ಲಖನೌ (ಉತ್ತರ ಪ್ರದೇಶ): ಭಾರತ ವಿಶ್ವಕಪ್ ಕ್ರಿಕೆಟ್ ತಂಡ ಪ್ರಕಟವಾದ ಸಂದರ್ಭದಲ್ಲಿ, ಅನುಭವದ ಕೊರತೆಯ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಹಾಸ್ಯಭರಿತವಾಗಿ ಪ್ರತಿಕ್ರಿಯಿಸುತ್ತಾ "ವಿಶ್ವಕಪ್ ವೇಳೆಗೆ ಸಾಧ್ಯವಾದಲ್ಲಿ ಶರ್ಮಾ ಮತ್ತು ಕೊಹ್ಲಿ ಬೌಲಿಂಗ್ ಮಾಡುತ್ತಾರೆ" ಎಂದಿದ್ದರು. ಇದೇ ವೇಳೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಅವರಿಗೆ ಮನವರಿಕೆ ಮಾಡಿದ್ದೇವೆ ಎಂದೂ ಸಹ ಹೇಳಿದ್ದರು. ಈ ಮಾತು ಈಗ ನಿಜವಾದಂತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡು ಮೈದಾನದಿಂದ ತೆರಳಿದಾಗ ಅವರ ಓವರ್ ಅನ್ನು ವಿರಾಟ್ ಕೊಹ್ಲಿ ಮುಂದುವರೆಸಿದ್ದರು. ಸುಮಾರು 6 ವರ್ಷಗಳ ನಂತರ ಕೊಹ್ಲಿ ಬೌಲಿಂಗ್ ಮಾಡಿದ್ದರು. ಈಗ 'ರನ್ ಮಷಿನ್' ವಿಕೆಟ್ ಉರುಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಧರ್ಮಶಾಲಾದಿಂದ ಲಖನೌಗೆ ಬಂದಿರುವ ತಂಡ ನೆಟ್ಸ್‌ನಲ್ಲಿ ಬೆವರಿಳಿಸುತ್ತಿದೆ. ಆಟಗಾರರು ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ವಿರಾಟ್ ಸೇರಿದಂತೆ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡುತ್ತಿರುವುದನ್ನು ಕಾಣಬಹುದು.
ಹಾರ್ದಿಕ್ ಪಾಂಡ್ಯ ಅವರ ಕೊರತೆ ನೀಗಿಸಲು ತಂಡದಲ್ಲಿ ಹೊಸ ಬೌಲರ್ ಅಥವಾ ಆಲ್ರೌಂಡರ್ನ ಹುಡುಕಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆ ಈ ವಿಡಿಯೋದಿಂದ ಹುಟ್ಟಿಕೊಂಡಿದೆ. ಇನ್ಸ್ಟಾಗ್ರಾಮ್ ಕ್ಯಾಪ್ಶನ್ನಲ್ಲಿ ಬಿಸಿಸಿಐ, "ಪ್ರತಿಯೊಬ್ಬರು ಬೌಲರ್ ಆಗಲು ಪ್ರಯತ್ನಿಸಿದ್ದಾರೆ. ಪ್ರತಿಯೊಬ್ಬರೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ (Everyone trying their ‘Luck’now isn’t it)" ಎಂದು ಬರೆದುಕೊಂಡಿದೆ. ವಿರಾಟ್ ತಮ್ಮ ಎಂದಿನ ವಿಶೇಷ ಆ್ಯಕ್ಷನ್ ಮೂಲಕ ಬೌಲಿಂಗ್ ಮಾಡಿದರೆ, ಗಿಲ್ ಸ್ಪಿನ್ಗೆ ಪ್ರಯತ್ನಿಸಿದರು. ಬುಮ್ರಾ ಎಡಗೈ ಬೌಲಿಂಗ್ ಪ್ರಯತ್ನಿಸಿದರೆ, ಕುಲ್ದೀಪ್ ಮತ್ತು ರವೀಂದ್ರ ಜಡೇಜಾ ವೇಗದ ಬೌಲಿಂಗ್ ಮಾಡಲು ಮುಂದಾದರು.
-
💬 "Hopefully Sharma and Kohli can roll some arm over in the World Cup" 😃#TeamIndia captain Rohit Sharma at his inimitable best! 👌#AsiaCup2023 | @imRo45 pic.twitter.com/v1KKvOLcnq
— BCCI (@BCCI) August 21, 2023 " class="align-text-top noRightClick twitterSection" data="
">💬 "Hopefully Sharma and Kohli can roll some arm over in the World Cup" 😃#TeamIndia captain Rohit Sharma at his inimitable best! 👌#AsiaCup2023 | @imRo45 pic.twitter.com/v1KKvOLcnq
— BCCI (@BCCI) August 21, 2023💬 "Hopefully Sharma and Kohli can roll some arm over in the World Cup" 😃#TeamIndia captain Rohit Sharma at his inimitable best! 👌#AsiaCup2023 | @imRo45 pic.twitter.com/v1KKvOLcnq
— BCCI (@BCCI) August 21, 2023
ವಿಶ್ವಕಪ್ನಲ್ಲಿ ಭಾರತ ತಂಡ ಸತತ ಐದು ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಕ್ಟೋಬರ್ 29ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಲಖನೌನ ಎಕಾನಾ ಕ್ರಿಡಾಂಗಣದಲ್ಲಿ ಪಂದ್ಯ ನಡೆಯಲಿದೆ. 8 ಆಟಗಾರರವರೆಗೂ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಏಕೈಕ ಗೆಲುವು ಕಂಡಿದ್ದು, ಪ್ಲೇ ಆಫ್ ಪ್ರವೇಶ ಬಹುತೇಕ ಅನುಮಾನ. ಹೀಗಿರುವಾಗ ಆಂಗ್ಲರು ಅಜೇಯ ಟೀಮ್ ಇಂಡಿಯಾ ಮೇಲೆ ಜಯ ದಾಖಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಭಾರತ?