ETV Bharat / sports

ಟಿ20ಗೆ ಬ್ಯಾಟ್​ ಬಾಲ್​ ಮಾಡುವ ಸ್ಪೆಷಲಿಸ್ಟ್​ಗಳು ತಂಡಕ್ಕೆ ಅಗತ್ಯ: ವಿವಿಎಸ್​ ಲಕ್ಷ್ಮಣ್​ - ಮಾಜಿ ಲೆಜೆಂಡರಿ ಆಟಗಾರ ವಿವಿಎಸ್​ ಲಕ್ಷ್ಮಣ್

ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅನುಪಸ್ಥಿತಿಯಲ್ಲಿ ತಂಡದ ಮಾರ್ಗದರ್ಶಕರಾಗಿ ನ್ಯೂಜಿಲ್ಯಾಂಡ್​ ನೆಲದಲ್ಲಿರುವ ವಿವಿಎಸ್​ ಲಕ್ಷ್ಮಣ್​ ಟಿ20 ತಂಡಕ್ಕೆ ಬೇಕಿರುವ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.

VVS Laxman on India T20 team
ವಿವಿಎಸ್​ ಲಕ್ಷ್ಮಣ್​
author img

By

Published : Nov 17, 2022, 3:11 PM IST

ವೆಲ್ಲಿಂಗ್ಟನ್: ವಿಶ್ವಕಪ್ ವೈಫಲ್ಯದ ಬಳಿಕ ತಂಡದ ಸುಧಾರಣೆಗೆ ಎಲ್ಲೆಡೆ ಆಗ್ರಹ ಕೇಳಿಬಂದಿದ್ದು, ಮಾಜಿ ಲೆಜೆಂಡರಿ ಆಟಗಾರ ವಿವಿಎಸ್​ ಲಕ್ಷ್ಮಣ್​ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ಹಿರಿಯರ ಅನುಪಸ್ಥಿತಿಯಲ್ಲಿ ನಾಳೆಯಿಂದ ಶುರುವಾಗುವ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿ ಯುವಕರ ಸತ್ವ ಪರೀಕ್ಷೆ ನಡೆಯಲಿದೆ. ಮುಂದಿನ ಟಿ 20 ವಿಶ್ವಕಪ್​ಗೆ ಯುವಪಡೆ ಕಟ್ಟಬೇಕಿದೆ ಎಂದು ಹೇಳಿದ್ದಾರೆ.

ವೈಟ್​ಬಾಲ್​ ಆಟಕ್ಕೆ ಬಲಿಷ್ಠ ತಂಡದ ಅಗತ್ಯವಿದೆ. ವಿಶ್ವ ಚಾಂಪಿಯನ್​ ಆದ ಇಂಗ್ಲೆಂಡ್​ ಇದಕ್ಕೆ ದೊಡ್ಡ ಉದಾಹರಣೆ. ತಂಡದಲ್ಲಿ ಆಲ್​ರೌಂಡರ್​ಗಳು ಸೇರಿ 7 ಆಟಗಾರರು ಬೌಲ್​ ಮಾಡುವ ಶಕ್ತಿ ಹೊಂದಿದ್ದಾರೆ. ಇದು ತಂಡ ಕಟ್ಟುವ ರೀತಿ. ಮುಂದಿನ ವಿಶ್ವಕಪ್​ಗೆ ಭಾರತ ತಂಡ ಇದೇ ಮಾದರಿಯಲ್ಲಿ ಸಿದ್ಧವಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್​ ತಂಡ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನದ ಒತ್ತಡ ನಿಭಾಯಿಸಿದ ರೀತಿ ಶ್ಲಾಘನೀಯ. ಇದು ಚಾಂಪಿಯನ್​ ಆಗುವ ತಂಡದ ಲಕ್ಷಣ. ಭಾರತ ತಂಡ ಹೆಚ್ಚಿನ ಟಿ20 ಸ್ಪೆಷಲಿಸ್ಟ್​ಗಳನ್ನು ಹೊಂದಬೇಕಿದೆ. ನಮ್ಮಲ್ಲೂ ಬ್ಯಾಟ್​, ಬೌಲ್​ ಮಾಡುವ ಸಾಮರ್ಥ್ಯದ ಆಟಗಾರರಿದ್ದಾರೆ. ಅಂಥವರಿಗೆ ಹೆಚ್ಚಿನ ಅವಕಾಶ ನೀಡಿ ಸಮರ್ಥ ಆಟಗಾರರನ್ನಾಗಿ ರೂಪಿಸಬೇಕಿದೆ ಎಂದು ಲಕ್ಷ್ಮಣ್​ ಹೇಳಿದ್ದಾರೆ.

