ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಟಗಾರ, ರನ್ ಮಿಷನ್ ಖ್ಯಾತಿಯ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅತಿ ವೇಗವಾಗಿ 25 ಸಾವಿರ ರನ್ಗಳು ಪೂರೈಸಿದ ವಿಶ್ವದ ಮೊದಲ ಕ್ರಿಕೆಟಗ ಎಂಬ ಹೆಗ್ಗಳಿಕೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ವಿರಾಟ್ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: 2ನೇ ಟೆಸ್ಟ್ ಗೆದ್ದು ಬೀಗಿದ ಭಾರತ; ಜಡೇಜಾ-ಅಶ್ವಿನ್ ಬಿರುಗಾಳಿಗೆ ಆಸೀಸ್ ಉಡೀಸ್
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ನ ವೃತ್ತಿ ಜೀವನದ 549 ಇನ್ನಿಂಗ್ಸ್ ಆಡಿದ ವಿರಾಟ್ 25 ಸಾವಿರ ರನ್ಗಳ ಪೂರೈಸಿದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 577 ಇನ್ನಿಂಗ್ಸ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 588 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
-
𝐌𝐢𝐥𝐞𝐬𝐭𝐨𝐧𝐞 𝐔𝐧𝐥𝐨𝐜𝐤𝐞𝐝! 🔓
— BCCI (@BCCI) February 19, 2023 " class="align-text-top noRightClick twitterSection" data="
Congratulations @imVkohli on reaching 2️⃣5️⃣0️⃣0️⃣0️⃣ international runs in international cricket! 🫡
Simply sensational 👏🏻👏🏻#TeamIndia | #INDvAUS | @mastercardindia pic.twitter.com/Ka4XklrKNA
">𝐌𝐢𝐥𝐞𝐬𝐭𝐨𝐧𝐞 𝐔𝐧𝐥𝐨𝐜𝐤𝐞𝐝! 🔓
— BCCI (@BCCI) February 19, 2023
Congratulations @imVkohli on reaching 2️⃣5️⃣0️⃣0️⃣0️⃣ international runs in international cricket! 🫡
Simply sensational 👏🏻👏🏻#TeamIndia | #INDvAUS | @mastercardindia pic.twitter.com/Ka4XklrKNA𝐌𝐢𝐥𝐞𝐬𝐭𝐨𝐧𝐞 𝐔𝐧𝐥𝐨𝐜𝐤𝐞𝐝! 🔓
— BCCI (@BCCI) February 19, 2023
Congratulations @imVkohli on reaching 2️⃣5️⃣0️⃣0️⃣0️⃣ international runs in international cricket! 🫡
Simply sensational 👏🏻👏🏻#TeamIndia | #INDvAUS | @mastercardindia pic.twitter.com/Ka4XklrKNA
25,000 ರನ್ ಬಾರಿಸಿದ 6ನೇ ಆಟಗಾರ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 25 ಸಾವಿರ ರನ್ ಬಾರಿಸಿ ಆರನೇ ಆಟಗಾರರ ಕೊಹ್ಲಿ ಆಗಿದ್ದಾರೆ. ಆದರೆ, ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆಯನ್ನು ವಿರಾಟ್ ಮಾಡಿದ್ದಾರೆ. ಸಚಿನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟಾರೆ 34,437 ರನ್ಗಳು ಬಾರಿಸಿದ್ದು, ಅತಿ ಹೆಚ್ಚು ಸಿಡಿಸಿ ಆಟಗಾರರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ (28,016) ಮತ್ತು ರಿಕಿ ಪಾಂಟಿಂಗ್ (27,483) ನಂತರದ ಎರಡು ಸ್ಥಾನಗಳನ್ನು ಹೊಂದಿದ್ದಾರೆ. ಇವರ ನಂತರದಲ್ಲಿ ಶ್ರೀಲಂಕಾದ ಮತ್ತೊಬ್ಬ ಆಟಗಾರ ಮಹೇಲಾ ಜಯವರ್ಧನೆ (25,957), ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ (25,534) ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಈ ಸಾಲಿಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದು, ಒಟ್ಟಾರೆ 25,002 ಬಾರಿಸಿದ್ದಾರೆ.
-
Yet another milestone to Virat Kohli's name ⭐#WTC23 | #INDvAUS pic.twitter.com/XnnNZneik3
— ICC (@ICC) February 19, 2023 " class="align-text-top noRightClick twitterSection" data="
">Yet another milestone to Virat Kohli's name ⭐#WTC23 | #INDvAUS pic.twitter.com/XnnNZneik3
— ICC (@ICC) February 19, 2023Yet another milestone to Virat Kohli's name ⭐#WTC23 | #INDvAUS pic.twitter.com/XnnNZneik3
— ICC (@ICC) February 19, 2023
ಮೂರು ಮಾದರಿಯಲ್ಲಿ ಎಷ್ಟು ರನ್?: ಸ್ಟೈಲಿಶ್ ಬಲಗೈ ಬ್ಯಾಟರ್ ಆಗಿರುವ 34 ವರ್ಷದ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಮತ್ತು 20-ಟಿ ಸೇರಿ ಮೂರು ಮಾದರಿಗಳಲ್ಲಿ 492 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 106 ಟೆಸ್ಟ್ ಪಂದ್ಯಗಳಲ್ಲಿ 180 ಇನ್ನಿಂಗ್ಸ್ ಆಡಿರುವ ವಿರಾಟ್, 48.49ರ ಸರಾಸರಿಯಲ್ಲಿ 8,195 ರನ್ಗಳನ್ನು ಬಾರಿಸಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ 262 ಇನ್ನಿಂಗ್ಸ್ ಆಡಿ 57.70ರ ಸರಾಸರಿಯಲ್ಲಿ 12,809 ಸಿಡಿಸಿದ್ದಾರೆ. 20-ಟಿ ಮಾದರಿಯಲ್ಲಿ 115 ಪಂದ್ಯಗಳ ಪೈಕಿ 107 ಇನ್ಸಿಂಗ್ಸ್ ಆಡಿರುವ ಕೊಹ್ಲಿ 52.74ರ ಸರಾಸರಿಯಲ್ಲಿ 4,008 ಕಲೆ ಹಾಕಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇನಿಂಗ್ಸ್‌ನಲ್ಲಿ ಕೊಹ್ಲಿ ನಾಲ್ಕು ಬೌಂಡರಿಗಳ ಸಮೇತ 44 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ಮೂರು ಬೌಂಡರಿಗಳೊಂದಿಗೆ 20 ರನ್ ಬಾರಿಸಿದ್ದರು.
ಇದನ್ನೂ ಓದಿ: ಅಂಪೈರ್ ನಿತಿನ್ ಮೆನನ್ ಬಂಧಿಸಿ: ವಿರಾಟ್ ಕೊಹ್ಲಿ ವಿವಾದಿತ ಔಟ್ಗೆ ನೆಟ್ಟಿಗರ ಆಕ್ರೋಶ