ವಿಶ್ವಕಪ್ ಕಳೆದುಕೊಂಡು ಬೇಸರದಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ ಕ್ಷಮೆ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವಕಪ್ ಯಶಸ್ಸಿಗಾಗಿ ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಾರ್ನರ್, 'ನಾನು ಕ್ಷಮೆ ಯಾಚಿಸುತ್ತೇನೆ. ಫೈನಲ್ ಉತ್ತಮವಾಗಿತ್ತು. ಕ್ರೀಡಾಂಗಣದ ವಾತಾವರಣ ಅದ್ಭುತವಾಗಿತ್ತು. ಭಾರತ ನಿಜವಾಗಿಯೂ ಗಂಭೀರವಾಗಿ ಟೂರ್ನಿ ನಡೆಸಿತು. ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
-
I apologise, it was such a great game and the atmosphere was incredible. India really put on a serious event. Thank you all https://t.co/5XUgHgop6b
— David Warner (@davidwarner31) November 20, 2023 " class="align-text-top noRightClick twitterSection" data="
">I apologise, it was such a great game and the atmosphere was incredible. India really put on a serious event. Thank you all https://t.co/5XUgHgop6b
— David Warner (@davidwarner31) November 20, 2023I apologise, it was such a great game and the atmosphere was incredible. India really put on a serious event. Thank you all https://t.co/5XUgHgop6b
— David Warner (@davidwarner31) November 20, 2023
ಭಾನುವಾರ (ನ.19) ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೆದುರು ವಿಜಯ ಸಾಧಿಸಿದ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಎಲ್ಲಾ ಪಂದ್ಯಗಳನ್ನೂ ಗೆದ್ದುಕೊಂಡು ಬಂದಿದ್ದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇತ್ತ ಕಾಂಗರೂ ಟೀಂ ಮೊದಲೆರಡು ಪಂದ್ಯಗಳನ್ನು ಸೋತು ಲೀಗ್ ಹಂತದಲ್ಲೇ ಹೊರಬೀಳುವ ಆತಂಕದಲ್ಲಿತ್ತು. ಬಳಿಕ ಆಸ್ಟ್ರೇಲಿಯಾ ಆಟಗಾರರು ಸಂಘಟನಾತ್ಮಕ ಆಟವಾಡಿ ಅಂತಿಮವಾಗಿ ಕಪ್ ಎತ್ತಿ ಹಿಡಿದು ಸಂಭ್ರಮಿದರು.
ಸೋಲಿನ ಕಹಿ ಘಟನೆಯಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಪಂದ್ಯದ ಬಳಿಕ ಮೈದಾನದಲ್ಲಿ ಆಟಗಾರರು ಅಳುವುದನ್ನು ನೋಡಿ ಅತ್ತವರೆಷ್ಟೋ? ಇಂತಹ ಸಂದರ್ಭದಲ್ಲಿ ವಾರ್ನರ್ ಮಾಡಿರುವ ಒಂದು ಪೋಸ್ಟ್ ಅಭಿಮಾನಿಗಳಿಗೆ ಸಂತಸ ತಂದಿದೆ. ಇದರ ಹೊರತಾಗಿಯೂ ಭಾರತದೊಂದಿಗೆ ವಾರ್ನರ್ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.
ವಾರ್ನರ್ ತನ್ನ ಎರಡನೇ ಪುತ್ರಿಗೆ 'ಇಂಡಿ ರೇ' ಎಂಬ ಹೆಸರಿಟ್ಟಿದ್ದಾರೆ. ಇದು ಭಾರತದ ಮೇಲಿನ ಪ್ರೀತಿಗಾಗಿ ಎಂಬುದನ್ನು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಅಲ್ಲದೆ, ಐಪಿಎಲ್ನಲ್ಲೂ ಆಕ್ರಮಣಕಾರಿ ಆಟವಾಡಿರುವ ವಾರ್ನರ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ಆಟಗಾರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ.
ಇನ್ನು ತೆಲುಗಿನ ಸೂಪರ್ ಹಿಟ್ ಸಿನಿಮಾ 'ಪುಷ್ಪ'ದ ಹಾಡು ಮತ್ತು ಡೈಲಾಗ್ಗಳಿಗೆ ವಾರ್ನರ್ ತಮ್ಮ ಮಕ್ಕಳೊಂದಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದೊಡ್ಡ ಮಟ್ಟದಲ್ಲಿ ಭಾರತೀಯರ ಮನ ಗೆದ್ದಿದ್ದರು. ಪಾಕಿಸ್ತಾನದ ಮೇಲೆ ಶತಕ ಹೊಡೆದ ವೇಳೆಯೂ ಕೂಡ ಪುಷ್ಪ ಚಿತ್ರದಲ್ಲಿ ಬರುವ ಮಾಸ್ ಡೈಲಾಗ್ ವೊಂದರ ಆ್ಯಕ್ಷನ್ ಮಾಡಿ ಸಂಭ್ರಮಾಚರಣೆ ಮಾಡಿದ್ದರು. ಈ ನಡೆಗೆ ನೆಟ್ಟಿಗರೊಬ್ಬರು ವಾರ್ನರ್ ಅವರಿಗೆ ಆಧಾರ್ ಕಾರ್ಡ್ ಕೊಟ್ಟು ಇಂಡಿಯಾದಲ್ಲಿ ಉಳಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ: ವಿರಾಟ್ ವಿಕೆಟ್ ಪಡೆದಾಗ ಲಕ್ಷಾಂತರ ಅಭಿಮಾನಿಗಳ ಮೌನ ಬಹಳ ತೃಪ್ತಿ ನೀಡಿತು: ಆಸ್ಟ್ರೇಲಿಯಾ ನಾಯಕ ಕಮಿನ್ಸ್