ಬದಲಾವಣೆಯ ಗುಂಡಿ ಅದುಮಿ: ಶುರುವಾಗಲಿರುವ ಕಿವೀಸ್​ ಸರಣಿಯಿಂದಲೇ ತಂಡದ ಬದಲಾವಣೆ ಆರಂಭವಾಗಲಿದೆ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ಅಶ್ವಿನ್​, ದಿನೇಶ್​ ಕಾರ್ತಿಕ್​ರ ಸ್ಥಾನವನ್ನು ಯುವಕರು ತುಂಬಬೇಕಿದೆ. ಬಲಿಷ್ಠ ತಂಡ ಕಟ್ಟುವ ಕೆಲಸ ಈ ಸರಣಿಯಿಂದಲೇ ಶುರುವಾಗಲಿ ಎಂದರು.

ಹಾರ್ದಿಕ್​ ಪಾಂಡ್ಯ ಮುಂದಿನ ನಾಯಕ: ತಂಡದ ಸದ್ಯದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಭವಿಷ್ಯದ ಟಿ20 ನಾಯಕರಾಗಲಿರುವ ಸೂಚನೆ ನೀಡಿದ್ದಾರೆ. ಟಿ20 ಕ್ರಿಕೆಟ್​ಗೆ ಸಾಕಷ್ಟು ಸ್ವತಂತ್ರವಾಗಿ ಬ್ಯಾಟ್​ ಬೀಸುವ, ಯೋಚಿಸುವ ಅಗತ್ಯವಿದೆ. ಇದನ್ನು ಪಾಂಡ್ಯ ತೋರಿಸಿಕೊಟ್ಟಿದ್ದಾರೆ. ನಿರ್ಭಯವಾಗಿ ಆಡುವ ಛಾತಿ ಅವರಲ್ಲಿದೆ. ಇದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅದೇ ಆತನ ಶಕ್ತಿಯಾಗಿದೆ. ಪರಿಸ್ಥಿತಿಗೆ ತಕ್ಕಂತೆ ಆಟವಾಡುವುದು ಟಿ20 ಕ್ರಿಕೆಟ್​ಗೆ ಬೇಕಿದೆ ಎಂದು ಲಕ್ಷ್ಮಣ್​ ಹೇಳಿದರು.

ಐರ್ಲೆಂಡ್​ ಸರಣಿಯಲ್ಲಿ ಹಾರ್ದಿಕ್​ ಜೊತೆ ತಂಡ ಹಂಚಿಕೊಂಡಿದ್ದೇನೆ. ತಂತ್ರ ರೂಪಿಸುವ ಅಸಾಧಾರಣ ಮನಸ್ಥಿತಿ ಆತ ಹೊಂದಿದ್ದಾನೆ. ಒತ್ತಡ ನಿಭಾಯಿಸುವ ಜೊತೆಗೆ ಸಿಡಿಯುವ ತಂತ್ರ ಅಗತ್ಯ. ಹಾರ್ದಿಕ್​ ಪಾಂಡ್ಯ ಮುಂದಿನ ನಾಯಕನಾಗಿ ಮುಂದುವರಿಯುವ ಎಲ್ಲ ಸಾಮರ್ಥ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಓದಿ: ಸಮುದ್ರ ತೀರದಲ್ಲಿ ಸಿಕ್ಸ್ ಪ್ಯಾಕ್ ದೇಹದೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.