author img

By ETV Bharat Karnataka Team

Published : Jan 6, 2024, 10:55 AM IST

ಸಿಡ್ನಿ (ಆಸ್ಟ್ರೇಲಿಯಾ) : ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿದ ಡೇವಿಡ್​ ವಾರ್ನರ್​ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ಟೆಸ್ಟ್​​ ಕ್ರಿಕೆಟ್​ ವೃತ್ತಿ ಜೀವನದ ಇನ್ನಿಂಗ್ಸ್​ ಮುಗಿಸಿದರು. ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ವಾರ್ನರ್​ ಅರ್ಧಶತಕ ಬಾರಿಸಿದರು. ಇದರೊಂದಿಗೆ ಆಸೀಸ್​​ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿತು.

ನಾಲ್ಕನೇ ದಿನದಾಟದಲ್ಲಿ ಗೆಲುವಿಗೆ 130 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ, ವಾರ್ನರ್​ ಮತ್ತು ಲಬುಶೇನ್​ ಅವರ ಅರ್ಧಶತಕ ಬಲದಿಂದ 2 ವಿಕೆಟ್​ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಆರಂಭಿಕನಾಗಿ ವಾರ್ನರ್​ ಮೈದಾನಕ್ಕಿಳಿದಾಗ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದರು. ಕೊನೆಯ ಇನಿಂಗ್ಸ್​ನಲ್ಲಿ ಅಭಿಮಾನಿಗಳನ್ನು ನಿರಾಸೆ ಮಾಡದ ವಾರ್ನರ್​ ಲೀಲಾಜಾಲವಾಗಿ ಬ್ಯಾಟ್​ ಬೀಸಿ 75 ಎಸೆತಗಳಲ್ಲಿ 57 ರನ್​ ಗಳಿಸಿದರು.

  • An incredible day as we farewelled a legend of our sport and secured another home series.

    Thanks for making it special, Sydney 💖 pic.twitter.com/HTdwluY4vo

    — Cricket Australia (@CricketAus) January 6, 2024 " class="align-text-top noRightClick twitterSection" data=" ">

ಗೆಲುವಿಗೆ 11 ರನ್​ ಅಗತ್ಯವಿದ್ದಾಗ ಆಫ್‌ ಸ್ಪಿನ್ನರ್ ಸಾಜಿದ್ ಖಾನ್‌ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದು ಔಟಾದರು. ಈ ಮೂಲಕ ವಾರ್ನರ್​ ಟೆಸ್ಟ್​ ಕ್ರಿಕೆಟ್​ಗೂ ತೆರೆಬಿತ್ತು. ಪಾಕ್​ನ ಕ್ರಿಕೆಟಿಗರು ಕೈಕುಲುಕಿ ಶುಭಾಶಯ ಕೋರಿದರು. ಬಳಿಕ ವಾರ್ನರ್​ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳತ್ತ ಬ್ಯಾಟ್​, ಹೆಲ್ಮೆಟ್​ ಅನ್ನು ಎತ್ತುವ ಮೂಲಕ ಧನ್ಯವಾದ ಹೇಳಿದರು. ಈ ವೇಳೆ ಕ್ರೀಡಾಂಗಣದಲ್ಲಿ ಅಬ್ಬರದ ಚಪ್ಪಾಳೆ ಸದ್ದು ಕೇಳಿಬಂತು.

ಐದನೇ ಅತ್ಯಧಿಕ ರನ್​ ಸರದಾರ: ಡೇವಿಡ್​ ವಾರ್ನರ್​ ಆಸ್ಟ್ರೇಲಿಯಾ ಪರವಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಐದನೇ ಆಟಗಾರ. ಅವರು 112 ಟೆಸ್ಟ್​ ಪಂದ್ಯಗಳಲ್ಲಿ 8786 ರನ್​ ಗಳಿಸಿದ್ದಾರೆ. ಇದರಲ್ಲಿ 26 ಶತಕ, 3 ದ್ವಿಶತಕ, 37 ಅರ್ಧಶತಕಗಳಿವೆ. ಕೊನೆಯ ಟೆಸ್ಟ್​ ನಡುವೆಯೇ ಆಸೀಸ್​ ಬ್ಯಾಟರ್​ ಏಕದಿನಕ್ಕೂ ಗುಡ್​ಬೈ ಹೇಳಿದ್ದಾರೆ. ಅಗತ್ಯವಿದ್ದಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡುವುದಾಗಿ ಹೇಳಿಕೆ ನೀಡಿದ್ದಾರೆ.

ಕ್ಲೀನ್​ಸ್ವೀಪ್​ ಸಾಧನೆ: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ 3-0ದಿಂದ ಕ್ಲೀನ್​ಸ್ವೀಪ್​ ಮಾಡಿತು. ಕೊನೆಯ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ 313 ರನ್​ ಗಳಿಸಿದರೆ, ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ 115 ರನ್​ಗೆ ಆಲೌಟ್​ ಆಯಿತು. ಇತ್ತ ಆತಿಥೇಯ ತಂಡ ಮೊದಲ ಇನಿಂಗ್ಸ್​ನಲ್ಲಿ 299 ರನ್​ ಗಳಿಸಿ 14 ರನ್​ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವಿಗೆ ಬೇಕಿದ್ದ 130 ರನ್​ ಗಳಿಸಿತು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 360 ರನ್‌, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 79 ರನ್‌ಗಳಿಂದ ಕಾಂಗರೂ ಪಡೆ ಜಯ ಸಾಧಿಸಿತ್ತು.

ಇದನ್ನೂ ಓದಿ: ಟಿ20 ಸರಣಿ: ಭಾರತೀಯ ವನಿತೆಯರ ಆಲ್​ರೌಂಡರ್​ ಆಟ - ಆಸೀಸ್​ ವಿರುದ್ಧ ಶುಭಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.