ETV Bharat / sports

ವಿವಿಎಸ್ ಲಕ್ಷ್ಮಣ್ ಭಾರತದ ಮುಂದಿನ ಕೋಚ್: ಈ ವರ್ಷ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯ

ಈ ವರ್ಷ ರಾಹುಲ್ ದ್ರಾವಿಡ್ ಅವರ ಕೋಚ್​ ಒಪ್ಪಂದದ ಅವಧಿ ಮುಗಿಯಲಿದೆ - ರಾಹುಲ್​ ದ್ರಾವಿಡ್​ ಜಾಗಕ್ಕೆ ವಿವಿಎಸ್​ ಲಕ್ಷ್ಮಣ್​ ನೇಮಕ ಸಾಧ್ಯತೆ - ರಾಹುಲ್​ ದ್ರಾವಿಡ್​ ಕೋಚಿಂಗ್​ನಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹಿನ್ನಡೆ.

VVS Laxman may be next Indian coach after Rahul Dravid
ವಿವಿಎಸ್ ಲಕ್ಷ್ಮಣ್ ಭಾರತದ ಮುಂದಿನ ಕೋಚ್
author img

By

Published : Jan 3, 2023, 10:51 PM IST

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯೊಂದಿಗಿನ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಗಿದ ನಂತರ ವಿವಿಎಸ್ ಲಕ್ಷ್ಮಣ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ. 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾ ವಿಶ್ವಕಪ್ ವಿಜೇತರಾಗದಿದ್ದರೆ, ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಗಿದ ತಕ್ಷಣ ವಿವಿಎಸ್ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ತರಲಾಗುವುದು ಎಂದು ಹೇಳಲಾಗುತ್ತಿದೆ. ವಿವಿಎಸ್ ಲಕ್ಷ್ಮಣ್ ಅವರು ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಅರೆಕಾಲಿಕ ಕೋಚಿಂಗ್ ಮಾಡಿದ್ದಾರೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದ್ರಾವಿಡ್​ಗೆ ನೆಗೆಟಿವ್​ ಆಗುವ ಅಂಶಗಳು: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆದ ನಂತರ ದೊಡ್ಡ ದೊಡ್ಡ ಸ್ಪರ್ಧೆಗಳಲ್ಲಿ ತಂಡ ಸೋತಿದೆ ಎಂಬ ಅಭುಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ನ ನಂತರ ಕೋಚ್​ ಹುದ್ದೆ ಮುಂದುವರೆಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಲಿದೆ. ಟೀ ಇಂಡಿಯಾ ಟಿ 20 ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ಸೋಲನುಭವಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಸೋಲನುಭವಿಸಿತ್ತು. ಅಲ್ಲದೇ 2022 ಟಿ 20 ಏಷ್ಯಾ ಕಪ್‌ನ ಫೈನಲ್ ತಲುಪುವಲ್ಲೂ ಎಡವಿತ್ತು. ಇದೆಲ್ಲವೂ ದ್ರಾವಿಡ್​ಗೆ ನೆಗೆಟಿವ್​ ಅಂಶಗಳಾಗಿವೆ.

ಪುರುಷರ ತಂಡದ ಮುಖ್ಯ ಕೋಚ್ ಆಗಿ ವಿಸ್ತರಣೆಗೆ ಪರಿಗಣಿಸದಿರಲು ದ್ರಾವಿಡ್ ಈಗಾಗಲೇ ಯೋಚಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ತಿಳಿಸಿವೆ. ಟೀಂ ಇಂಡಿಯಾ ವಿಶ್ವಕಪ್ ವಿಜೇತರಾದರೆ, ಬಹುಶಃ ಈ ಯೋಜನೆಯನ್ನು ಮರುಪರಿಶೀಲಿಸಬಹುದು. ಇಲ್ಲದಿದ್ದರೆ ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಮುಂದಿನ ಮುಖ್ಯ ಕೋಚ್ ಆಗಿ ನೇಮಕ ಮಾಡಬಹುದು.

