ವಿರಾಟ್ ಕೊಹ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಗಳಿದ್ದಾರೆ. ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಹೆಚ್ಚು ಟ್ರೆಂಡಿಂಗ್ನಲ್ಲಿದ್ದ ಆಟಗಾರನೂ ಇವರೇ ಎಂಬ ಅಂಕಿ-ಅಂಶ ದೊರೆತಿದೆ. ಎಂ.ಎಸ್. ಧೋನಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ ಅವರ ಫ್ಯಾನ್ ಬೇಸ್ ಮಾತ್ರ ಕಡಿಮೆ ಇಲ್ಲ.
ಐಪಿಎಲ್ ಸಂದರ್ಭದಲ್ಲಿ ಕೊಹ್ಲಿ ಮಾತ್ರ ಧೋನಿಯನ್ನು ಸೋಷಿಯಲ್ ಮೀಡಿಯಾ ಟ್ರೆಂಡ್ನಲ್ಲಿ ಹಿಂದಿಕ್ಕಿದ್ದಾರೆ. ಸಾಮಾಜಿಕ ಮಾಧ್ಯಮದ ಹೆಚ್ಚು ಬಳಕೆಯಾದ ಹೆಸರಿನಲ್ಲಿ ಕೊಹ್ಲಿ ಟಾಪರ್ ಆಗಿದ್ದಾರೆ. ಈ ಬಗ್ಗೆ ಐಪಿಜಿ ಮೀಡಿಯಾಬ್ರಾಂಡ್ಸ್ ಇಂಡಿಯಾದ ಡಿಜಿಟಲ್ನ ಅಂಗ ಇಂಟರಾಕ್ಟಿವ್ ಅವೆನ್ಯೂಸ್ ವರದಿ ಮಾಡಿದೆ.
-
In today’s Economic Times – highlights from our Social Media Listening Report on IPL 2023!https://t.co/Tx51Hh2fey#IPL2023 #sociallistening #viratkohli #socialmentions #ET pic.twitter.com/6HUfdihhiV
— Interactive Avenues (@weRinteractive) June 26, 2023 " class="align-text-top noRightClick twitterSection" data="
">In today’s Economic Times – highlights from our Social Media Listening Report on IPL 2023!https://t.co/Tx51Hh2fey#IPL2023 #sociallistening #viratkohli #socialmentions #ET pic.twitter.com/6HUfdihhiV
— Interactive Avenues (@weRinteractive) June 26, 2023In today’s Economic Times – highlights from our Social Media Listening Report on IPL 2023!https://t.co/Tx51Hh2fey#IPL2023 #sociallistening #viratkohli #socialmentions #ET pic.twitter.com/6HUfdihhiV
— Interactive Avenues (@weRinteractive) June 26, 2023
ಐಪಿಎಲ್ 2023ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಬಳಕೆಯಾದ ಉಲ್ಲೇಖಗಳಲ್ಲಿ ವಿರಾಟ್ ಹೆಸರು ಹೆಚ್ಚಾಗಿದೆ. 7 ಮಿಲಿಯನ್ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಹೆಸರು ಗೋಚರಿಸಿದೆ. ಆರ್‌ಸಿಬಿ ಪ್ಲೇಆಫ್‌ನಿಂದ ಹೊರಗುಳಿದಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯೂ ಸೇರಿ 5ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ಗೆ (ಸಿಎಸ್ಕೆ) ಕಪ್ ಗೆಲ್ಲಿಸಿದ್ದ ಎಂಎಸ್ಡಿ 6 ವಿಲಿಯನ್ ಬಾರಿ ಉಲ್ಲೇಖ ಆಗಿದ್ದಾರೆ.
ಮುಂಬೈ ಇಂಡಿಯನ್ಸ್ (ಎಂಐ) ನಾಯಕ ರೋಹಿತ್ ಶರ್ಮಾ 3 ಮಿಲಿಯನ್ ಸಾಮಾಜಿಕ ಮಾಧ್ಯಮ ಉಲ್ಲೇಖಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ನ ರವೀಂದ್ರ ಜಡೇಜಾ, ಗುಜರಾತ್ ಟೈಟಾನ್ಸ್‌ನ ಶುಭ್‌ಮನ್ ಗಿಲ್ ಮತ್ತು ಎಂಐನ ಸೂರ್ಯಕುಮಾರ್ ಯಾದವ್ ತಲಾ 1 ಮಿಲಿಯನ್ ಸಾಮಾಜಿಕ ಮಾಧ್ಯಮದ ಉಲ್ಲೇಖಗಳನ್ನು ಹೊಂದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ರಿಂಕು ಸಿಂಗ್ ಅವರು ಸಿಕ್ಸರ್‌ಗಳ ಮೂಲಕ ಪಂದ್ಯ ಗೆಲ್ಲಿಸಿದ್ದರು. ಅವರ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಸಾಮಾಜಿಕ ಮಾಧ್ಯಮ ಹೆಚ್ಚಿನ ಸಂಖ್ಯೆಯ ಲೈಕ್‌ಗಳನ್ನು ಪಡೆದುಕೊಂಡಿದೆ. ಗೌತಮ್ ಗಂಭೀರ್ ಮತ್ತು ನವೀನ್ ಉಲ್-ಹಕ್ ಅವರೊಂದಿಗಿನ ಕೊಹ್ಲಿಯ ವಿವಾದಾತ್ಮಕ ವಾದವು 270 ಸಾವಿರ ಬಾರಿ ಮತ್ತೆ ಬಳಸಿ ಉಲ್ಲೇಖಿಸಲಾಗಿದೆ ಮತ್ತು 4 ಮಿಲಿಯನ್ ವೀಕ್ಷಣೆ ಗಳಿಸಿದೆ.
ಸ್ಪಾಟ್‌ಲೈಟ್‌ನಲ್ಲಿರುವ ಉದಯೋನ್ಮುಖ ಆಟಗಾರರಲ್ಲಿ ರಿಂಕು ಸಿಂಗ್ 9,40,000, ಯಶಸ್ವಿ ಜೈಸ್ವಾಲ್ 250,000 ಮತ್ತು ತಿಲಕ್ ವರ್ಮಾ 190,000 ಉಲ್ಲೇಖಗಳನ್ನು ಪಡೆದುಕೊಂಡಿದ್ದಾರೆ ಐಪಿಎಲ್ 2023 ಪಂದ್ಯಾವಳಿಯ ಅತ್ಯಂತ ಹೆಚ್ಚು ಜನಪ್ರಿಯ ಆವೃತ್ತಿಯಾಗಿದೆ. ಫ್ರಾಂಚೈಸಿಗಳು ಸಾಮಾಜಿಕ ಮಾಧ್ಯಮದಲ್ಲಿ 42 ಮಿಲಿಯನ್ ಉಲ್ಲೇಖಗಳಾಗಿದ್ದು, 460 ಮಿಲಿಯನ್ ವೀಕ್ಷಣೆ ಕಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ 7.6 ಮಿಲಿಯನ್ ನಮೂದಿಸಲ್ಪಟ್ಟರೆ, 98 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ನಂತರ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಇದೆ.
ಇದನ್ನೂ ಓದಿ: West Indies tour: ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ- ಟಿ20 ತಂಡದಲ್ಲಿ ರಿಂಕು ಸಿಂಗ್‌ಗೆ ಅವಕಾಶ ಸಾಧ್ಯತೆ