ಕ್ರಿಕೆಟ್ನಲ್ಲಿ ನಿಯಮಗಳನ್ನು ಅದೆಷ್ಟೇ ನಾಜೂಕಾಗಿ ರೂಪಿಸಿದ್ದರೂ, ಮಹತ್ವದ ಪಂದ್ಯಗಳಲ್ಲಿ ಅವು ದೊಡ್ಡ ವಿವಾದವನ್ನೇ ಸೃಷ್ಟಿಸುತ್ತವೆ. ಸಾಗುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೂಡ ಇಂಥದ್ದೇ ಒಂದು ಸೂಕ್ಷ್ಮ ನಿಯಮ ಚರ್ಚೆಗೀಡಾಗಿದೆ. ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಔಟಾಗಿರುವುದು ಕ್ರಿಕೆಟ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಇದನ್ನು ಹಿರಿಯ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಾಸೀಂ ಜಾಫರ್ ಸೇರಿದಂತೆ ಹಲವರು ಟ್ರೋಲ್ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಟ್ರೋಲ್ ಡಿಚ್ಚಿ: ಭಾರತದ ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್ ಕ್ರೀಸ್ನಲ್ಲಿದ್ದಾಗ ಬೌಲರ್ಗಳನ್ನು ಹೇಗೆ ಬೆಂಡೆತ್ತುತ್ತಿದ್ದರೋ, ನಿವೃತ್ತಿಯಾದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ವಿವಾದಗಳುಂಟಾದರೆ ಟ್ರೋಲ್ ಮಾಡಿ ಡಿಚ್ಚಿ ಕೊಡೋದು ಪಕ್ಕಾ. ಈಗ ಶುಭಮನ್ ಗಿಲ್ ಔಟಾಗಿದ್ದನ್ನೂ ತಮ್ಮದೇ ರೀತಿಯಲ್ಲಿ ಅಪಹಾಸ್ಯ ಮಾಡಿರುವ ವೀರೂ, ಅಂಪೈರ್ ರಿಚರ್ಡ್ ಕೆಟಲ್ಬರೋ ನಿರ್ಣಯವನ್ನು ಪ್ರಶ್ನಿಸಿದ್ದಾರೆ.
ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಿ ಕಣ್ಣಾಮುಚ್ಚಾಲೆ ಆಡುವ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಶುಭಮನ್ ಗಿಲ್ ಬಗ್ಗೆ ಮೂರನೇ ಅಂಪೈರ್ಗೆ ಸಂದೇಹಗಳಿದ್ದರೆ, ಸೂಕ್ತ ಆಧಾರಗಳು ಇಲ್ಲದಾಗ ಅದು ನಾಟ್ಔಟ್ ಆಗಬೇಕಿತ್ತು ಎಂದು ಅಭಿಪ್ರಾಯಿಸಿ ಟ್ವೀಟಿಸಿದ್ದಾರೆ.
-
Third umpire watching the replay before pressing out 🤦 #WTCFinal pic.twitter.com/ZTFeGsihpC
— Wasim Jaffer (@WasimJaffer14) June 10, 2023 " class="align-text-top noRightClick twitterSection" data="
">Third umpire watching the replay before pressing out 🤦 #WTCFinal pic.twitter.com/ZTFeGsihpC
— Wasim Jaffer (@WasimJaffer14) June 10, 2023Third umpire watching the replay before pressing out 🤦 #WTCFinal pic.twitter.com/ZTFeGsihpC
— Wasim Jaffer (@WasimJaffer14) June 10, 2023
ಜಾಫರ್ ವ್ಯಂಗ್ಯ ಟೀಕೆ: ಭಾರತದ ಇನ್ನೊಬ್ಬ ಹಿರಿಯ ಆಟಗಾರ ವಾಸೀಂ ಜಾಫರ್ ಕೂಡ ವ್ಯಂಗ್ಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಗುರಿ ನೋಡುವ ಕಣ್ಣನ್ನು ಮುಚ್ಚಿ, ಇನ್ನೊಂದು ಕಣ್ಣನ್ನು ತೆರೆದಿರುವ ಮಹಿಳಾ ಶೂಟರ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ, ನೋಡಬೇಕಾದ ಕಣ್ಣನ್ನೇ ಮುಚ್ಚಿದರೆ ಗುರಿ ಹೇಗೆ ಕಾಣುತ್ತದೆ ಎಂಬುದು ಇದರ ಅರ್ಥವಾಗಿದೆ.
