ಲಖನೌ (ಉತ್ತರ ಪ್ರದೇಶ): ಸದ್ಯ ನನ್ನ ಗುರಿ 2023ರ ಏಕದಿನ ವಿಶ್ವಕಪ್ ಆಗಿದ್ದು, ನನ್ನನ್ನು ನಾನು ಫಿಟ್ ಆಗಿಟ್ಟುಕೊಳ್ಳಲು ಬಯಸುತ್ತೇನೆ ಎಂದು ಟೀಂ ಇಂಡಿಯಾದ ಎಡಗೈ ಓಪನರ್ ಶಿಖರ್ ಧವನ್ ಹೇಳಿದ್ದಾರೆ.
ನಾಳೆ ಉತ್ತರ ಪ್ರದೇಶದ ಲಖನೌದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಏಕದಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಈ ಮೊದಲ ಪಂದ್ಯಕ್ಕೂ ಮುನ್ನ ದಿನ ಮಾತನಾಡಿರುವ ಧವನ್, ನಾನು ಸುಂದರವಾದ ವೃತ್ತಿಜೀವನವನ್ನು ಹೊಂದಿದ್ದೇನೆ. ಈಗ ನನ್ನ ಮೇಲೆ ಹೊಸ ಜವಾಬ್ದಾರಿ ಇದೆ.
ಆದರೆ, ನಾನು ಸವಾಲುಗಳಲ್ಲಿ ಅವಕಾಶವನ್ನು ನೋಡುತ್ತೇನೆ ಮತ್ತು ನಾನು ಅದನ್ನು ಆನಂದಿಸುತ್ತೇನೆ ಎಂದು ತಿಳಿದರು. ಜೊತೆಗೆ ಸಾಧ್ಯವಾದಾಗಲೆಲ್ಲಾ ನಾನು ನನ್ನ ಜ್ಞಾನವನ್ನು ಯುವಕರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಧವನ್ ಹೇಳಿದರು.
36ನೇ ವಯಸ್ಸಿನ ಶಿಖರ್ ಧವನ್, 34 ಟೆಸ್ಟ್, 158 ಏಕದಿನ ಮತ್ತು 68 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 2,315, 6,647 ಮತ್ತು 1759 ರನ್ ಗಳಿಸಿದ್ದಾರೆ. ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧ ಏಕದಿನ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಗುರುವಾರ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಜವಾಬ್ದಾರಿಯನ್ನೂ ಧವನ್ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ಟಿ 20 ವಿಶ್ವಕಪ್ಗೆ ಬುಮ್ರಾ ಬದಲಿಗೆ ಶಮಿ : ರಾಹುಲ್ ದ್ರಾವಿಡ್