ನವದೆಹಲಿ : ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 27 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ ಅಂಬಾಟಿ ರಾಯುಡುರನ್ನು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ಸೆಹ್ವಾಗ್ ತಮ್ಮ ದಾಟಿಯಲ್ಲೇ ಗುಣಗಾನ ಮಾಡಿದ್ದಾರೆ.
ರಾಯಡು ಶನಿವಾರ ನಡೆದ ಪಂದ್ಯದಲ್ಲಿ 27 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 266ರ ಸ್ಟ್ರೈಕ್ ರೇಟ್ನಲ್ಲಿ 72 ರನ್ ಬಾರಿಸಿ 218ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಆದರೆ, ಪೊಲಾರ್ಡ್(87) ಓವರ್ನಲ್ಲಿ 16ರನ್ ಸಿಡಿಸಿ ಸಿಎಸ್ಕೆ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.
-
72 of 27. Sab ulta hai in 3D mode.
— Virender Sehwag (@virendersehwag) May 1, 2021 " class="align-text-top noRightClick twitterSection" data="
The 3D glasses he ordered worked like how.
Absolutely brilliant hitting from Rayudu.
Chennai Romba Nalla this season. #CSKvMI pic.twitter.com/FVp8a7Q0KW
">72 of 27. Sab ulta hai in 3D mode.
— Virender Sehwag (@virendersehwag) May 1, 2021
The 3D glasses he ordered worked like how.
Absolutely brilliant hitting from Rayudu.
Chennai Romba Nalla this season. #CSKvMI pic.twitter.com/FVp8a7Q0KW72 of 27. Sab ulta hai in 3D mode.
— Virender Sehwag (@virendersehwag) May 1, 2021
The 3D glasses he ordered worked like how.
Absolutely brilliant hitting from Rayudu.
Chennai Romba Nalla this season. #CSKvMI pic.twitter.com/FVp8a7Q0KW
"27 ಎಸೆತಗಳಲ್ಲಿ 72. ತ್ರೀಡಿ(3D) ಮೋಡ್ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅವರು(ರಾಯುಡು) ಆರ್ಡರ್ ಮಾಡಿದ್ದ 3D ಗ್ಲಾಸ್ ಈ ರೀತಿ ಕೆಲಸ ಮಾಡುತ್ತಿದೆ. ರಾಯುಡು ಅವರಿಂದ ಅದ್ಭುತವಾದ ಹೊಡೆತಗಳು ಬಂದಿವೆ. ಈ ಆವೃತ್ತಿಯಲ್ಲಿ ಚೆನ್ನೈ ತುಂಬ ಉತ್ತಮ ಸೀಸನ್ ಹೊಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.
2019ರ ಏಕದಿನ ವಿಶ್ವಕಪ್ನಲ್ಲಿ ಅಂಬಾಟಿ ರಾಯುಡು ಬದಲಿಗೆ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ವೇಳೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್, ಶಂಕರ್ ಅವರನ್ನು ಮೂರು ಆಯಾಮಗಳಲ್ಲಿ ಆಡುವ ಆಟಗಾರ(‘three dimensional player-3D) ಅದಕ್ಕಾಗಿ ರಾಯುಡು ಬದಲಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದಿದ್ದರು.
ಇದಕ್ಕೆ ಕೋಪಗೊಂಡಿದ್ದ ಅಂಬಾಟಿ ರಾಯಡು ವಿಶ್ವಕಪ್ ವೀಕ್ಷಿಸಲು ಈಗಷ್ಟೇ ಹೊಸ 3D ಗ್ಲಾಸ್ ಆರ್ಡರ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರಿ ವೈರಲ್ ಆಗಿತ್ತು. ಸುಮಾರು ಒಂದು ಲಕ್ಷ ಮಂದಿ ಈ ಟ್ವೀಟ್ ಲೈಕ್ ಮಾಡಿದ್ದರು.
ಇದನ್ನು ಓದಿ:ತೀವ್ರ ಹೊಟ್ಟೆ ನೋವು, ಡೆಲ್ಲಿ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ಕೆ ಎಲ್ ರಾಹುಲ್ ದಾಖಲು