ಮೂರನೇ ಅಂಪೈರ್ ಔಟ್ ದೃಶ್ಯಗಳನ್ನು ಕಣ್ಣು ಮುಚ್ಚಿಕೊಂಡು ನೋಡಿದ್ದಾರೆ ಎಂದು ಹೇಳುವ ಮಾದರಿಯಲ್ಲಿ ಅಪಹಾಸ್ಯ ಮಾಡಿದ್ದಾರೆ. ಅಲ್ಲದೇ, "ಮೂರನೇ ಅಂಪೈರ್ ನಿರ್ಧರಿಸುವ ಮೊದಲು ದೃಶ್ಯಗಳನ್ನು ಹೀಗೆ ವೀಕ್ಷಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಮೂರನೇ ಅಂಪೈರ್ ನಿರ್ಧಾರವನ್ನು ನಿಯಮಗಳನ್ವಯ ಸರಿ ಎಂದು ವಾದಿಸಿದ್ದಾರೆ. ಆದರೆ, ಪ್ರಮುಖ ಪಂದ್ಯಗಳಲ್ಲಿ ಕ್ರಿಕೆಟ್ನ ಇಂತಹ ಕೆಲ ನಿಯಮಗಳು ವಿವಾದಕ್ಕೀಡಾಗುವುದು ಮಾತ್ರ ತಪ್ಪಿಲ್ಲ.
-
Third umpire while making that decision of Shubman Gill.
— Virender Sehwag (@virendersehwag) June 10, 2023 " class="align-text-top noRightClick twitterSection" data="
Inconclusive evidence. When in doubt, it’s Not Out #WTC23Final pic.twitter.com/t567cvGjub
">Third umpire while making that decision of Shubman Gill.
— Virender Sehwag (@virendersehwag) June 10, 2023
Inconclusive evidence. When in doubt, it’s Not Out #WTC23Final pic.twitter.com/t567cvGjubThird umpire while making that decision of Shubman Gill.
— Virender Sehwag (@virendersehwag) June 10, 2023
Inconclusive evidence. When in doubt, it’s Not Out #WTC23Final pic.twitter.com/t567cvGjub
ಏನಿದು ವಿವಾದಿತ ಔಟ್: 444 ರನ್ಗಳ ಬೆಟ್ಟದಂತ ಗುರಿ ಬೆನ್ನಟ್ಟಿರುವ ಭಾರತ 2ನೇ ಇನಿಂಗ್ಸ್ನ ಆರಂಭದಲ್ಲಿ 18 ರನ್ ಗಳಿಸಿ ಆಡುತ್ತಿದ್ದ ಶುಭಮನ್ ಗಿಲ್ ಸ್ಲಿಪ್ನಲ್ಲಿದ್ದ ಕ್ಯಾಮರೂನ್ ಗ್ರೀನ್ಗೆ ಕ್ಯಾಚ್ ನೀಡಿದರು. ಎಡಕ್ಕೆ ಜಿಗಿದು ಗ್ರೀನ್ ಕ್ಯಾಚ್ ಹಿಡಿವ ವೇಳೆ ಚೆಂಡು ನೆಲಕ್ಕೆ ತಾಗಿದಂತಿತ್ತು. ಮೈದಾನದ ಅಂಪೈರ್ ಸಾಫ್ಟ್ ಸಿಗ್ನಲ್ ರದ್ದಾದ ಕಾರಣ ನೇರವಾಗಿ ಮೂರನೇ ಅಂಪೈರ್ ಮೊರೆ ಹೋಗಲಾಯಿತು. ಟಿವಿ ರಿಪ್ಲೈ ನೋಡಿದ ರಿಚರ್ಡ್ ಕೆಟಲ್ಬರೋ ಕೊನೆಗೆ ಔಟ್ ನೀಡಿದರು.
ಆದರೆ ದೃಶ್ಯಗಳಲ್ಲಿ ಚೆಂಡು ನೆಲಕ್ಕೆ ತಾಕಿದ್ದು ಸ್ಪಷ್ಟವಾಗಿತ್ತು. ಐಸಿಸಿಯ ನಿಯಮದನ್ವಯ ಆಟಗಾರ ಕ್ಯಾಚ್ ಪಡೆಯುವ ವೇಗದ ಆಧಾರದ ಮೇಲೆ ನೆಲಕ್ಕೆ ತಾಕುತ್ತಿದ್ದರೂ ಔಟ್ ಎಂದು ಪರಿಗಣಿಸಲಾಗುತ್ತದೆ. ಮಹತ್ವದ ಘಟ್ಟದಲ್ಲಿ ಈ ರೀತಿ ಆಗಿದ್ದು ಚರ್ಚೆಗೀಡು ಮಾಡಿದೆ.
ಇದನ್ನೂ ಓದಿ: Shubman Gill: ಗಿಲ್ ಔಟಾಗಲು ಹೊಸ ನಿಯಮ ಕಾರಣವೇ? ವಿಕೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಕ್ರಿಕೆಟಿಗ