ಲಕ್ಷ್ಮಣ್​ ಪರಿಗಣನೆಗೆ ಕಾರಣ: ದ್ರಾವಿಡ್ ಅನುಪಸ್ಥಿತಿಯಲ್ಲಿ 48 ವರ್ಷದ ಲಕ್ಷ್ಮಣ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಅವರು ಐರ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಮತ್ತು ಜೂನ್ 2022 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕಾಗಿ ತಂಡದೊಂದಿಗೆ ಇದ್ದರು. ದ್ರಾವಿಡ್ ಕರೋನಾ ಸೋಂಕಿಗೆ ಒಳಗಾದಾಗ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 2022 ರ ಟಿ 20 ಏಷ್ಯಾ ಕಪ್‌ನ ಭಾರತೀಯ ತಂಡದೊಂದಿಗೆ ಇದ್ದರು. ಇದಾದ ಕೆಲವೇ ದಿನಗಳಲ್ಲಿ, ಅವರು ತಮ್ಮ ವೈಟ್-ಬಾಲ್ ಪ್ರವಾಸಕ್ಕಾಗಿ ತಂಡದ ಮುಖ್ಯ ತರಬೇತುದಾರರಾಗಿ ನ್ಯೂಜಿಲೆಂಡ್‌ಗೆ ಪ್ರಯಾಣಿಸಿದರು.

ಲಕ್ಷ್ಮಣ್​ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯವ ಆಟಗಾರರಿಗೆ ಟ್ರೈನಿಂಗ್​ ನೀಡುತ್ತಿದ್ದಾರೆ. ಅಲ್ಲದೇ 2022ರ ವಿಶ್ವಕಪ್‌ನ ಭಾರತ ಅಂಡರ್-19 ತಂಡದೊಂದಿಗೆ ಕೊಚ್​ ಆಗಿ ಪ್ರಯಾಣ ಬೆಳೆಸಿದ್ದರು. ತಂಡದಲ್ಲಿ ಕೋಚಿಂಗ್ ಬದಲಾವಣೆಯ ಬಗ್ಗೆ ಈ ವರೆಗೆ ಯಾವುದೇ ಚಿಂತನೆ ನಡೆದಿಲ್ಲ. ಸದ್ಯಕ್ಕೆ ಯಾವುದೇ ಅಗತ್ಯತೆ ಇಲ್ಲದಿರುವುದರಿಂದ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ 2019ರಲ್ಲಿ ವಿಶ್ವಕಪ್​ನಿಂದ ಭಾರತ ಹೊರಗುಳಿದಾಗ ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಅವರನ್ನು ಕೈಬಿಡುವ ಬಗ್ಗೆ ಚಿಂತಿಸಲಾಗಿತ್ತು. ಈ ಬಾರಿ ಏಕದಿನ ವಿಶ್ವಕಪ್​ ಭಾರತದಲ್ಲೇ ಆಯೋಜನೆ ಆಗುತ್ತಿರುವ ಹಿನ್ನೆಲೆ ತವರಿನಲ್ಲೇ ಹೆಚ್ಚು ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ. ಏಷ್ಯಾಕಪ್​ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದೆ. ಏಷ್ಯಾ ಕಪ್​ ಕೂಡ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ, ಪಿಚ್​ಗಳು ಒಂದೇ ರೀತಿ ವರ್ತಿಸುವ ಕಾರಣ ಅದು ಕೂಡ ಏಕದಿನ ವಿಶ್ವಕಪ್​ಗೆ ಸಹಕಾರಿಯಾಗಲಿದೆ.

ಇದನ್ನೂ ಓದಿ:ದೆಹಲಿ ಕ್ಯಾಪಿಟಲ್ಸ್‌ ಸೇರಲಿದ್ದಾರಾ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.